ಬ್ರೇಕಿಂಗ್ ನ್ಯೂಸ್
21-07-24 05:45 pm HK News Desk ದೇಶ - ವಿದೇಶ
ಕುವೈತ್, ಜುಲೈ 21: ಕುವೈತ್ ಸಿಟಿಯ ಅಪಾರ್ಟ್ಮೆಂಟ್ ಒಂದರಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಇಬ್ಬರು ಮಕ್ಕಳು ಸೇರಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾಗಿದ್ದಾರೆ.
ಆಲಪ್ಪುಝ ಜಿಲ್ಲೆಯ ನೀರಾಟ್ಟುಪುರಂ ನಿವಾಸಿಗಳಾದ ಮ್ಯಾಥ್ಯೂಸ್ ಮುಲಕ್ಕಲ್, ಅವರ ಪತ್ನಿ ಲೀನ್ ಅಬ್ರಹಾಂ ಮತ್ತವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಏರ್ ಕಂಡೀಶನರಲ್ಲಿ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹತ್ತಿಕೊಂಡಿದ್ದು ಹೊಗೆಯಿಂದಾಗಿ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ. ಮ್ಯಾಥ್ಯೂಸ್ ಮುಲಕ್ಕಲ್ ಕುವೈತ್ ಸಿಟಿಯಲ್ಲಿ ಕಳೆದ 15 ವರ್ಷಗಳಿಂದ ಉದ್ಯೋಗಿಯಾಗಿದ್ದು, ಬೇಸಿಗೆಯ ರಜೆಯಲ್ಲಿ ಊರಿಗೆ ತೆರಳಿ ಜುಲೈ19ರಂದು ಸಂಜೆ 4 ಗಂಟೆಗೆ ಕುವೈತ್ ತಲುಪಿದ್ದರು. ಅದೇ ದಿನ ರಾತ್ರಿ ಅಪಾರ್ಟ್ಮೆಂಟಿನ ಎರಡನೇ ಮಹಡಿಯಲ್ಲಿದ್ದಾಗಲೇ ಬೆಂಕಿ ಹತ್ತಿಕೊಂಡಿತ್ತು. ಪತ್ನಿ ಲೀನಿ ನರ್ಸ್ ಆಗಿದ್ದರೆ, ಇಬ್ಬರು ಮಕ್ಕಳು ಅಲ್ಲಿಯೇ ಶಾಲೆಗೆ ಹೋಗುತ್ತಿದ್ದರು.
ಭಾರತದ ರಾಯಭಾರ ಕಚೇರಿಯವರು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಬೇಸಿಗೆ ರಜೆ ಮುಗಿಸಿ ಮರಳಿದ ದಿನವೇ ದುರಂತ ನಡೆದುಹೋಗಿದೆ. ಒಂದು ತಿಂಗಳ ಹಿಂದಷ್ಟೇ ಇದೇ ಪರಿಸರದಲ್ಲಿ ಭಾರತೀಯರು ವಾಸವಿದ್ದ ಅಪಾರ್ಟ್ಮೆಂಟಿಗೆ ಬೆಂಕಿ ಹತ್ತಿಕೊಂಡು 45 ಮಂದಿ ಸಾವಿಗೀಡಾಗಿದ್ದರು. ಈಗ ಅದೇ ಪರಿಸರದ ಮತ್ತೊಂದು ಕಟ್ಟಡದಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
In a tragic incident, an Indian couple and their two children were killed in a fire that broke out in their flat in Kuwait City, local authorities said on Saturday. The tragedy happened on Friday night, the same day they returned from Kerala after vacation.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am