ಬ್ರೇಕಿಂಗ್ ನ್ಯೂಸ್
01-08-24 01:07 pm HK News Desk ದೇಶ - ವಿದೇಶ
ಲಕ್ನೋ, ಆಗಸ್ಟ್.1: ಲವ್ ಜಿಹಾದ್, ಧಾರ್ಮಿಕ ಮತಾಂತರ ಸಂಬಂಧಿಸಿ ಹೊಸ ಮಸೂದೆಯೊಂದನ್ನು ಉತ್ತರಪ್ರದೇಶ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಮಸೂದೆ ಮೂಲಕ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶವಿದ್ದು, ಕಾನೂನಿನಲ್ಲಿ ಲವ್ ಜಿಹಾದ್ ಸಂಬಂಧಿಸಿದ ಹಲವು ಅಪರಾಧಗಳಿಗೆ ಶಿಕ್ಷೆಯನ್ನು ದ್ವಿಗುಣಗೊಳಿಸಲಾಗಿದೆ.
ಹೊಸ ಮಸೂದೆಯಲ್ಲಿನ ನಿಬಂಧನೆಗಳು
ಹೊಸ ಕಾನೂನಿನಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯ ಅವಕಾಶವಿದೆ. ಮತಾಂತರದ ಪ್ರಕರಣಗಳಲ್ಲಿ ಈಗ ಯಾವುದೇ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಬಹುದು. ಈ ಮೊದಲು ಮಾಹಿತಿ ಅಥವಾ ದೂರು ನೀಡಲು ಸಂತ್ರಸ್ತೆ, ಪೋಷಕರು ಅಥವಾ ಒಡಹುಟ್ಟಿದವರ ಉಪಸ್ಥಿತಿ ಅಗತ್ಯವಾಗಿತ್ತು.
ಸೆಷನ್ಸ್ ನ್ಯಾಯಾಲಯದ ಕೆಳಗಿರುವ ಯಾವುದೇ ನ್ಯಾಯಾಲಯವು ಲವ್ ಜಿಹಾದ್ ಪ್ರಕರಣಗಳ ವಿಚಾರಣೆ ನಡೆಸುವಂತಿಲ್ಲ. ಲವ್ ಜಿಹಾದ್ ಪ್ರಕರಣದಲ್ಲಿ ಸರ್ಕಾರಿ ವಕೀಲರಿಗೆ ಅವಕಾಶ ನೀಡದೆ ಜಾಮೀನು ಅರ್ಜಿಯನ್ನು ಪರಿಗಣಿಸುವುದಿಲ್ಲ. ಇದಲ್ಲದೆ, ಮಸೂದೆ ಪ್ರಕಾರ ಸಂಬಂಧಿತ ಎಲ್ಲ ಅಪರಾಧಗಳನ್ನು ಜಾಮೀನು ರಹಿತವನ್ನಾಗಿ ಮಾಡಲಾಗಿದೆ.
ಉತ್ತರ ಪ್ರದೇಶದ ಯೋಗಿ ಸರ್ಕಾರವು 2020ರಲ್ಲಿ ಲವ್ ಜಿಹಾದ್ ವಿರುದ್ಧ ಮೊದಲ ಬಾರಿಗೆ ಕಾನೂನನ್ನು ಮಾಡಿತ್ತು. ಇದರ ನಂತರ, ಯುಪಿ ಸರ್ಕಾರವು ಅಸೆಂಬ್ಲಿಯಲ್ಲಿ ಧಾರ್ಮಿಕ ಮತಾಂತರ ನಿಷೇಧ ಮಸೂದೆ 2021 ಅನ್ನು ಅಂಗೀಕರಿಸಿತ್ತು. ಈ ಮಸೂದೆಯಲ್ಲಿ 1 ರಿಂದ 10 ವರ್ಷಗಳವರೆಗೆ ಶಿಕ್ಷೆಗೆ ಅವಕಾಶವಿತ್ತಲ್ಲದೆ, ಮದುವೆ ಉದ್ದೇಶಕ್ಕಾಗಿ ಮಾತ್ರ ಮಾಡುವ ಧಾರ್ಮಿಕ ಮತಾಂತರವನ್ನು ಅಸಿಂಧು ಎಂದು ಪರಿಗಣಿಸುವ ಅವಕಾಶವಿತ್ತು. ಈಗ ಅದೇ ಮಸೂದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗಿದೆ.
ಈ ಹಿಂದೆ, ಯುಪಿಯಲ್ಲಿ ಮಾಡಿದ ಹಳೆಯ ಕಾನೂನಿನ ಪ್ರಕಾರ, ಸುಳ್ಳು ಅಥವಾ ಮೋಸ ಮಾಡುವ ಮೂಲಕ ಧರ್ಮ ಪರಿವರ್ತಿಸುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಯಾರಾದರೂ ಸ್ವಯಂಪ್ರೇರಣೆಯಿಂದ ಮತಾಂತರಗೊಳ್ಳಲು ಬಯಸಿದರೆ, ಎರಡು ತಿಂಗಳ ಮುಂಚಿತವಾಗಿ ಮ್ಯಾಜಿಸ್ಟ್ರೇಟ್‌ಗೆ ತಿಳಿಸಬೇಕಾಗುತ್ತದೆ. ಮಸೂದೆಯ ಪ್ರಕಾರ, ಬಲವಂತದ ಅಥವಾ ಮೋಸದ ಧಾರ್ಮಿಕ ಮತಾಂತರಕ್ಕೆ 1-5 ವರ್ಷಗಳ ಜೈಲು ಶಿಕ್ಷೆಯೊಂದಿಗೆ 15,000 ರೂ. ದಂಡ ಇತ್ತು. ದಲಿತ ಯುವತಿಗೆ ಸಂಬಂಧಿಸಿದ ಪ್ರಕರಣವಾಗಿದ್ದರೆ, 3 ರಿಂದ 10 ವರ್ಷಗಳ ವರೆಗೆ ಜೈಲು ಶಿಕ್ಷೆಯೊಂದಿಗೆ 25 ಸಾವಿರ ರೂಪಾಯಿ ದಂಡ ಇತ್ತು.
The Uttar Pradesh Assembly on Tuesday passed the UP Prohibition of Unlawful Conversion of Religion (Amendment) Bill, 2024, providing for a maximum punishment of life imprisonment to the offenders convicted under certain circumstances.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm