ಬ್ರೇಕಿಂಗ್ ನ್ಯೂಸ್
30-04-24 02:52 pm HK News Desk ದೇಶ - ವಿದೇಶ
ನವದೆಹಲಿ, ಎ.30: ಭಾರತದಲ್ಲಿ ಕೋವಿಶೀಲ್ಡ್ ಹೆಸರಲ್ಲಿ ಕೋವಿಡ್ ಸೋಂಕಿಗೆ ಎದುರಾಗಿ ನೀಡಲಾಗಿದ್ದ ಆಕ್ಸ್ ಫರ್ಡ್ ಆಸ್ಟ್ರಾ ಜೆನೆಕಾ ಕಂಪನಿಯ ವ್ಯಾಕ್ಸಿನ್ ಅಪರೂಪಕ್ಕೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಮಾತೃ ಕಂಪನಿ ಮೊದಲ ಬಾರಿಗೆ ಕೋರ್ಟಿನಲ್ಲಿ ಒಪ್ಪಿಕೊಂಡಿದೆ.
ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಈ ವ್ಯಾಕ್ಸಿನನ್ನು ವ್ಯಾಪಕವಾಗಿ ಬಳಕೆ ಮಾಡಲಾಗಿತ್ತು. ಇದರಿಂದ ಅಡ್ಡ ಪರಿಣಾಮ ಎದುರಿಸಿದ ಕುಟುಂಬಸ್ಥರು, ಸಾವಿಗೆ ತುತ್ತಾದ ಕುಟುಂಬಸ್ಥರು ಇಂಗ್ಲೆಂಡಿನಲ್ಲಿ ಆಸ್ಟ್ರಾ ಜೆನೆಕಾ ಕಂಪನಿಯ ವ್ಯಾಕ್ಸಿನ್ ವಿರುದ್ಧ ಕೋರ್ಟ್ ಹೋರಾಟ ಆರಂಭಿಸಿದ್ದರು. ಜಾಮಿ ಸ್ಕಾಟ್ ಎನ್ನುವ ವ್ಯಕ್ತಿ 2021ರಲ್ಲಿ ಈ ವ್ಯಾಕ್ಸಿನ್ ಪಡೆದ ಬಳಿಕ ಶಾಶ್ವತವಾಗಿ ಮೆದುಳಿಗೆ ಸಂಬಂಧಿಸಿದ ತೊಂದರೆಗೆ ಒಳಗಾಗಿದ್ದರು. ಆ ವ್ಯಕ್ತಿ ಸೇರಿದಂತೆ ಇಂಗ್ಲೆಂಡಿನಲ್ಲಿ ಹಲವರಿಗೆ ಥ್ರೋಂಬೋಸಿಸ್ ಎನ್ನುವ ತೊಂದರೆ ಕಾಣಿಸಿಕೊಂಡಿತ್ತು. Thrombocytopenia Syndrome (TTS) ಎನ್ನುವ ವೈಜ್ಞಾನಿಕ ಹೆಸರುಳ್ಳ ಈ ತೊಂದರೆ ಕಾಣಿಸಿಕೊಂಡರೆ ರಕ್ತ ಹೆಪ್ಪುಗಟ್ಟುವುದು ಮತ್ತು ದೇಹದಲ್ಲಿ ಪ್ಲೇಟ್ ಲೆಟ್ಸ್ ಕಣಗಳ ಕೊರತೆ ಉಂಟಾಗುವುದೆಂದು ಹೇಳಲಾಗುತ್ತದೆ.
ಇಂಗ್ಲೆಂಡಿನ ಹೈಕೋರ್ಟಿನಲ್ಲಿ ಆಸ್ಟ್ರಾ ಝೆನೆಕಾ ಕಂಪನಿಯ ಪರ ವಕೀಲರು ಸುದೀರ್ಘ ವಿಚಾರಣೆ ಬಳಿಕ ತಮ್ಮ ವ್ಯಾಕ್ಸಿನ್ ಕಾರಣದಿಂದ ಅಪರೂಪಕ್ಕೆ ಟಿಟಿಎಸ್ ಎನ್ನುವ ತೊಂದರೆ ಕಾಣಿಸಿಕೊಳ್ಳಬಹುದು ಎಂದಿರುವುದು ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡಿನಲ್ಲಿ ಭಾರೀ ವಿರೋಧ, ಕೋರ್ಟ್ ಹೋರಾಟ, ಸಾವಿಗೆ ತುತ್ತಾದ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಒತ್ತಾಯದಿಂದಾಗಿ ಆಸ್ಟ್ರಾ ಝೆನೆಕಾ ಉತ್ಪಾದಿಸಿದ ವ್ಯಾಕ್ಸಿನ್ ಬಳಕೆಗೆ ನಿಷೇಧ ಹೇರಲಾಗಿತ್ತು. ಇದೀಗ ಕಂಪನಿಯು ಲಸಿಕೆಯ ಕಾರಣದಿಂದ ಅಪರೂಪಕ್ಕೆ ಇಂತಹ ತೊಂದರೆ ಕಾಣಿಸಿಕೊಳ್ಳಬಹುದು ಎಂದು ಒಪ್ಪಿಕೊಂಡಿರುವುದು ಮೃತ ಕುಟುಂಬಸ್ಥರಿಗೆ ಮತ್ತು ಅದರಿಂದಾಗಿ ತೊಂದರೆ ಎದುರಿಸುತ್ತಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕೆಂಬ ಒತ್ತಾಯಕ್ಕೆ ಬಲ ಬಂದಿದೆ.
A big update has emerged in connection with COVID vaccine and its rare side effects, which are being questioned by several health experts. British-Swedish multinational pharmaceutical and biotechnology company AstraZeneca has admitted in court papers that its COVID vaccine, Covishield, can cause rare side effect The Telegraph reported.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm