ಬ್ರೇಕಿಂಗ್ ನ್ಯೂಸ್
14-08-24 10:59 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 14: ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಅಂತಿಮ ಹಂತದಲ್ಲಿ ದುರದೃಷ್ಟದಿಂದ ಪಂದ್ಯಾವಳಿಯಿಂದ ಹೊರಬಿದ್ದ ವಿನೇಶ್ ಫೋಗಟ್ ಗೆ ಕಡೆಗೂ ನ್ಯಾಯ ಸಿಗಲಿಲ್ಲ. ಫೈನಲಿಗೆ ಬಂದಿದ್ದ ತನಗೆ ಬೆಳ್ಳಿ ಪದಕ ಸಿಗಬೇಕೆಂದು ವಿನೇಶ್ ಫೋಗಟ್ ಮಾಡಿದ್ದ ಮನವಿಯನ್ನು ಆರ್ಬಿಟ್ರೇಶನ್ ಕೋರ್ಟ್ ತಿರಸ್ಕರಿಸಿದೆ.
ಆಗಸ್ಟ್ 7ರಂದು ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದೆ ಎಂದು ಒಲಿಂಪಿಕ್ಸ್ ಪಂದ್ಯಾವಳಿ ಉದ್ದೇಶದಿಂದ ಪ್ಯಾರಿಸ್ನಲ್ಲಿ ಮಾಡಲಾಗಿದ್ದ ತಾತ್ಕಾಲಿಕ ಕ್ರೀಡಾ ನ್ಯಾಯಾಲಯ ಹೇಳಿದೆ. ಆಗಸ್ಟ್ 14ರ ಒಳಗೆ ಅಂತಿಮ ತೀರ್ಪು ಬರುತ್ತೆ ಎನ್ನಲಾಗಿತ್ತು. ಇದೀಗ ವಿವರವಾದ ರಿಪೋರ್ಟ್ ಬಂದಿಲ್ಲವಾದರೂ, ಒಂದು ಗೆರೆಯ ಹೇಳಿಕೆಯನ್ನು ನ್ಯಾಯಾಲಯ ಪ್ರಕಟಿಸಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
50 ಕೇಜಿ ವಿಭಾಗದ ಕುಸ್ತಿ ಫೈನಲಿಗೆ ಬಂದಿದ್ದ ವಿನೇಶ್ ಫೋಗಟ್, 100 ಗ್ರಾಮ್ ಭಾರದ ಕಾರಣಕ್ಕೆ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದರು. ಫೈನಲಿನಲ್ಲಿ ಬಂಗಾರದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ವಿನೇಶ್ ಕೊನೆಕ್ಷಣದಲ್ಲಿ ಹೊರಗುಳಿಯುವಂತಾಗಿದ್ದು ಭಾರತದಲ್ಲಿ ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು. ಕ್ರೀಡಾ ಪ್ರಿಯರಿಗೆ ತೀವ್ರ ನಿರಾಶೆಯಾಗಿತ್ತು. ಆನಂತರ, ತಾನು ಫೈನಲಿಗೆ ಬಂದ ಕಾರಣ ಬೆಳ್ಳಿ ಪದಕವನ್ನು ತನಗೇ ನೀಡಬೇಕು ಎಂದು ವಿನೇಶ್ ಕ್ರೀಡಾ ಕೋರ್ಟಿಗೆ ಮನವಿ ಮಾಡಿದ್ದರು. ಅಲ್ಲದೆ, ಕೋರ್ಟ್ ತೀರ್ಪು ಬರದೆ ಭಾರತಕ್ಕೆ ಮರಳುವುದಿಲ್ಲ ಎಂದೂ ವಿನೇಶ್ ಹೇಳಿದ್ದರು. ಇದೇ ಆಘಾತದಲ್ಲಿ ವಿನೇಶ್ ಕುಸ್ತಿ ಪಂದ್ಯಾಟಕ್ಕೇ ವಿದಾಯ ಘೋಷಿಸಿದ್ದರು.
The Court of Arbitration for Sport (CAS) has dismissed the petition from wrestler Vinesh Phogat to be awarded a joint silver medal at the Paris Olympics. This move came just a day after the CAS had bought itself more time to decide the fate of Vinesh Phogat’s silver medal. On Tuesday, the CAS had deferred the verdict till August 16, Friday.
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm