ಬ್ರೇಕಿಂಗ್ ನ್ಯೂಸ್
26-03-24 10:42 pm HK News Desk ದೇಶ - ವಿದೇಶ
ನವದೆಹಲಿ, ಮಾ.26: ಬಿಜೆಪಿಯಿಂದ ಟಿಕೆಟ್ ವಂಚಿತವಾಗಿರುವ ಗಾಂಧಿ ಕುಟುಂಬದ ಕುಡಿ, ಮೂರು ಬಾರಿಯ ಸಂಸದ ವರುಣ್ ಗಾಂಧಿಗೆ ಕಾಂಗ್ರೆಸ್ ಆಫರ್ ನೀಡಿದೆ. ವರುಣ್ ಗಾಂಧಿ ಕಾಂಗ್ರೆಸ್ ಸೇರುವುದಾದರೆ ಮುಕ್ತವಾಗಿ ಸ್ವಾಗತಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಗಾಂಧಿ ಕುಟುಂಬದ ಕುಡಿ ಎನ್ನುವ ಕಾರಣಕ್ಕಾಗಿಯೇ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎಂದು ಅಧೀರ್ ರಂಜನ್ ಹೇಳಿದ್ದಾರೆ. ವರುಣ್ ಗಾಂಧಿ ಇನ್ನೂ ತನ್ನ ತೀರ್ಮಾನ ಪ್ರಕಟಿಸಿಲ್ಲ.
ಎರಡು ದಿನಗಳ ಹಿಂದೆ ಬಿಜೆಪಿ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿಯಲ್ಲಿ ವರುಣ್ ಗಾಂಧಿ ಪ್ರತಿನಿಧಿಸುತ್ತಿದ್ದ ಫಿಲಿಬಿಟ್ ಕ್ಷೇತ್ರದಿಂದ ಕಾಂಗ್ರೆಸಿನಿಂದ ಬಂದಿದ್ದ ಜತಿನ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ. ಆಮೂಲಕ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದ ವರುಣ್ ಗಾಂಧಿಗೆ ಖಡಕ್ ಸಂದೇಶ ರವಾನಿಸಿದೆ. ಇದೇ ವೇಳೆ, ವರುಣ್ ತಾಯಿ ಮನೇಕಾ ಗಾಂಧಿಗೆ ಸುಲ್ತಾನ್ ಪುರ ಕ್ಷೇತ್ರದಿಂದ ಟಿಕೆಟ್ ನೀಡಿದೆ.

ಹಾಗೆ ನೋಡಿದರೆ, ಸುಲ್ತಾನ್ ಪುರ ಮತ್ತು ಫಿಲಿಬಿಟ್ ಕ್ಷೇತ್ರ ಮನೇಕಾ ಮತ್ತು ಪುತ್ರ ವರುಣ್ ಗಾಂಧಿ ಅವರೇ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳು. 1996ರಿಂದ ಮನೇಕಾ ಗಾಂಧಿ ಫಿಲಿಬಿಟ್ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದರು. 2009ರಲ್ಲಿ ಮಗನಿಗೆ ತನ್ನ ಕ್ಷೇತ್ರ ಬಿಟ್ಟುಕೊಟ್ಟು ಸುಲ್ತಾನ್ ಪುರದಲ್ಲಿ ಮನೇಕಾ ನಿಂತು ಗೆದ್ದಿದ್ದರು. 2014ರಲ್ಲಿ ತಮ್ಮ ಕ್ಷೇತ್ರಗಳನ್ನು ಅದಲು ಬದಲುಗೊಳಿಸಿ ಮತ್ತೆ ಫಿಲಿಬಿಟ್ ಕ್ಷೇತ್ರದಿಂದಲೇ ಮನೇಕಾ ಸ್ಪರ್ಧಿಸಿದ್ದರು. ವರುಣ್ ಸುಲ್ತಾನ್ ಪುರವನ್ನು ಪ್ರತಿನಿಧಿಸಿದ್ದರು. 2019ರಲ್ಲಿ ಮತ್ತೆ ಫಿಲಿಬಿಟ್ ಕ್ಷೇತ್ರದಿಂದಲೇ ವರುಣ್ ಗಾಂಧಿ ಸ್ಪರ್ಧಿಸಿ 2.50 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಮತ್ತು ಕೇಂದ್ರ ಸರಕಾರದ ಕೆಲವು ನಿರ್ಧಾರಗಳನ್ನು ವಿರೋಧಿಸಿ ವರುಣ್ ಗಾಂಧಿ ಅಂಕಣ ಬರೆದಿದ್ದರು. ಇದಲ್ಲದೆ, ವರುಣ್ ಗಾಂಧಿ ಸ್ವತಃ ಪಕ್ಷದ ಚಟುವಟಿಕೆಯಿಂದ ದೂರ ನಿಂತಿದ್ದರು. 2013ರಲ್ಲಿ ಬಿಜೆಪಿ ಜನರಲ್ ಸೆಕ್ರಟರಿಯಾಗಿದ್ದ ವರುಣ್ ಕೇಂದ್ರ ಕಾರ್ಯಕಾರಿಣಿ ಸದಸ್ಯತ್ವದಿಂದಲೂ ಹೊರಬಿದ್ದಿದ್ದರು.
![]()
2021ರಲ್ಲಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಬಿಜೆಪಿ ಸೇರಿದ್ದು, ಈ ಬಾರಿ ತಾಯಿ- ಮಗ ಸುದೀರ್ಘ ಕಾಲದಿಂದ ಪ್ರತಿನಿಧಿಸುತ್ತಿದ್ದ ಫಿಲಿಬಿಟ್ ಲೋಕಸಭೆ ಕ್ಷೇತ್ರದ ಟಿಕೆಟನ್ನು ಪಡೆದಿದ್ದಾರೆ. ಈ ಬಾರಿ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ಸಿಗಲ್ಲ ಎನ್ನುವ ಮಾತು ತಿಂಗಳ ಹಿಂದೆಯೇ ಕೇಳಿಬಂದಿತ್ತು. ಅಲ್ಲದೆ, ಬಿಜೆಪಿ ಟಿಕೆಟ್ ಸಿಗದಿದ್ದರೆ ವರುಣ್ ಪಕ್ಷೇತರ ನಿಲ್ಲುತ್ತಾರೆ ಎನ್ನುವ ವದಂತಿಯೂ ಹರಡಿತ್ತು. ಆದರೆ ವರುಣ್ ಗಾಂಧಿ ಈ ಬಗ್ಗೆ ಯಾವುದೇ ಹೇಳಿಕೆಯನ್ನೂ ನೀಡಿರಲಿಲ್ಲ. ನಾಮಪತ್ರ ಸಲ್ಲಿಕೆಗೆ
ಇನ್ನೆರಡೇ ದಿನ ಬಾಕಿಯಿದ್ದು ವರುಣ್ ಮಾತ್ರ ತುಟಿ ಬಿಚ್ಚಿಲ್ಲ. ವಾರದ ಹಿಂದೆಯೇ ಎರಡು ಸೆಟ್ ನಾಮಪತ್ರಗಳನ್ನು ತಂದಿರಿಸಿದ್ದ ವರುಣ್ ಗಾಂಧಿ ತನ್ನ ಬೆಂಬಲಿಗರಿಗೆ ಚುನಾವಣೆ ಎದುರಿಸಲು ಸಜ್ಜಾಗುವಂತೆ ಸೂಚನೆ ನೀಡಿದ್ದರು. ಪ್ರತಿ ಗ್ರಾಮದಲ್ಲಿ ಎರಡು ಕಾರು ಮತ್ತು ಹತ್ತು ಬೈಕ್ ಗಳನ್ನು ಆಯ್ದುಕೊಳ್ಳುವಂತೆ ಹೇಳಿದ್ದರು. ಆದರೆ, ಈಗ ಟಿಕೆಟ್ ಸಿಗದೇ ಇರುವುದರಿಂದ ಧೃತಿಗೆಟ್ಟಿದ್ದಾರೆ.
ಫಿಲಿಬಿಟ್ ಆರು ಅಸೆಂಬ್ಲಿ ಕ್ಷೇತ್ರಗಳನ್ನು ಹೊಂದಿದ್ದು ಅದರಲ್ಲಿ ನಾಲ್ಕರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಬಿಜೆಪಿ ಪ್ರಾಬಲ್ಯದ ಕ್ಷೇತ್ರವಾಗಿ ಬದಲಾಗಿದೆ. ಈ ನಡುವೆ, ಪಕ್ಷೇತರ ಸ್ಪರ್ಧಿಸುತ್ತಾರೋ, ಕಾಂಗ್ರೆಸ್ ಸೇರುತ್ತಾರೋ ಅನ್ನುವ ಕುತೂಹಲ ಸೃಷ್ಟಿಯಾಗಿದೆ. ಉತ್ತರ ಪ್ರದೇಶದ ಸ್ಥಳೀಯ ವಾಹಿನಿಗಳ ಪ್ರಕಾರ, ಬಿಜೆಪಿ ಟಿಕೆಟ್ ತಪ್ಪಿರುವುದರಿಂದ ವರುಣ್ ನೊಂದಿದ್ದು, ಚುನಾವಣೆ ಸ್ಪರ್ಧೆಯಿಂದಲೇ ಹಿಂದೆ ಸರಿದು ಸೈಲಂಟ್ ಆಗಲಿದ್ದಾರಂತೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗನಾಗಿರುವ ವರುಣ್ ಗಾಂಧಿ ಮನೇಕಾ ಗಾಂಧಿಯ ಏಕೈಕ ಪುತ್ರ. ಇವರ ತಂದೆ ಸಂಜಯ್ ಗಾಂಧಿ, ವರುಣ್ ಗಾಂಧಿಗೆ ನಾಲ್ಕು ತಿಂಗಳ ಮಗುವಾಗಿರುವಾಗಲೇ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಮನೇಕಾ ಸುದೀರ್ಘ ಅವಧಿಯಲ್ಲಿ ನಿರಂತರ ಸಂಸದೆಯಾಗಿದ್ದು, ಇದೀಗ ತನ್ನ ಪ್ರೀತಿಯ ಮಗನ ರಾಜಕೀಯ ಭವಿಷ್ಯ ಡೋಲಾಯಮಾನ ಆಗಿರುವುದರಿಂದ ಚಿಂತಿತರಾಗಿದ್ದಾರೆ.
Senior Congress leader Adhir Ranjan Chowdhury on Tuesday claimed that Varun Gandhi was denied a Lok Sabha ticket by the BJP because of his connection with the Gandhi family and extended an invitation to him to join the grand old party. Chowdhury described Varun as a "dabang neta (strong leader)" and said he is a learned man with a clean image.
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
09-04-26 11:03 pm
HK News Staffer
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm