ಬ್ರೇಕಿಂಗ್ ನ್ಯೂಸ್
04-12-20 10:56 pm Headline Karnataka News Network ದೇಶ - ವಿದೇಶ
ಹೈದರಾಬಾದ್, ಡಿ.4: ಭಾರೀ ಜಿದ್ದಾಜಿದ್ದಿನ ಸೆಣಸಿಗೆ ಸಾಕ್ಷಿಯಾಗಿರುವ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಡಳಿತಾ ರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಟಿಆರ್ ಎಸ್ 55 ಸ್ಥಾನಗಳನ್ನು ಪಡೆದರೆ, ಈ ಬಾರಿ ಅಧಿಕಾರ ಪಡೆಯಲೇಬೇಕೆಂದು ಸೆಣಸಿದ್ದ ಬಿಜೆಪಿ 48 ಸ್ಥಾನಗಳನ್ನು ಪಡೆದಿದೆ. ಅಸಾದುದ್ದೀನ್ ಓವೈಸಿಯ ಎಐಎಂಐಎಂ ಪಕ್ಷ 44 ಸ್ಥಾನಗಳಲ್ಲಿ ಜಯ ಗಳಿಸಿದೆ.
ಕಾಂಗ್ರೆಸ್ ಹೀನಾಯ ಸೋಲಿನ ಪರ್ವ ಮುಂದುವರಿದಿದ್ದು ಕೇವಲ ಎರಡು ಸ್ಥಾನ ಗಳಿಸಿ ತೀವ್ರ ಮುಖಭಂಗ ಅನುಭವಿಸಿದೆ.
ಒಟ್ಟು 150 ಸದಸ್ಯ ಬಲದ ಪಾಲಿಕೆಯಲ್ಲಿ 1122 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಬಾರಿ ಕೊರೊನಾ ಕಾರಣದಿಂದಾಗಿ ಮತದಾನಕ್ಕೆ ಬ್ಯಾಲೆಟ್ ಪೇಪರ್ ಬಳಕೆ ಮಾಡಿದ್ದು ಫಲಿತಾಂಶ ವಿಳಂಬವಾಗಿದೆ. ರಾತ್ರಿಯಾದರೂ ಪೂರ್ಣ ಫಲಿತಾಂಶ ಪ್ರಕಟವಾಗಿಲ್ಲ. ರಾತ್ರಿ 10.30 ರ ವೇಳೆಗೆ 149 ಸ್ಥಾನಗಳ ಫಲಿತಾಂಶ ಪ್ರಕಟಗೊಂಡಿದೆ.


ಈ ಬಾರಿ ಬಿಜೆಪಿಯ ಭರ್ಜರಿ ಎಂಟ್ರಿಯಿಂದಾಗಿ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ರಾಷ್ಟ್ರದ ಗಮನ ಸೆಳೆದಿದೆ. ಬಿಜೆಪಿಯ ಘಟಾನುಘಟಿ ನಾಯಕರು ಸೇರಿ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಪಾಲಿಕೆ ಚುನಾವಣೆಯ ಪ್ರಚಾರಕ್ಕಾಗಿ ಹೈದರಾಬಾದ್ ಬಂದಿದ್ದರು. ಬಿಜೆಪಿ ಗೆದ್ದರೆ ಹೈದರಾಬಾದ್ ಹೆಸರನ್ನು ಭಾಗ್ಯ ನಗರ ಎಂದು ಮರು ನಾಮಕರಣ ಮಾಡುವುದಾಗಿ ಹೇಳಿದ್ದು ಚುನಾವಣಾ ಕಣ ರಂಗೇರುವಂತೆ ಮಾಡಿತ್ತು. ಇದರಿಂದಾಗಿ ಈ ಬಾರಿ ಅತಿ ಹೆಚ್ಚು ಮತದಾನವೂ (46.55 ಶೇ) ಆಗಿತ್ತು. ಒಟ್ಟು 74.67 ಲಕ್ಷ ಮತದಾರರ ಪೈಕಿ 34.50 ಲಕ್ಷ ಜನ ಮತದಾನ ಮಾಡಿದ್ದರು.
2016ರ ಚುನಾವಣೆಯಲ್ಲಿ ಟಿಆರ್ ಎಸ್ 88 ಸ್ಥಾನಗಳನ್ನು ಪಡೆದು ಪೂರ್ಣ ಬಹುಮತ ಪಡೆದಿತ್ತು. ಈ ಬಾರಿ ಬಿಜೆಪಿ ಟಿಆರ್ ಎಸ್ ಮತ್ತು ಓವೈಸಿಯ ಪಕ್ಷವನ್ನು ಸೋಲಿಸಬೇಕೆಂದು ಪಣ ತೊಟ್ಟು ಪ್ರಚಾರದಲ್ಲಿ ತೊಡಗಿತ್ತು. ಇದರಿಂದಾಗಿ ಬಿಜೆಪಿ ಈಗ ನಿರ್ಣಾಯಕ ಹಂತದಷ್ಟು ಮತ ಪಡೆದು ಗಮನ ಸೆಳೆದಿದೆ. ತ್ರಿಕೋನ ಸ್ಪರ್ಧೆಯಿಂದಾಗಿ ಪಾಲಿಕೆಯ ಅಧಿಕಾರ ಪಡೆಯಲು ಯಾವುದೇ ಎರಡು ಪಕ್ಷಗಳು ಒಗ್ಗೂಡಲೇಬೇಕಾದ ಅನಿವಾರ್ಯ ಎನಿಸುವಂತಾಗಿದೆ. ಬಿಜೆಪಿ ಇದೇ ಮೊದಲ ಬಾರಿಗೆ ಹೈದರಾಬಾದ್ ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದೆ.
The ruling Telangana Rashtra Samiti (TRS) has emerged as the single-largest party in the Hyderabad civic polls, winning 55 seats, followed by the BJP which has made significant electoral inroads, winning 48 seats.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm