ಏಕರೂಪ ನಾಗರಿಕ ಸಂಹಿತೆ ಒಪ್ಪುವುದಿಲ್ಲ, ಷರಿಯಾ ಕಾನೂನು ಬಗ್ಗೆ ನಾವು ರಾಜಿ ಮಾಡಿಕೊಳ್ಳಲ್ಲ ; ಪ್ರಧಾನಿ ಜಾತ್ಯತೀತ ಸಂಹಿತೆ ಪ್ರಸ್ತಾಪಕ್ಕೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧ 

18-08-24 12:06 pm       HK News Desk   ದೇಶ - ವಿದೇಶ

ಮುಸ್ಲಿಮರಿಗೆ ಏಕರೂಪ ಅಥವಾ ಜಾತ್ಯತೀತ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ. ಷರಿಯಾ ಕಾನೂನಿನೊಂದಿಗೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.

ನವದೆಹಲಿ, ಆಗಸ್ಟ್.18: ಮುಸ್ಲಿಮರಿಗೆ ಏಕರೂಪ ಅಥವಾ ಜಾತ್ಯತೀತ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ. ಷರಿಯಾ ಕಾನೂನಿನೊಂದಿಗೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. 

ಪ್ರಧಾನ ಮಂತ್ರಿಗಳು ಜಾತ್ಯತೀತ ನಾಗರಿಕ ಸಂಹಿತೆಗಾಗಿ ಕರೆ ನೀಡಿರುವುದನ್ನು ಪರಿಗಣಿಸುತ್ತೇವೆ. ಆದರೆ ಧಾರ್ಮಿಕ ವೈಯಕ್ತಿಕ ಕಾನೂನುಗಳನ್ನು ಕೋಮುವಾದ ಎಂದು ಕರೆಯುವುದನ್ನು ಒಪ್ಪುವುದಿಲ್ಲ. ಮುಸ್ಲಿಂ ವೈಯಕ್ತಿಕ ಕಾನೂನಿನೊಂದಿಗೆ ಎಂದಿಗೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಜಾತ್ಯತೀತ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ ಎಂದು ಮಂಡಳಿ ವಕ್ತಾರ ಡಾ. ಎಸ್‌ಕ್ಯೂಆರ್ ಇಲ್ಯಾಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಧರ್ಮದ ಆಧಾರದ ಮೇಲೆ ವೈಯಕ್ತಿಕ ಕಾನೂನುಗಳನ್ನು ಕೋಮುವಾದ ಎಂದು ಕರೆಯುವುದನ್ನು ಒಪ್ಪುವುದಿಲ್ಲ. ಮತ್ತು ಜಾತ್ಯತೀತ ನಾಗರಿಕ ಸಂಹಿತೆಯ ಮೂಲಕ ಅವುಗಳನ್ನು ಬದಲಿಸುವ ಪ್ರಧಾನಿಯವರು ಮಾಡಿರುವ ಘೋಷಣೆ ಬಗ್ಗೆ ನಮಗೆ ಆತಂಕವಿದೆ ಎಂದು ಹೇಳಿದ್ದಾರೆ. ಆಯಾ ಸಮುದಾಯಗಳ ಕೌಟುಂಬಿಕ ಕಾನೂನುಗಳು ತಮ್ಮದೇ ಆದ ಧಾರ್ಮಿಕ ಮತ್ತು ಹಳೆಯ ಸಂಪ್ರದಾಯಗಳನ್ನು ಆಧರಿಸಿವೆ. ಆದ್ದರಿಂದ, ಅವುಗಳನ್ನು ಬದಲಿಸುವುದು ಮತ್ತು ಎಲ್ಲರಿಗೂ ಜಾತ್ಯತೀತ ನೆಪದಲ್ಲಿ ಕಾನೂನು ಹೇರುವುದು, ಆ ರೀತಿಯ ಜಾತ್ಯತೀತವಾದ ಸೃಷ್ಟಿಸಲು ಪ್ರಯತ್ನಿಸುವುದು ಧರ್ಮದ ನಿರಾಕರಣೆ ಮತ್ತು ಪಾಶ್ಚಿಮಾತ್ಯರ ಅನುಕರಣೆಯಾಗಿದೆ ಎಂದಿದ್ದಾರೆ.

The All India Muslim Personal Law Board said on Saturday that a uniform or secular civil code will not be acceptable to Muslims as they will not compromise with Sharia law.