ಬ್ರೇಕಿಂಗ್ ನ್ಯೂಸ್
05-03-24 01:41 pm HK News Desk ದೇಶ - ವಿದೇಶ
ನವದೆಹಲಿ, ಮಾ 05: ಹೋಟೆಲ್ ನಲ್ಲಿ ಊಟ ಮುಗಿಸಿ ಮೌತ್ ಫ್ರೆಶ್ನರ್ ತಿಂದ ಐವರು ರಕ್ತವಾಂತಿ ಮಾಡಿಕೊಂಡಿರುವ ಆಘಾತಕಾರಿ ಘಟನೆ ಗುರುಗ್ರಾಮ್ ಕೆಫೆಯಲ್ಲಿ ನಡೆದಿದೆ.
ಅಂಕಿತ್ ಕುಮಾರ್ ಪತ್ನಿ ಹಾಗೂ ಸ್ನೇಹಿತರು ಗುರುಗ್ರಾಮ್ ಸೆಕ್ಟರ್ 90ರಲ್ಲಿರುವ ಲಾಫೋರೆಸ್ಟಾ ಕೆಫೆಗೆ ಹೋಗಿದ್ದರು. ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ, ಕುಮಾರ್, ಪತ್ನಿ ಹಾಗೂ ಆತನ ಗೆಳೆಯರು ಅಳುತ್ತಾ, ಕೂಗಾಡುತ್ತಿದ್ದು, ಎಲ್ಲರ ಬಾಯಿಂದ ರಕ್ತ ಸುರಿಯುತ್ತಿರುವುದು ದಾಖಲಾಗಿದೆ.
ನಮಗೆ ಇದು ಏನೂ ಅಂತ ಅರ್ಥವಾಗ್ತಿಲ್ಲ ಮೌತ್ ಫ್ರೆಶ್ನರ್ ನಲ್ಲಿ ಏನು ಮಿಶ್ರಣ ಮಾಡಿದ್ದಾರೋ. ನಾವೆಲ್ಲರೂ ರಕ್ತವಾಂತಿ ಮಾಡಿಕೊಂಡಿದ್ದೇವೆ. ನಮ್ಮ ಬಾಯಿಯೊಳಗೆ ಬೆಂಕಿ ಬಿದ್ದಂಗೆ ಆಯ್ತು ಎಂದು ಘಟನೆಗೆ ಸಂಬಂಧಿಸಿ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ನಾವು ರೆಸ್ಟೋರೆಂಟ್ ನವರು ಕೊಟ್ಟ ಮೌತ್ ಫ್ರೆಶ್ನರ್ ಪ್ಯಾಕೇಟ್ ವೈದ್ಯರಿಗೆ ತೋರಿಸಿದ್ದು, ಅದು ಡ್ರೈ ಐಸ್ ಎಂದು ಗೊತ್ತಾಗಿದೆ. ವೈದ್ಯರ ಹೇಳಿಕೆ ಪ್ರಕಾರ, ಇದು ಭಯಾನಕ ಆಸಿಡ್ ಆಗಿದ್ದು ಜೀವಕ್ಕೆ ಬಹಳಷ್ಟು ಅಪಾಯಕಾರಿ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮೊದಲು ಐವರಿಗೆ ನಾಲಗೆಯಲ್ಲಿ ಉರಿ ಕಾಣಿಸಿಕೊಂಡಿದ್ದು, ಬಳಿಕ ರಕ್ತವಂತಿ ಶುರುವಾಗಿದೆ. ಬಾಯಿ ಉರಿ ಶಮನಕ್ಕೆ ಎಷ್ಟೇ ನೀರು ಕುಡಿದಿದ್ದರು ಪ್ರಯೋಜನವಾಗಿಲ್ಲ. ಐವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದ ಬಂದಿದೆ.
Family of 5 , vomit blood after eating dry ice as mouth freshner in Gurgaon.
— #BharatRatnaPV (@bharathbunny27) March 4, 2024
😱😱pic.twitter.com/sBQteg2HUd
Five people began vomiting blood and complained of cuts on their tongue after eating mouth freshener at a Gurugram café. According to an NDTV report, Ankit Kumar, his wife and their friends visited Laforestta Cafe in Gurugram on March 2, where they took ill after eating the mouth freshener.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm