ಬ್ರೇಕಿಂಗ್ ನ್ಯೂಸ್
30-03-24 12:30 pm HK News Desk ದೇಶ - ವಿದೇಶ
ಚೆನ್ನೈ, ಮಾ 30: ತಮಿಳು ನಟ ಡೇನಿಯಲ್ ಬಾಲಾಜಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ವೆಟ್ಟೈಯಾಡು ವಿಲಯಾಡುವಿನಲ್ಲಿ ಅಮುಧನ್, ವಡಾ ಚೆನ್ನೈನ ತಂಬಿ ಪಾತ್ರಗಳಿಂದ ಡೇನಿಯಲ್ ಬಾಲಾಜಿ ಹೆಸರುವಾಸಿಯಾಗಿದ್ದಾರೆ, ತಮ್ಮ ವೈವಿಧ್ಯಯ ಪ್ರತಿಭೆ, ಬೆಳ್ಳಿತೆರೆ ಮೇಲೆ ಮನಮೋಹಕ ವರ್ಚಸ್ಸಿಗೆ ಹೆಸರುವಾಸಿಯಾಗಿದ್ದ ನಟನಿಗೆ ಕಳೆದ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಚೆನ್ನೈನ ಕೊಟ್ಟಿವಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟ ಡೇನಿಯಲ್ ಬಾಲಾಜಿ ಬಹು ಭಾಷಾನಟನಾಗಿಯೂ ಗುರುತಿಸಿಕೊಂಡಿದ್ದರು.


ಇಂದು ಅಂತಿಮ ದರ್ಶನ, ಅಂತ್ಯಕ್ರಿಯೆ:
ಡೇನಿಯಲ್ ಅವರ ಪಾರ್ಥಿವ ಶರೀರವನ್ನು ಇಂದು ಪುರಸೈವಾಲ್ಕಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿದೆ. ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ. ಅವರ ನಿಧನದ ಸುದ್ದಿ ತಮಿಳು ಚಿತ್ರರಂಗದಲ್ಲಿ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಆಘಾತ ಮತ್ತು ದುಃಖವನ್ನು ಉಂಟುಮಾಡಿದೆ.
ಧಾರಾವಾಹಿ ಮೂಲಕ ತಮ್ಮ ಸಿನಿವೃತ್ತಿಯನ್ನು ಆರಂಭಿಸಿದ ಬಾಲಾಜಿ ಅವರು ಚಿತ್ತಿ ಧಾರಾವಾಹಿಯಲ್ಲಿ ಮಾಡಿದ ಡೇನಿಯಲ್ ಪಾತ್ರ ವ್ಯಾಪಕ ಮನ್ನಣೆ ಮತ್ತು ಜನಮೆಚ್ಚುಗೆ ಗಳಿಸಿ ಆ ಪಾತ್ರ ಮೂಲಕವೇ ಅವರು ನಂತರ ಡೇನಿಯಲ್ ಬಾಲಾಜಿ ಎಂದು ಜನಪ್ರಿಯರಾದರು. ನಟನೆ ಹೊರತುಪಡಿಸಿ ಬಾಲಾಜಿ ದೇವರ ಮೇಲೆ ಅಪಾರ ನಂಬಿಕೆ ಉಳ್ಳವರಾಗಿದ್ದರು. ಅವಡಿಯಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.


ಡೇನಿಯಲ್ ಹೆಸರು ಬಂದಿದ್ದು ಹೇಗೆ?
ಸಿನಿಮಾಗಳಲ್ಲಿ ಖಳನಾಯಕನ ಪಾತ್ರ ಮಾಡುತ್ತ ಜನಪ್ರಿಯತೆ ಪಡೆದಿದ್ದ ಬಾಲಾಜಿ ಅವರು ಹೆಚ್ಚಾಗಿ ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಬಾಲಾಜಿ ಅವರು ಕಮಲ್ ಹಾಸನ್‌ರ ತೆರೆ ಕಾಣದ ‘ಮರುದುನಯಗಂ’ ಸಿನಿಮಾದಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು. ‘ಚಿತ್ತಿ’ ಎನ್ನುವ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ಈ ಸಿನಿಮಾದಲ್ಲಿ ರಾಧಿಕಾ ಶರತ್‌ಕುಮಾರ್ ಅವರು ಮುಖ್ಯ ಪಾತ್ರ ನಿರ್ವಹಿಸಿದ್ದರು. ಧಾರಾವಾಹಿಯಲ್ಲಿ ಬಾಲಾಜಿ ಅವರು ಡೇನಿಯಲ್ ಎನ್ನುವ ಪಾತ್ರ ಮಾಡಿದ್ದರು. ಇದರಿಂದಲೇ ಅವರಿಗೆ ಡೇನಿಯಲ್ ಎಂಬ ಸ್ಕ್ರೀನ್ ಹೆಸರು ಬಂತು.
ಸಿನಿಮಾಗಳಲ್ಲಿ ನಟನೆ ;
‘ಏಪ್ರಿಲ್ ಮಧತ್ತಿಲ್’ ಎನ್ನುವ ಸಿನಿಮಾದಲ್ಲಿ ಅವರು ನಟಿಸಿದ್ದರು. ಸೂರ್ಯ, ಜ್ಯೋತಿಕಾರ ಕಾಖ ಕಾಖ‘ ಸಿನಿಮಾವು ಬಾಲಾಜಿಗೆ ಜನಪ್ರಿಯತೆ ನೀಡಿತ್ತು. ವೆಟ್ರಿ ಮಾರನ್ ಅವರ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿಯೂ ಬಾಲಾಜಿ ನಟಿಸಿದ್ದರು. ದಳಪತಿ ವಿಜಯ್, ಅಜಿತ್, ಸಿಂಬು ಅವರ ಸಿನಿಮಾದಲ್ಲಿಯೂ ಬಾಲಾಜಿ ನಟಿಸಿದ್ದರು. ಕೊನೆಯದಾಗಿ ಅವರಯ ‘ಅರಿಯಾವನ್’ ಚಿತ್ರದಲ್ಲಿ ನಟಿಸಿದ್ದರು.
Tamil actor Daniel Balaji passed away on Friday, March 29 night. He suffered a heart attack following which he was rushed to a private hospital in Chennai, where he breathed his last. Balaji’s final rites will be held today. He was 48.
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
09-04-26 11:03 pm
HK News Staffer
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm