ಬ್ರೇಕಿಂಗ್ ನ್ಯೂಸ್
08-05-24 11:59 am HK News Desk ದೇಶ - ವಿದೇಶ
ನವದೆಹಲಿ, ಮೇ 8: ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಆಗುತ್ತೆ ಎಂಬ ದೃಢೀಕರಣದ ಬಗ್ಗೆ ತೀವ್ರ ಆಕ್ರೋಶ ಕೇಳಿಬರುತ್ತಿದ್ದಂತೆ ಲಸಿಕೆಯ ಜನಕ ಬ್ರಿಟನ್ ಮೂಲದ ಆಸ್ಟ್ರಾ ಜೆನೆಕಾ ಕಂಪನಿ, ಲಸಿಕೆಯನ್ನು ಜಾಗತಿಕವಾಗಿ ಹಿಂಪಡೆಯುತ್ತಿರುವುದಾಗಿ ಘೋಷಣೆ ಮಾಡಿದೆ.
ಇತ್ತೀಚೆಗೆ ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ ಲೆಟ್ಸ್ ಕಡಿಮೆಯಾಗುವ ಅಡ್ಡ ಪರಿಣಾಮದ ಬಗ್ಗೆ ಮಾತೃ ಕಂಪೆನಿ ಆಸ್ಟ್ರಾ ಜೆನೆಕಾ ಇಂಗ್ಲೆಂಡ್ ಕೋರ್ಟಿನಲ್ಲಿ ಒಪ್ಪಿಕೊಂಡಿತ್ತು. ಆಕ್ಸ್ ಫರ್ಡ್ ಯುನಿವರ್ಸಿಟಿ ಮತ್ತು ಆಸ್ಟ್ರಾ ಜೆನೆಕಾ ಕೋವಿಡ್ 19 ಸೋಂಕಿನ ವಿರುದ್ಧವಾಗಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿತ್ತು. ಭಾರತದಲ್ಲಿ ಇದೇ ಲಸಿಕೆಯನ್ನು ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಕಂಪನಿ ದೊಡ್ಡ ಮಟ್ಟದಲ್ಲಿ ಮರು ತಯಾರಿ ಮಾಡಿತ್ತು.
ಭಾರತದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನು ದೇಶಾದ್ಯಂತ ಜನರಿಗೆ ನೀಡಲಾಗಿತ್ತು. ಆದರೆ ಲಸಿಕೆಯನ್ನು ಪಡೆದವರಿಗೆ ಅಕಾಲಿಕ ಹೃದಯಾಘಾತ ತೊಂದರೆ ಎದುರಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ವೈದ್ಯರು ಮಾತ್ರ ಲಸಿಕೆಯ ಅಡ್ಡ ಪರಿಣಾಮ ಎಂಬುದನ್ನು ಒಪ್ಪಿರಲಿಲ್ಲ. ಆನಂತರ, ಕೋವಿಶೀಲ್ಡ್ ಲಸಿಕೆಯ ವಿರುದ್ಧ ಇಂಗ್ಲೆಂಡಿನಲ್ಲಿ ಅಡ್ಡ ಪರಿಣಾಮ ಎದುರಿಸಿದವರೇ ಕೋರ್ಟ್ ಮೆಟ್ಟಿಲೇರಿದ್ದರು. ಮೂರು ವರ್ಷಗಳ ಹೋರಾಟದ ಬಳಿಕ ಲಸಿಕೆ ತಯಾರಿಸಿದ ಕಂಪನಿ, ಇದರಿಂದ ಅಡ್ಡ ಪರಿಣಾಮದ ಸಾಧ್ಯತೆಗಳಿವೆ ಎಂಬುದನ್ನು ಇತ್ತೀಚೆಗೆ ಕೋರ್ಟಿನಲ್ಲಿ ಒಪ್ಪಿಕೊಂಡಿತ್ತು. ಸಂತ್ರಸ್ತರಿಗೆ 100 ಮಿಲಿಯನ್ ಪೌಂಡ್ ಪರಿಹಾರ ನೀಡಬೇಕೆಂದು ಕೋರ್ಟಿನಲ್ಲಿ ವಾದ ಮಂಡಿಸಲಾಗಿದೆ.
ಆದರೆ, ಈಗ ಹೇಳಿಕೆ ಬಿಡುಗಡೆ ಮಾಡಿರುವ ಆಸ್ಟ್ರಾ ಜೆನೆಕಾ ಕಂಪೆನಿ, ಸದ್ಯಕ್ಕೆ ಕೋವಿಡ್ ಸೋಂಕಿಗೆ ಸುಧಾರಿತ ಮಟ್ಟದ ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಮಾರುಕಟ್ಟೆ ಎದುರಿಸಲು ಸಾಧ್ಯವಾಗದೆ ತಮ್ಮ ಲಸಿಕೆಯನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದೆ. ಭಾರತದಲ್ಲಿಯೂ ಲಸಿಕೆಯ ಅಡ್ಡ ಪರಿಣಾಮದಿಂದಾಗಿ ತೀವ್ರ ತೊಂದರೆಗಳನ್ನು ಎದುರಿಸಿದವರಿದ್ದಾರೆ. ಅಕಾಲಿಕವಾಗಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದವರಿದ್ದಾರೆ. ಇದಕ್ಕೆಲ್ಲ ಕೋವಿಶೀಲ್ಡ್ ಕಾರಣ ಎನ್ನುವ ಆರೋಪ ಕೇಳಿಬರುತ್ತಿದೆ. ಅಲ್ಲದೆ, ಅಕಾಲಿಕ ಸಾವಿಗೆ ತುತ್ತಾದವರಿಗೆ ಸರಕಾರವೇ ಪರಿಹಾರ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
The pharmaceutical giant AstraZeneca's Covid-19 vaccine is being withdrawn globally after the company acknowledged in court documents that it can cause a rare and dangerous side effect. However, the pharma giant said that the vaccine is being removed from the markets for commercial reasons.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm