ಬ್ರೇಕಿಂಗ್ ನ್ಯೂಸ್
14-07-24 03:16 pm HK News Desk ದೇಶ - ವಿದೇಶ
ಜೈಪುರ, ಜುಲೈ.14: ರಾಜಸ್ಥಾನದ ಪಾಲಿ ಜಿಲ್ಲೆಯ ಜೋಗ್ಮಂಡಿ ರೈಲ್ವೇ ಸೇತುವೆಯಲ್ಲಿ ನವ ವಿವಾಹಿತ ಜೋಡಿ ಫೋಟೋ ಶೂಟ್ ಮಾಡುತ್ತಿದ್ದಾಗ ರೈಲು ಬಂದಿದ್ದು ಇದನ್ನು ನೋಡಿ ಪತಿ- ಪತ್ನಿ ಸೇತುವೆಯಿಂದಲೇ 90 ಅಡಿ ಆಳದ ಕಂದಕಕ್ಕೆ ಹಾರಿದ ಘಟನೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ. ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ರಾಹುಲ್ ಮೇವಾಡಾ (22) ಮತ್ತು ಅವರ ಪತ್ನಿ ಜಾಹ್ನವಿ (20) ಮದುವೆಯಾದ ಬಳಿಕ ಗೋರಂಘಾಟ್ ಗೆ ಭೇಟಿ ನೀಡಲು ಬಂದಿದ್ದರು. ಜೋಗಮಂಡಿ ಸೇತುವೆಯ ಮೀಟರ್ ಗೇಜ್ ರೈಲ್ವೇ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸೇತುವೆ ಮಧ್ಯದಲ್ಲಿ ನಿಂತು ಫೋಟೊ ಶೂಟ್ ಮಾಡ ತೊಡಗಿದ್ದರು. ಇದೇ ವೇಳೆ, ಮಾರ್ವಾರ್ ಪ್ಯಾಸೆಂಜರ್ ರೈಲು ಕಮ್ಲಿಘಾಟ್ ರೈಲ್ವೆ ನಿಲ್ದಾಣದಿಂದ ಬಂದಿತ್ತು. ರೈಲು ನಿಧಾನಕ್ಕೆ ಬರುತ್ತಿದ್ದರೂ ದಂಪತಿ ಭಯಗೊಂಡು ಸೇತುವೆಯಿಂದ ಕೆಳಗೆ ಹಾರಿದ್ದರು.


ಇಬ್ಬರು ಸಂಬಂಧಿಕರು ರೈಲ್ವೇ ಸೇತುವೆಯ ಬಳಿ ನಿಂತು ಫೋಟೊ ತೆಗೆಯುತ್ತಿದ್ದರೆ, ಹಠಾತ್ ರೈಲು ಬಂದಾಗ ಏನು ಮಾಡುವುದೆಂದು ತೋಚಲಿಲ್ಲ. ಸಂಬಂಧಿಕರು ಬೊಬ್ಬೆ ಹೊಡೆಯ ತೊಡಗಿದ್ದರೆ, ದಂಪತಿ ನೇರವಾಗಿ ಸೇತುವೆಯಿಂದ ಹೊರಕ್ಕೆ ಜಿಗಿದಿದ್ದಾರೆ. ಇದು ಸಂಬಂಧಿಕರ ಮೊಬೈಲಿನಲ್ಲಿ ಸೆರೆಯಾಗಿದ್ದು ವೀಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲು ನಿಲ್ಲುತ್ತಿದ್ದಂತೆ ಚಾಲಕ ಮತ್ತು ಗಾರ್ಡ್ ಸೇತುವೆಯಿಂದ ಇಳಿದು, ಗಂಭೀರ ಗಾಯಗೊಂಡ ದಂಪತಿಯನ್ನು ಎತ್ತಿ ಫುಲಾಡ್ ರೈಲ್ವೇ ನಿಲ್ದಾಣಕ್ಕೆ ಕರೆದೊಯ್ದರು. ಅಲ್ಲಿಂದ ಆಂಬ್ಯುಲೆನ್ಸ್ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
A young couple jumped from the Jogmandi railway bridge in Pali after seeing the train approaching towards them on Saturday, police said.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm