ಬ್ರೇಕಿಂಗ್ ನ್ಯೂಸ್
01-08-24 07:57 pm HK News Desk ದೇಶ - ವಿದೇಶ
ವಯನಾಡ್, ಆಗಸ್ಟ್.1: ದೇವರನಾಡು ಕೇರಳದ ವಯನಾಡು ಜಿಲ್ಲೆಯ ನಾಲ್ಕು ಗ್ರಾಮಗಳ ಸ್ಥಿತಿ ಅಕ್ಷರಶಃ ಸ್ಮಶಾನ ಸದೃಶವಾಗಿದೆ. ಎಲ್ಲಿ ನೋಡಿದರೂ ಹೆಣಗಳ ರಾಶಿ, ತಮ್ಮವರನ್ನು ಕಳೆದುಕೊಂಡು ಅನಾಥರಾದವರ ರೋದನ. ಸದ್ಯಕ್ಕೆ ಪತ್ತೆಯಾದ ಶವಗಳ ಸಂಖ್ಯೆ 270 ದಾಟಿದ್ದರೆ, 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. 400ಕ್ಕೂ ಹೆಚ್ಚು ಮನೆಗಳಿದ್ದ ಮುಂಡಕೈ ಗ್ರಾಮ ಪೂರ್ತಿ ನೆಲಸಮವಾಗಿದ್ದು, ಅಲ್ಲೀಗ 40ರಷ್ಟು ಮನೆಗಳು ಮಾತ್ರ ಉಳಿದುಕೊಂಡಿವೆ ಎಂದರೆ, ಅಲ್ಲಿನ ಘೋರ ಸ್ಥಿತಿ ಅರ್ಥವಾಗುತ್ತದೆ.
ದುರಂತ ನಡೆದಿರುವ ಗ್ರಾಮಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆಯಾಗಿದೆ. ಸತ್ತವರಿಗಿಂತಲೂ ಬದುಕುಳಿದವರ ಸ್ಥಿತಿಯೇ ಘೋರ ಅನ್ನಿಸುವಂತಿದೆ. ತಮ್ಮವರನ್ನೆಲ್ಲ ಕಳಕೊಂಡು ಉಳಿದುಕೊಂಡಿರುವ ಒಂದಿಬ್ಬರು ತಮ್ಮದೆನ್ನುವ ಯಾವುದನ್ನೂ ಉಳಿಸಿಕೊಂಡಿಲ್ಲ. ಉಟ್ಟ ಬಟ್ಟೆಯನ್ನಷ್ಟೇ ಉಳಿಸಿಕೊಂಡಿದ್ದು, ಮನೆ, ಸೊತ್ತು, ಸಂಬಂಧಿಕರನ್ನೆಲ್ಲ ಕಳಕೊಂಡವರು ಗೋಳಿಡುತ್ತಿದ್ದಾರೆ. ಮುಂಡಕೈ ಗ್ರಾಮದ ಜಿಷ್ಣು ರಂಜನ್ ತಮ್ಮವರನ್ನು ಸಾಹಿ ಸಲಹುವುದಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದವರು. ಆದರೆ, ಜಿಷ್ಣುವಿನ ಒಬ್ಬ ಸಣ್ಣ ಸೋದರ ಬಿಟ್ಟರೆ, ತಂದೆ, ತಾಯಿ, ಅಜ್ಜಿ, ಪತ್ನಿ ತನ್ನವರೆಲ್ಲರನ್ನೂ ಕಳಕೊಂಡಿದ್ದಾರೆ.













ಜಿಷ್ಣು ರಂಜನ್ ಸೌದಿ ಅರೇಬಿಯಾದಲ್ಲಿ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ. ದುರಂತಕ್ಕೀಡಾದ ಮುಂಡಕೈ ಗ್ರಾಮದ ಪುಂಜಿರಿವಟ್ಟಂ ಎಂಬಲ್ಲಿ ಅವರಿದ್ದ ಮನೆಯೇ ಮಣ್ಣಿನಲ್ಲಿ ಸಮಾಧಿಯಾಗಿದೆ. ಆತನ ಮನೆಯಲ್ಲಿ ತಂದೆ ರಾಜನ್, ತಾಯಿ ಮರುತೈ, ಸೋದರರಾದ ಜಿನು (27), ಜಿಬಿನ್ (18), ಸೋದರಿ ಆಯಂಡ್ರಿಯಾ (16), ಜಿನು ಅವರ ಪತ್ನಿ ಪ್ರಿಯಾಂಕಾ (25) ಮತ್ತು ಅಜ್ಜಿ ನಾಗಮ್ಮ ವಾಸವಿದ್ದರು. ಇದೀಗ ಅವರೆಲ್ಲರೂ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಮನೆಯಲ್ಲಿದ್ದ ಸಣ್ಣ ಸೋದರ ಶಿಜು (25) ಮಾತ್ರ ದುರಂತದಲ್ಲಿ ಬದುಕುಳಿದಿದ್ದಾನೆ. ಮುಂಡಕೈ ಭಾಗದಲ್ಲಿ ಜುಲೈ 28ರಂದು ಸಣ್ಣ ಮಟ್ಟಿನ ಭೂಕುಸಿತ ಉಂಟಾಗಿತ್ತು. ಇದನ್ನರಿತ ಸೌದಿ ಅರೇಬಿಯಾದಲ್ಲಿದ್ದ ಜಿಷ್ಣು ಗಾಬರಿಯಿಂದ ಮನೆಯವರಿಗೆ ಕರೆ ಮಾಡಿದ್ದರೂ ಸಂಪರ್ಕ ಸಿಕ್ಕಿರಲಿಲ್ಲ.
ಗಾಬರಿಗೊಂಡಿದ್ದ ಜಿಷ್ಣು ಮನೆಯವರ ಸಂಪರ್ಕಕ್ಕಾಗಿ ಪ್ರಯತ್ನಿಸುತ್ತಲೇ ಇದ್ದರು. ಜುಲೈ 30ರ ಸಂಜೆ ತನಕವೂ ಮನೆಯವರ ಸಂಪರ್ಕ ಸಾಧ್ಯವಾಗಿರಲಿಲ್ಲ. ಆಗಲೇ ಅವರಿಗೆ ಮನೆ ಕೊಚ್ಚಿ ಹೋಗಿರುವ ಬಗ್ಗೆ ತಿಳಿದುಬಂದಿತ್ತು. ಅಂದು ಮನೆಯವರು ಸಂಬಂಧಿಕರ ಮನೆಯಲ್ಲಿದ್ದಾರೆಂದು ತಿಳಿದು ನಿಟ್ಟುಸಿರು ಬಿಟ್ಟಿದ್ದರೂ, ಆನಂತರ ತಿಳಿದ ಮಾಹಿತಿ ಅವರನ್ನೇ ದಂಗುಬಡಿಸಿತ್ತು. ಭೂಕುಸಿತದಿಂದ ಎರಡೂ ಮನೆಯವರು ಕೊಚ್ಚಿಕೊಂಡು ಹೋಗಿದ್ದಾರೆನ್ನುವ ಸುದ್ದಿ ಸಿಕ್ಕಿತ್ತು. ಆನಂತರ, ಸೌದಿಯಿಂದ ಮರಳಿ ಬಂದಿದ್ದ ಜಿಷ್ಣು ತನ್ನವರಿಗಾಗಿ ಹುಡುಕಾಟ ನಡೆಸಿದ್ದಾರೆ. ತಂದೆ, ತಾಯಿಯ ಶವ ಸಿಕ್ಕಿದ್ದರೆ, ಉಳಿದವರ ಶವವೂ ಸಿಗಲಿಲ್ಲ. ಒಬ್ಬ ಸೋದರನೊಂದಿಗೆ ಜಿಷ್ಣುಗೆ ಕಣ್ಣೀರಿಡುವುದು ಬಿಟ್ಟರೆ ಬೇರೇನೂ ಉಳಿದಿಲ್ಲ.
At least 256 people have died and over 200 were injured after massive landslides struck the hilly areas near Meppadi in Kerela's Wayanad, Health Minister Veena George said. The Army has rescued around 1,000 people and 220 people are still missing, as rescue operations entered the third day.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
20-04-26 10:54 pm
HK News Staffer
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
20-04-26 09:40 pm
HK News Staffer
ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ...
20-04-26 05:28 pm
2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರ...
20-04-26 01:02 pm
ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಖಾಸಗಿ ತೆಕ್ಕ...
19-04-26 10:41 pm
ಪುತ್ತೂರು ಜಾತ್ರೆ ; ಸುಡುಮದ್ದು ಉತ್ಸವದಲ್ಲಿ ಬೆಂಕಿ...
18-04-26 11:31 pm
20-04-26 09:35 pm
HK News Staffer
30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು...
20-04-26 03:44 pm
ಮಣಿಪಾಲದ ಸಾಫ್ಟ್ವೇರ್ ಕಂಪನಿಗೆ ಕೋಟ್ಯಂತರ ಮೌಲ್ಯದ ಷ...
20-04-26 11:13 am
ಬೈಕಿನಲ್ಲಿ 46 ಲಕ್ಷ ಮೌಲ್ಯದ ಡ್ರಗ್ಸ್ ಇಟ್ಟುಕೊಂಡು ವ...
19-04-26 10:23 pm
ಶಿವಮೊಗ್ಗ ; ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ...
19-04-26 02:58 pm