ಬ್ರೇಕಿಂಗ್ ನ್ಯೂಸ್
17-02-26 08:50 pm HK Desk ದೇಶ - ವಿದೇಶ
ನವದೆಹಲಿ, ಫೆ.17: ಪಾಕಿಸ್ತಾನ ಜೈಲಿನಲ್ಲಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಭಾರತದ ಮಾಜಿ ಕ್ರಿಕೆಟ್ ಕಪ್ತಾನರು ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಕ್ರಿಕಟ್ ತಂಡಗಳ 14 ಮಾಜಿ ನಾಯಕರು ಪಾಕಿಸ್ತಾನನ ಪ್ರಧಾನಿ ಶೆಹಬಾಝ್ ಶರೀಫ್ ಅವರಿಗೆ ಪತ್ರ ಬರೆದಿದ್ದಾರೆ.
ಪಾಕಿಸ್ತಾನದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಇಮ್ರಾನ್ ಖಾನ್ ಅವರನ್ನು ವಿವಿಧ ಪ್ರಕರಣಗಳ ನೆಪದಲ್ಲಿ 2023ರಿಂದ ಜೈಲಿಗೆ ಹಾಕಲಾಗಿದೆ. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಶೇಕಡಾ 85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ. ಜೈಲಿನ ಅಧಿಕಾರಿಗಳಾಗಲೀ, ಪಾಕ್ ಸರ್ಕಾರವಾಗಲೀ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪಗಳಿದ್ದವು. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಜೊತೆಗೆ ಕ್ರಿಕೆಟ್ ಆಡಿದ್ದ ದೇಶ- ಭಾಷೆಗಳ ಗಡಿಯ ಮೀರಿ ತಮ್ಮ ನಡುವೆ ಅಪರಿಮಿತ ಸ್ನೇಹ ಸಂಬಂಧವಿದೆ ಎಂಬುದನ್ನು ತೋರಿಸಿದ್ದಾರೆ.
ಕ್ರಿಕೆಟ್ ಆಡುವ ವಿವಿಧ ದೇಶಗಳ ಒಟ್ಟು 14 ಮಾಜಿ ಖ್ಯಾತ ಕ್ರಿಕೆಟಿಗರು ಇಮ್ರಾನ್ ಖಾನ್ ಅವರು ಕ್ರಿಕೆಟ್ ಗೆ ನೀಡಿರುವ ಕೊಡುಗೆ ಅಪಾರವಾಗಿದ್ದು ಅವರನ್ನು ಜೈಲಿನಲ್ಲಿ ಚೆನ್ನಾಗಿ ನೋಡಿಕೊಳ್ಳಿ ಎಂದು ಜಂಟಿಯಾಗಿ ಮನವಿ ಮಾಡಿದ್ದಾರೆ. ಸುನಿಲ್ ಗವಾಸ್ಕರ್, ಕಪಿಲ್ ದೇವ್, ಗ್ರೆಗ್ ಚಾಪೆಲ್, ಮೈಕೆಲ್ ಅಥರ್ಟನ್, ಅಲನ್ ಬಾರ್ಡರ್, ಮೈಕೆಲ್ ಬ್ರಿಯಾರ್ಲಿ, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಡೇವಿಡ್ ಗೋವರ್, ಕಿಮ್ ಹ್ಯೂಸ್, ನಾಸರ್ ಹುಸೇನ್, ಕ್ಲೈವ್ ಲಾಯ್ಡ್, ಸ್ಟೀವ್ ವಾ ಮತ್ತು ಜಾನ್ ರೈಟ್ ಪತ್ರಕ್ಕೆ ಸಹಿ ಹಾಕಿದ್ದು ಪಾಕ್ ಪ್ರಧಾನಿಗೆ ಕಳಿಸಿಕೊಟ್ಟಿದ್ದಾರೆ.

ಇವರಲ್ಲಿ ಕ್ಲೈವ್ ಲಾಯ್ಡ್, ಕಪಿಲ್ ದೇವ್, ಅಲನ್ ಬಾರ್ಡರ್, ಸ್ವೀವ್ ವಾ ಮತ್ತು ಮಹಿಳಾ ಕ್ರಿಕೆಟರ್ ಬೆಲಿಂಡಾ ಕ್ಲಾರ್ಕ್ ವಿಶ್ವಕಪ್ ವಿಜೇತ ತಂಡಗಳ ನಾಯಕರು ಎಂಬುದು ಗಮನಾರ್ಹ. ಪಾಕಿಸ್ತಾನದ ಗೌರವಾನ್ವಿತ ಮಾಜಿ ನಾಯಕ ಮತ್ತು ವಿಶ್ವ ಕ್ರಿಕೆಟ್‌ನ ದಂತಕಥೆ ಇಮ್ರಾನ್ ಖಾನ್ ಅವರ ಚಿಕಿತ್ಸೆ ಮತ್ತು ಜೈಲು ವಾಸದ ಪರಿಸ್ಥಿತಿಗಳ ಬಗ್ಗೆ ಕಳವಳದಿಂದ ಬರೆಯುತ್ತಿದ್ದೇವೆ. ಯಾವುದೇ ಪೂರ್ವಾಗ್ರಹವಿಲ್ಲದೆ, ಕ್ರೀಡಾ ಮನೋಭಾವ ಮತ್ತು ಸಾಮಾನ್ಯ ಮಾನವೀಯತೆಯ ಹಿನ್ನೆಲೆಯಲ್ಲಿ ಈ ಮನವಿ ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
1992 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ನಾಯಕರಾಗಿದ್ದ ಇಮ್ರಾನ್ ಖಾನ್ ಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ಗೆಲುವಿಗೆ ಕಾರಣರಾಗಿದ್ದರು. ಈ ವಿಜಯವು ಗಡಿಗಳನ್ನು ಮೀರಿ ಯುವಪೀಳಿಗೆಗೆ ಸ್ಫೂರ್ತಿಯಾಗಿತ್ತು. ನಮ್ಮಲ್ಲಿ ಅನೇಕರು ಅವರ ವಿರುದ್ಧ ಸ್ಪರ್ಧಿಸಿದ್ದೇವೆ, ಅವರೊಂದಿಗೆ ಮೈದಾನ ಹಂಚಿಕೊಂಡಿದ್ದೇವೆ. ಅವರ ಆಟವನ್ನು ನೋಡಿ ಇಷ್ಟಪಟ್ಟಿದ್ದೇವೆ. ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರು ಮತ್ತು ಸವ್ಯಸಾಚಿಗಳಲ್ಲಿ ಒಬ್ಬರಾಗಿದ್ದಾರೆ.
ಇದರ ಹೊರತಾಗಿ ಪಾಕಿಸ್ತಾನದ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದರು, ಸವಾಲಿನ ಅವಧಿಯಲ್ಲಿ ತಮ್ಮ ರಾಷ್ಟ್ರವನ್ನು ಮುನ್ನಡೆಸಿದರು. ತಮ್ಮ ದೇಶದ ಅತ್ಯುನ್ನತ ಹುದ್ದೆಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಗೌರವವನ್ನು ಹೊಂದಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿರುವ ಅವರ ಪರಿಸ್ಥಿತಿ ಮತ್ತ ಆರೋಗ್ಯ ಸ್ಥಿತಿ ನಮಗೆ ತೀವ್ರ ಕಳವಳ ಉಂಟುಮಾಡಿದೆ. ಎಂದು ಪತ್ರದಲ್ಲಿ ಆತಂಕ ತೋಡಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am