ಬ್ರೇಕಿಂಗ್ ನ್ಯೂಸ್
14-04-24 03:19 pm HK NEWS ದೇಶ - ವಿದೇಶ
ನವದೆಹಲಿ, ಎ.14: ಇರಾನ್ ಕಡೆಯಿಂದ ಇಸ್ರೇಲಿನತ್ತ ವಾಯು ದಾಳಿ ಆರಂಭಗೊಂಡಿದೆ. ಶನಿವಾರ ರಾತ್ರಿ ಡ್ರೋಣ್, ಕ್ಷಿಪಣಿ ದಾಳಿಯಾಗಿದ್ದು, ಇಸ್ರೇಲ್ ಅದನ್ನು ಸಮರ್ಥವಾಗಿ ಪುಡಿಗಟ್ಟಿದೆ. ಇಸ್ರೇಲ್ ಮಿಲಿಟರಿ ಪ್ರಕಾರ, ಇರಾನ್ ಕಡೆಯಿಂದ 120 ಡ್ರೋಣ್, 30ಕ್ಕೂ ಹೆಚ್ಚು ಕ್ರೂಸ್ ಮಿಸೈಲ್ ಮತ್ತು 120ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಮಿಸೈಲ್ ದಾಳಿಯಾಗಿದೆ.
ಇದೇ ವೇಳೆ, ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಇಸ್ರೇಲ್ ಮೇಲಿನ ದಾಳಿಯನ್ನು ಖಂಡಿಸಿದ್ದು, ನಮ್ಮ ಬೆಂಬಲ ಇಸ್ರೇಲ್ ದೇಶಕ್ಕಿದೆ. ಇರಾನ್ ಕಡೆಯ ಮಿಸೈಲ್ ಗಳನ್ನು ಪುಡಿಗಟ್ಟುತ್ತೇವೆ ಎಂದಿದ್ದಾರೆ. ಜೋ ಬಿಡೆನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಇರಾನ್ ದಾಳಿ ಬೆನ್ನಲ್ಲೇ ಇಸ್ರೇಲ್ ಮಿಲಿಟರಿ ಹೆಡ್ ಕ್ವಾರ್ಟರ್ ಟೆಲ್ ಅವೀವ್ ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಸಂಪುಟದ ಜೊತೆಗೆ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದು, ಇಸ್ರೇಲ್ ಪಾಲಿಸುವ ತತ್ವ ಕ್ಲೀಯರ್ ಆಗಿದೆ. ನಮಗೆ ಯಾರು ಹಾನಿ ಮಾಡುತ್ತಾರೋ ಅವರ ಮೇಲೆ ನಾವು ಹಾನಿ ಮಾಡುತ್ತೇವೆ. ಯಾವುದೇ ರೀತಿಯ ಬೆದರಿಕೆಯನ್ನು ನಾವು ಎದುರಿಸುತ್ತೇವೆ. ಯಾವುದೇ ಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧ ಇದ್ದೇವೆ ಎಂದು ಹೇಳಿದ್ದಾರೆ.
ಕ್ಷಿಪಣಿ ದಾಳಿಯನ್ನು ಎದುರಿಸಲು ನಮ್ಮ ಸೇನೆಯನ್ನು ಸಜ್ಜುಗೊಳಿಸಲಾಗಿದೆ. ಎದುರಿಸುವುದಕ್ಕೆ ಮತ್ತು ಪ್ರತಿ ದಾಳಿ ನಡೆಸುವುದಕ್ಕೆ ನಮ್ಮವರು ಸಿದ್ಧರಾಗಿದ್ದಾರೆ. ಈ ಹಂತದಲ್ಲಿ ನಮ್ಮ ಬೆಂಬಲಕ್ಕೆ ಬಂದಿರುವ ಅಮೆರಿಕ, ಯುಕೆ, ಫ್ರಾನ್ಸ್, ಜರ್ಮನಿ ಮತ್ತಿತರ ದೇಶಗಳಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಇದೇ ವೇಳೆ, ಯುಕೆ ಪ್ರಧಾನಿ ರಿಷಿ ಸುನಕ್ ಇರಾನ್ ದಾಳಿಯನ್ನು ಖಂಡಿಸಿದ್ದು, ನಾವು ಇಸ್ರೇಲ್ ಜೊತೆಗಿದ್ದೇವೆ ಎಂದು ಹೇಳಿದ್ದಾರೆ. ಭಾರತ ಮಾತ್ರ ಯುದ್ಧ ಅನಗತ್ಯ, ಎರಡೂ ಕಡೆಯವರು ಶಾಂತಿ ಸ್ಥಾಪನೆಗೆ ಪ್ರಯತ್ನಿಸಬೇಕು ಎಂದು ಹೇಳಿದೆ.
Iran launched more than 200 drones and missiles at Israel in an unprecedented attack late Saturday, the Israeli army announced, in a major escalation of the long-running covert war between the regional foes. Iran's proxies and allies also carried out coordinated attacks on Israeli positions as sirens sounded in many places and AFP correspondents heard blasts in the skies above Jerusalem early Sunday.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm