ಬ್ರೇಕಿಂಗ್ ನ್ಯೂಸ್
06-03-24 04:20 pm HK News Desk ದೇಶ - ವಿದೇಶ
ಕೊಲ್ಕತ್ತಾ, ಮಾ.6: ದೇಶದಲ್ಲಿ ಇದೇ ಮೊದಲ ಬಾರಿಗೆ ನದಿಯ ಅಡಿಭಾಗದಲ್ಲಿ ಸುರಂಗ ಕೊರೆದು ಅದರಲ್ಲಿ ಮೆಟ್ರೋ ರೈಲನ್ನು ಸಂಚರಿಸುವಂತೆ ಮಾಡಲಾಗಿದ್ದು, ಅಪೂರ್ವ ಯೋಜನೆಯನ್ನು ಕೊಲ್ಕತ್ತಾ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದ್ದಾರೆ.
ಕೊಲ್ಕತ್ತಾ ಮತ್ತು ಹೌರಾ ನಗರವನ್ನು ಪೂರ್ವ- ಪಶ್ಚಿಮಕ್ಕೆ ಸಂಪರ್ಕಿಸುವ ಮೆಟ್ರೋ ಯೋಜನೆ ಇದಾಗಿದ್ದು, 4.8 ಕಿಮೀ ಉದ್ದಕ್ಕೆ ಸುರಂಗ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಈ ಭಾಗದ ಆರು ಮೆಟ್ರೋ ನಿಲ್ದಾಣಗಳ ಪೈಕಿ ಮೂರು ನಿಲ್ದಾಣಗಳು ಸುರಂಗದ ಒಳಗಡೆಯೇ ಇದೆ. ಹೌರಾ ಮೈದಾನ್ ಮತ್ತು ಇಸ್ಪ್ಲಾನೇಡ್ ನಿಲ್ದಾಣಗಳ ನಡುವೆ 4.8 ಕಿಮೀ ಅಂತರ ಇದೆ. ಇದರ ನಡುವೆ 1.2 ಕಿಮೀ ಅಂತರದಲ್ಲಿ ಹೂಗ್ಲಿ ನದಿಯಿದ್ದು, ಅದರ ಅಡಿಭಾಗದಲ್ಲಿ 30 ಮೀಟರ್ ಆಳದಲ್ಲಿ ಮೆಟ್ರೋ ಸುರಂಗ ಹಾದು ಹೋಗಿದೆ.







ಪ್ರಧಾನಿ ಮೋದಿ ಈ ಸುರಂಗ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದಲ್ಲದೆ, ಅದೇ ರೈಲಿನಲ್ಲಿ ಮಕ್ಕಳ ಜೊತೆಗೆ ಕುಳಿತು ಸಂಚಾರ ಮಾಡಿದ್ದಾರೆ. ಶಾಲಾ ಮಕ್ಕಳ ಜೊತೆಗೆ ಕುಳಿತು ಸಂವಾದ ನಡೆಸುವ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಮೆಟ್ರೋ ಸುರಂಗ ಮಾರ್ಗವನ್ನು 4138 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ದೇಶದ ಮೊದಲ ನೀರಿನಾಳದಲ್ಲಿ ನಿರ್ಮಿಸಲ್ಪಟ್ಟ ರೈಲು ಮಾರ್ಗ ಎಂದೆನಿಸಿದೆ.
ಪ್ರಧಾನಿ ಮೋದಿ ಒಟ್ಟು 15450 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಇದೇ ಸಂದರ್ಭ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಮೋದಿ ಮೋದಿ ಮತ್ತು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಅಲ್ಲದೆ, ರಸ್ತೆ ಉದ್ದಕ್ಕೂ ಸೇರಿದ್ದ ಜನರು ಮೋದಿಗೆ ಜೈಕಾರ ಹಾಕಿದ್ದಾರೆ. ಜನರನ್ನು ನೋಡಿ ಉತ್ಸಾಹಗೊಂಡ ಮೋದಿ ಕಾರಿನಲ್ಲೇ 12 ಕಿಮೀ ಉದ್ದಕ್ಕೆ ರಸ್ತೆಯಲ್ಲಿ ಸಂಚರಿಸಿದ್ದಾರೆ.
Prime Minister Narendra Modi on Wednesday inaugurated India's first underwater metro services, an engineering marvel in itself.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm