ಬ್ರೇಕಿಂಗ್ ನ್ಯೂಸ್
03-07-24 12:26 pm HK News Desk ದೇಶ - ವಿದೇಶ
ನವದೆಹಲಿ, ಜುಲೈ.3: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿರುವ ಕಾಲ್ತುಳಿತ ಘಟನೆಯಲ್ಲಿ ಮಡಿದವರ ಸಂಖ್ಯೆ 121ಕ್ಕೇರಿದೆ. ಹತ್ರಾಸ್, ಇಟಾ ಜಿಲ್ಲೆಯ ಆಸ್ಪತ್ರೆಗಳ ಮುಂದುಗಡೆ ಮಂಗಳವಾರ ಸಂಜೆ ಹೆಣಗಳ ರಾಶಿಯೇ ಬಿದ್ದುಕೊಂಡಿತ್ತು. ಜನರು ತಮ್ಮವರನ್ನು ಹುಡುಕಲು ರೋದಿಸುತ್ತಾ ಬಾಯಿ ಬಡಿದುಕೊಳ್ಳುತ್ತಿದ್ದರು. ಹೆಚ್ಚಿನ ಮಹಿಳೆಯರು, ಮಕ್ಕಳು, ಅಜ್ಜಿಯಂದಿರು ಘಟನೆಯಲ್ಲಿ ದುರಂತ ಸಾವನ್ನಪ್ಪಿದ್ದಾರೆ.
ಹತ್ರಾಸ್ ಜಿಲ್ಲೆಯ ಫುಲ್ ರಾಯಿ ಎಂಬ ಹಳ್ಳಿಯಲ್ಲಿ ಭೋಲೇ ಬಾಬಾ ಅವರ ಸತ್ಸಂಗ ಮೇಳ ನಡೆದಿತ್ತು. ಸತ್ಸಂಗದಲ್ಲಿ 80 ಸಾವಿರ ಜನರು ಸೇರುತ್ತಾರೆಂದು ಆಯೋಜಕರು ಸ್ಥಳೀಯಾಡಳಿತದಲ್ಲಿ ಪರವಾನಗಿ ಪಡೆದುಕೊಂಡಿದ್ದರು. ಆದರೆ, ನಿರೀಕ್ಷೆಗೂ ಮೀರಿ ಎರಡೂವರೆ ಲಕ್ಷದಷ್ಟು ಜನರು ಸೇರಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಅಪರಾಹ್ನ 3.30ರ ವೇಳೆಗೆ ಬಾಬಾ ಸತ್ಸಂಗ ಮುಗಿಸಿ ಅಲ್ಲಿಂದ ಕಾರಿನತ್ತ ಹೊರಡುತ್ತಿದ್ದಾಗ ಜನರು ಅವರ ಕಾಲಿಗೆ ಬೀಳಲು ಮುಂದಾಗಿದ್ದು, ನೂಕುನುಗ್ಗಲು ಸಂಭವಿಸಿದೆ. ಒಂದೇ ಪ್ರಕಾರದಲ್ಲಿ ಜನರು ಮುಗಿಬಿದ್ದ ಕಾರಣ ಮಕ್ಕಳು, ಮಹಿಳೆಯರು ಕಾಲಿನಡಿಗೆ ಬಿದ್ದು ದುರಂತ ನಡೆದಿದೆ ಎನ್ನಲಾಗುತ್ತಿದೆ.
ಮೃತರ ಪೈಕಿ ಹತ್ರಾಸ್ ಜಿಲ್ಲೆಯ 34, ಆಗ್ರಾ 21, ಇಟಾ 28, ಆಲೀಗಢ ಜಿಲ್ಲೆಯವರು 38 ಮಂದಿ ಇದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮ ಸ್ಥಳದಲ್ಲಿ ವಿವಿಐಪಿ ವ್ಯವಸ್ಥೆ ಮಾಡಿದ್ದರೂ, ಸಾಮಾನ್ಯ ಜನರ ಆಗಮನ ಮತ್ತು ನಿರ್ಗಮನಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಎರಡು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರಿಂದ ನಿರ್ಗಮನ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ, ತಾಯಿ ಮತ್ತು 16 ವರ್ಷದ ಮಗಳನ್ನು ಕಳಕೊಂಡಿರುವ ವಿನೋದ್ ಎಂಬವರು ನ್ಯೂಸ್ 18 ಸಂಸ್ಥೆಗೆ ಹೇಳಿಕೆ ನೀಡಿದ್ದು, ನಾನು ಬೇರೆ ಕಡೆ ಹೊರಗೆ ಹೋಗಿದ್ದೆ, ಮನೆಯ ಮೂರು ಮಂದಿಯೂ ಸತ್ಸಂಗ ಮೇಳಕ್ಕೆ ಹೋಗಿದ್ದಾರೆಂದು ತಿಳಿದಿರಲಿಲ್ಲ. ಕಾಲ್ತುಳಿತ ಆಗಿದೆ ಎಂದು ಸುದ್ದಿ ತಿಳಿದೊಡನೆ ಇಲ್ಲಿಗೆ ಆಗಮಿಸಿದ್ದೇನೆ. ಇಲ್ಲಿ ನೋಡಿದರೆ, ಪತ್ನಿ, ತಾಯಿ, ಮಗಳು ಕೂಡ ಸಾವನ್ನಪ್ಪಿದ್ದಾರೆ. ತಾಯಿ ಹೆಣ ಇನ್ನೂ ಸಿಕ್ಕಿಲ್ಲ ಎಂದು ದುಃಖ ಹೇಳಿಕೊಂಡರು.
ಮತ್ತೊಬ್ಬ ವ್ಯಕ್ತಿ ತನ್ನ ಇಬ್ಬರು ಮೂರು ವರ್ಷದ ಅವಳಿ ಮಕ್ಕಳು ಮತ್ತು ಪತ್ನಿಯ ಹೆಣ ನೆಲದಲ್ಲಿ ಬಿದ್ದಿರುವುದನ್ನು ನೋಡಿ ರೋದಿಸುತ್ತಿರುವುದು ಎಂಥವರನ್ನೂ ಮನಕಲಕುವಂತೆ ಮಾಡಿತ್ತು. ಮೃತರ ಕುಟುಂಬಸ್ಥರೆಲ್ಲ ಆಸ್ಪತ್ರೆ ಮುಂದುಗಡೆ ತಮ್ಮವರು ಎಲ್ಲಿದ್ದಾರೆಂದು ನೋಡಲು ಹೆಣಗಳ ರಾಶಿ ನಡುವೆ ಹುಡುಕುತ್ತಿದ್ದರು. ಮಹಾಭಾರತ ಯುದ್ಧದ ಕೊನೆಯಲ್ಲಿ ಹೆಣಗಳ ರಾಶಿಯ ನಡುವೆ ಅಶ್ವತ್ಥಾಮ ಕಾಲಿಡುತ್ತ ಬರುವಾಗಿನ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿತ್ತು. ಮಂಗಳವಾರ ರಾತ್ರಿ ಶವಗಳನ್ನು ಕೆಡದಂತೆ ಇಡುವ ಸಲುವಾಗಿ ಹೆಣಗಳ ರಾಶಿಗೇ ಮಂಜುಗಡ್ಡೆ ಸುರಿಯಲಾಗಿತ್ತು. ಹಿಮದ ಗಡ್ಡೆಗಳ ನಡುವೆ ಬುಧವಾರ ಬೆಳಗ್ಗೆಯೂ ಪಕ್ಕದ ಜಿಲ್ಲೆಗಳ ನಿವಾಸಿಗಳು ಬಂದು ತಮ್ಮವರನ್ನು ಹುಡುಕುವ ದೃಶ್ಯ ಕರುಣಾಜನಕವಾಗಿದೆ.
ಗುಪ್ತಚರ ಪೊಲೀಸ್ ಆಗಿದ್ದ ಬಾಬಾ
ಘಟನೆ ಬಗ್ಗೆ ಆಯೋಜಕರ ನಿರ್ಲಕ್ಷ್ಯ ವಿಚಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಸತ್ಸಂಗದ ರೂವಾರಿ ಭೋಲೇ ಬಾಬಾನ ಹೆಸರು ಉಲ್ಲೇಖಿಸಿಲ್ಲ. ಘಟನೆ ನಂತರ ಬಾಬಾ ತಲೆಮರೆಸಿಕೊಂಡಿದ್ದು, ಪೊಲೀಸರು ಅವರನ್ನು ಹುಡುಕಲು ಆರಂಭಿಸಿದ್ದಾರೆ. ಇಟಾ ಜಿಲ್ಲೆಯ ಪಾಟಿಯಾಲ ಗ್ರಾಮದ ನಿವಾಸಿಯಾಗಿರುವ ಬಾಬಾ ಮೂಲ ಹೆಸರು ಸೂರಜ್ ಪಾಲ್ ಎಂದಾಗಿತ್ತು. ಪೊಲೀಸ್ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಪಾಲ್, ಧಾರ್ಮಿಕ ವಿಚಾರದತ್ತ ಆಸಕ್ತಿಗೊಂಡು ಪೊಲೀಸ್ ಇಲಾಖೆಯನ್ನು ಬಿಟ್ಟು ಧಾರ್ಮಿಕ ಉಪನ್ಯಾಸದಲ್ಲಿ ನಿರತರಾಗಿದ್ದರು. ಕಳೆದ 17 ವರ್ಷಗಳಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿದ್ದ ಭೋಲೇ ಬಾಬಾ, ನಾರಾಯಣ ಹರಿ ಎಂದು ಹೆಸರು ಪಡೆದಿದ್ದರು.
ತಪ್ಪಿತಸ್ಥರನ್ನು ಬಿಡಲ್ಲ – ಸಿಎಂ ಯೋಗಿ
ಸಿಎಂ ಯೋಗಿ ಆದಿತ್ಯನಾಥ್ ಘಟನೆ ನಡೆದಿರುವ ಹತ್ರಾಸ್ ಜಿಲ್ಲೆಗೆ ಭೇಟಿ ನೀಡಲಿದ್ದು, ಸಂತ್ರಸ್ತರನ್ನು ಭೇಟಿಯಾಗಲಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೋ, ಯಾರು ಘಟನೆಗೆ ಕಾರಣವಾಗಿದ್ದಾರೋ ಅಂಥವರನ್ನು ನಾವು ಬಿಡುವುದಿಲ್ಲ. ಕಠಿಣ ಶಿಕ್ಷೆಗೆ ಗುರಿ ಪಡಿಸುತ್ತೇವೆ. ಒಟ್ಟು ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಆಕಸ್ಮಿಕ ನಡೆದಿದ್ದೇ ಅಥವಾ ಪೂರ್ವ ಸಂಚು ಒಳಗೊಂಡಿತ್ತೇ ಎನ್ನುವ ಬಗ್ಗೆ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶ ಸರಕಾರ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರದ ಘೋಷಣೆ ಮಾಡಿದೆ.
The stampede on Tuesday was at the religious event in a village in Hathras district of Uttar Pradesh state, about 200km (125 miles) southeast of New Delhi, where police had given permission for 80,000 people to gather, according to the document, the first information report. Around 250,000 people attended the event, according to the police report reviewed by Reuters.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am