ಬ್ರೇಕಿಂಗ್ ನ್ಯೂಸ್
31-07-24 12:27 pm HK News Desk ದೇಶ - ವಿದೇಶ
ವಯನಾಡ್, ಜುಲೈ.31: ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಪರಿಹಾರ ಹಾಗೂ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಭಾರತೀಯ ಸೇನೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ತಾತ್ಕಾಲಿಕ ಸೇತುವೆಯ ಮೂಲಕ ಸುಮಾರು 1,000 ಜನರನ್ನು ರಕ್ಷಿಸುವಲ್ಲಿ ಸೇನೆ ಯಶಸ್ವಿಯಾಗಿದೆ.
ಸೋಮವಾರ-ಮಂಗಳವಾರ ರಾತ್ರಿ ಸುರಿದ ರಣಮಳೆಗೆ ವಯನಾಡ್ನ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ನಾಲ್ಕೈದು ಗ್ರಾಮಗಳು ಸಂಪೂರ್ಣವಾಗಿ ಭೂಸಮಾಧಿಯಾಗಿದ್ದವು. ಅಪಾರ ಪ್ರಮಾಣದಲ್ಲಿ ಸಾವು-ನೋವು, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಮೆಪ್ಪಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು 50 ಮೃತದೇಹಗಳನ್ನು ಇರಿಸಲಾಗಿದೆ. ಗಾಯಗೊಂಡಿರುವ ಕನಿಷ್ಠ 116 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಜ್ಯ ಕಂದಾಯ ತಿಳಿಸಿದೆ.
ಸೇನೆಯಿಂದ ರಕ್ಷಣಾ ಕಾರ್ಯ: ''ಮಳೆಗಾಲವಾಗಿರುವ ಹಿನ್ನೆಲೆಯಲ್ಲಿ ಸೇನೆ ಕಳೆದ 15 ದಿನಗಳಿಂದ ಕಟ್ಟೆಚ್ಚರದಲ್ಲಿದೆ. ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದ ನಂತರ ಮಂಗಳವಾರ ಬೆಳಗ್ಗೆ ಕೇರಳ ಸರ್ಕಾರ ಸೇನೆಯನ್ನು ಸಂಪರ್ಕಿಸಿತು. ಎನ್ಡಿಆರ್ಎಫ್ ಮತ್ತು ರಾಜ್ಯ ತಂಡಗಳೂ ಕೂಡಾ ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ನೌಕಾಪಡೆ ಮತ್ತು ವಾಯುಪಡೆಯೂ ಸಮಾನ ಕೊಡುಗೆ ನೀಡುತ್ತಿವೆ'' ಎಂದು ರಕ್ಷಣಾ ಭದ್ರತಾ ದಳ ಕೇಂದ್ರದ ಕಮಾಂಡೆಂಟ್, ಕರ್ನಲ್ ಪರಮವೀರ್ ಸಿಂಗ್ ನಾಗ್ರಾ ತಿಳಿಸಿದರು.
''ಭೂಕುಸಿತವಾದ ಭಾಗದಲ್ಲಿ ಪ್ರಮುಖ ಸಂಪರ್ಕ ಸೇತುವೆಯೊಂದು ಕೊಚ್ಚಿಹೋಗಿದೆ. ಹೀಗಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ. ಅದರೊಂದಿಗೆ ಸರಿಸುಮಾರು 1,000ಕ್ಕೂ ಹೆಚ್ಚು ಜನರನ್ನು ಈ ಸುರಕ್ಷಿತ ಸ್ಥಳದೆಡೆಗೆ ಕರೆದೊಯ್ಯಲಾಗಿದೆ. ಕೆಲವು ಮೃತದೇಹಗಳನ್ನೂ ಸಾಗಿಸಲಾಗಿದೆ. ಸುಮಾರು 18ರಿಂದ 25 ಜನರು ಭೂಕುಸಿತ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದಾರೆ. ಎಲ್ಲರೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ ಕಾರ್ಯ ನಡೆಸುತ್ತಿದ್ದೇವೆ'' ಎಂದು ಹೇಳಿದರು.
ಕೇರಳಕ್ಕೆ ಅಗತ್ಯ ನೆರವು ಘೋಷಿಸಿದ ಸಿಎಂ ಸಿದ್ದರಾಮಯ್ಯ ;
ಕೇರಳಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದುರ್ಘಟನೆಯ ಕುರಿತು ದೂರವಾಣಿ ಮೂಲಕ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದುರಂತಕ್ಕೆ ಆಘಾತ ವ್ಯಕ್ತಪಡಿಸಿದರು.
ಪರಿಹಾರ ಕಾರ್ಯದಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಕೈಜೋಡಿಸಲಿದೆ. ಅಗತ್ಯ ನೆರವು ಒದಗಿಸಲು ಸಿದ್ಧವಾಗಿದೆ. ರಕ್ಷಣಾ ತಂಡಗಳು ಮತ್ತು ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ತೀವ್ರ ಭೂಕುಸಿತ ಮತ್ತು ಭಾರೀ ಮಳೆಯಿಂದ ಹಾನಿಗೊಳಗಾದವರಿಗೆ ತಕ್ಷಣದ ಪರಿಹಾರವನ್ನು ಒದಗಿಸಲು 1,000 ಹೊದಿಕೆಗಳು ಮತ್ತು ಟಾರ್ಪಲಿನ್‌ಗಳನ್ನು ರವಾನಿಸಲಾಗಿದೆ. ಹೆಚ್ಚುವರಿಯಾಗಿ, ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ಮತ್ತು ಅಗತ್ಯವಿರುವವರಿಗೆ ಸಕಾಲಿಕ ವೈದ್ಯಕೀಯ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಎರಡು ಆಂಬ್ಯುಲೆನ್ಸ್‌ಗಳನ್ನು ಕರ್ನಾಟಕ ಕಳುಹಿಸಿಕೊಟ್ಟಿದೆ.
At least 158 people have been killed, and over 200 were injured after massive landslides struck the hilly areas near Meppadi in Wayanad. According to government data, more than 180 people are feared to be trapped under debris as multiple agencies and the Army race against time to save as many lives as possible.
15-01-25 08:22 pm
Bangalore Correspondent
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
Keonics, Priyank Kharge; ದಯಾಮರಣಕ್ಕಾಗಿ ರಾಷ್ಟ್ರ...
15-01-25 12:19 pm
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 08:01 pm
Mangalore Correspondent
Mangalore crime, Jail; ಮಂಗಳೂರಿನ ಜೈಲಿನಲ್ಲಿ ಕೈದ...
15-01-25 12:09 pm
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm