ರಿಸರ್ವ್ ಬ್ಯಾಂಕ್ ನಿಂದ 4 ಪರ್ಸೆಂಟ್ ರೆಪೋ ದರ ಮುಂದುವರಿಕೆ

05-12-20 05:49 pm       Source: GOODRETURNS   ದೇಶ - ವಿದೇಶ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿಯನ್ನು ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಮಾಡಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿಯನ್ನು ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರದಂದು (ಡಿಸೆಂಬರ್ 4, 2020) ಘೋಷಣೆ ಮಾಡಿದ್ದು, ರೆಪೋ ದರವು 4%ನಲ್ಲೇ ಮುಂದುವರಿದಿದೆ. ಹಾಗೂ ರಿವರ್ಸ್ ರೆಪೋ ದರದಲ್ಲೂ ಯಾವುದೇ ಬದಲಾವಣೆ ಆಗಿಲ್ಲ. ಹಣ ಪೂರೈಕೆ ದೃಷ್ಟಿಯಲ್ಲಿ ಹಾಗೂ ಹಣದುಬ್ಬರವನ್ನು ಗಮನದಲ್ಲಿ ಇಟ್ಟುಕೊಂಡು ಶಕ್ತಿಕಾಂತ್ ದಾಸ್ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ರೀಟೇಲ್ ಹಾಗೂ ಹೋಲ್ ಸೇಲ್ ಹಣದುಬ್ಬರ ದರವು ಮೇಲೇರಿರುವುದು ಸಮಸ್ಯೆ ಆಗಿದೆ. ಅಕ್ಟೋಬರ್ ನಲ್ಲಿ ರೀಟೇಲ್ ಹಣದುಬ್ಬರ ದರವು 7.61 ಪರ್ಸೆಂಟ್ ಇತ್ತು. 2014ರ ಮೇ ತಿಂಗಳ ನಂತರ ಆರು ವರ್ಷದಲ್ಲೇ ಗರಿಷ್ಠ ಮಟ್ಟ ಇದಾಗಿದೆ. ಆರ್ ಬಿಐ ನಿಗದಿ ಮಾಡಿಕೊಂಡಿದ್ದ ಗುರಿಗಿಂತ ಮೇಲಿನ ಹಂತ ಇದಾಗಿದೆ.

ಬಹುತೇಕ ವಿಶ್ಲೇಷಕರು ದರ ಕಡಿತ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಭಾರತವು ವಿಶಿಷ್ಟ ಸನ್ನಿವೇಶವನ್ನು ಎದುರಿಸುತ್ತಿದೆ. ಹಣದುಬ್ಬರ ಜಾಸ್ತಿ ಇದೆ ಹಾಗೂ ಬೇಡಿಕೆ ಕಡಿಮೆ ಇದೆ. ಈ ಕಾರಣಕ್ಕೆ ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.

This News Article is a Copy of Goodreturns