"ವಾಣಿಜ್ಯ ಬ್ಯಾಂಕ್, ಕೋಆಪರೇಟಿವ್ ಬ್ಯಾಂಕ್ ನಿಂದ ಈ ವರ್ಷ ಡಿವಿಡೆಂಡ್ ಇಲ್ಲ"

05-12-20 05:58 pm       Source: GOODRETURNS   ದೇಶ - ವಿದೇಶ

ಪ್ರಸಕ್ತ ಹಣಕಾಸು ವರ್ಷದಲ್ಲಿ 2019- 20ನೇ ಸಾಲಿನ ಡಿವಿಡೆಂಡ್ ವಿತರಿಸದಂತೆ ವಾಣಿಜ್ಯ ಮತ್ತು ಕೋ ಆಪರೇಟಿವ್ ಬ್ಯಾಂಕ್ ಗೆ ಹೇಳಲಾಗಿದೆ ಎಂದಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿಯನ್ನು ಶುಕ್ರವಾರ (ಡಿಸೆಂಬರ್ 4, 2020) ಘೋಷಣೆ ಮಾಡಿದ ಮೇಲೆ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾತನಾಡಿ, ಪ್ರಸಕ್ತ ಹಣಕಾಸು ವರ್ಷದಲ್ಲಿ 2019- 20ನೇ ಸಾಲಿನ ಡಿವಿಡೆಂಡ್ ವಿತರಿಸದಂತೆ ವಾಣಿಜ್ಯ ಮತ್ತು ಕೋ ಆಪರೇಟಿವ್ ಬ್ಯಾಂಕ್ ಗೆ ಹೇಳಲಾಗಿದೆ ಎಂದಿದ್ದಾರೆ.

ನಿಫ್ಟಿ ಬ್ಯಾಂಕ್ 603.60 ಪಾಯಿಂಟ್ ಗಳ ಹೆಚ್ಚಳ ಕಂಡು, 30,052.40 ಪಾಯಿಂಟ್ ನೊಂದಿಗೆ ಶುಕ್ರವಾರದ ವಹಿವಾಟು ಮುಗಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ ದರವನ್ನು 4% ಮತ್ತು ರಿವರ್ಸ್ ರೆಪೋ ದರ 3.35% ಅನ್ನು ಮುಂದುವರಿಸಿದೆ. ಹೆಚ್ಚಿನ ಹಣದುಬ್ಬರ ಮತ್ತು ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಆರ್ಥಿಕತೆಯು ಕುಸಿತ ಆಗಬಹುದು ಎಂಬ ಅಂದಾಜಿದೆ. ಆದ್ದರಿಂದ ನೀತಿಯ ವಿಚಾರದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಅಗತ್ಯ ನಿಲುವು ತೆಗೆದುಕೊಳ್ಳಲು ಸಿದ್ಧ ಎಂದಿದ್ದಾರೆ.

ಖಾರೀಫ್ ಬೆಳೆ ಬರುವ ತನಕ ಹಣದುಬ್ಬರ ಮೇಲ್ಮಟ್ಟದಲ್ಲಿ ಇರಬಹುದು ಎಂದು ಸಮಿತಿಯಿಂದ ತಿಳಿಸಲಾಗಿದೆ. ಅಂದಾಜು ಗ್ರಾಹಕ ದರ ಸೂಚ್ಯಂಕ ಹಣದುಬ್ಬರವು . FY21 Q3: 6.8% ಮತ್ತು Q4: 5.8% ಹಾಗೂ FY22ರ ಮೊದಲಾರ್ಧದಲ್ಲಿ 5.2%- 4.6% ಆಗುವ ಅಂದಾಜಿದೆ. ಚಳಿಗಾಲದ ತಿಂಗಳಲ್ಲಿ ಸಿಪಿಐ ಹಣದುಬ್ಬರದಿಂದ ಸ್ವಲ್ಪ ಮಟ್ಟಿಗೆ ನಿರಾಳ ನಿರೀಕ್ಷಿಸಬಹುದು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

This News Article is a Copy of Goodreturns