ಬ್ರೇಕಿಂಗ್ ನ್ಯೂಸ್
28-05-24 01:09 pm HK News Desk ದೇಶ - ವಿದೇಶ
ಮುಂಬೈ, ಮೇ.28: ಪುಣೆಯಲ್ಲಿ ಅಪ್ರಾಪ್ತ ಚಲಾಯಿಸುತ್ತಿದ್ದ ಪೋರ್ಶೆ ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕಾರು ಅಪಘಾತ ಮಾಡಿದ ಅಪ್ರಾಪ್ತನ ರಕ್ತದ ಮಾದರಿ ರಿಪೋರ್ಟ್ ಬದಲಾಯಿಸಲು ಆತನ ಕುಟುಂಬಸ್ಥರು 3 ಲಕ್ಷ ರೂ. ಲಂಚ ಕೊಟ್ಟಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಪುಣೆ ಪೋರ್ಶೆ ಕಾರ್ ಅಪಘಾತ ಪ್ರಕರಣದಲ್ಲಿ 17 ವಯಸ್ಸಿನ ಆರೋಪಿಯ ರಕ್ತ ಪರೀಕ್ಷೆಯ ವರದಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಇಬ್ಬರು ವೈದ್ಯರೊಂದಿಗೆ ನಿನ್ನ ಪ್ಯೂನ್ ಬಂದಿತನಾಗಿದ್ದ. ಈತ ವೈದ್ಯರಿಗೆ 3 ಲಕ್ಷ ರೂ. ಲಂಚ ನೀಡಿದ್ದಾನೆ ಎಂದು ಗೊತ್ತಾಗಿದೆ.
ಅತುಲ್ ಘಟಕಾಂಬಳೆ ಎಂಬ ಪ್ಯೂನ್ ಮಧ್ಯವರ್ತಿಯಾಗಿ, ಅಪ್ರಾಪ್ತನ ಕುಟುಂಬದಿಂದ ಇಬ್ಬರು ವೈದ್ಯರಿಗೆ 3 ಲಕ್ಷ ರೂ. ಲಂಚವನ್ನು ಸಂಗ್ರಹಿಸಿದ್ದ. ಸಸೂನ್ ಆಸ್ಪತ್ರೆಯ ಡಾ. ಅಜಯ್ ತವಾಡೆ ಮತ್ತು ಡಾ. ಹರಿ ಹಾರ್ನರ್ ಎಂಬ ಕಂತ್ರಿಗಳನ್ನ ಪುಣೆ ಕ್ರೈಂ ಬ್ರಾಂಚ್ ನಿನ್ನೆ ಬಂಧಿಸಿದೆ.
ತನಿಖೆಯಿಂದ ಡಾ. ತವಡೆ ಮತ್ತು ಹದಿಹರೆಯದ ಆರೋಪಿಯ ತಂದೆ ಅಪಘಾತದ ದಿನ ಫೋನ್ನಲ್ಲಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಬಾಲಾಪರಾಧಿಯ ತಂದೆ ವೈದ್ಯರಿಗೆ ಕರೆ ಮಾಡಿ ರಕ್ತದ ಮಾದರಿ ರಿಪೋರ್ಟ್ ಬದಲಿಸಲು ಆಮಿಷ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿರುವ ಮಾದರಿಗಳು ಬಾಲಾಪರಾಧಿಗಳದ್ದಲ್ಲ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದರು. ಮೇ 19 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ, ಸ್ಯಾಸೂನ್ ಆಸ್ಪತ್ರೆಯಲ್ಲಿ ತೆಗೆದ ಅಪ್ರಾಪ್ತನ ರಕ್ತದ ಮಾದರಿಯನ್ನು ಡಸ್ಟ್ಬಿನ್ಗೆ ಎಸೆಯಲಾಯಿತು. ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯನ್ನು ತೆಗೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಅಪ್ರಾಪ್ತರ ರಕ್ತದ ಮಾದರಿಗಳನ್ನು ಬದಲಾಯಿಸಲಾಗಿದ್ದು, ಭಾನುವಾರ ಬಂದ ವರದಿಯಲ್ಲಿ ಮದ್ಯದ ಯಾವುದೇ ಕುರುಹು ಕಂಡುಬಂದಿಲ್ಲ. ಆದರೆ ಆ ರಾತ್ರಿ ಆತ ಭೇಟಿ ನೀಡಿದ ಬಾರ್ ಒಂದರ ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ.
The Pune crime branch on Monday arrested three people, including the doctor who heads the Sassoon General Hospital’s forensics department and a doctor in its casualty medical department, for allegedly destroying evidence and switching the blood sample of the 17-year old son of a real estate developer who is in custody for causing the deaths of two techies by crashing his Porsche into their motorcycle, while presumably drunk.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm