ಬ್ರೇಕಿಂಗ್ ನ್ಯೂಸ್
24-08-24 12:36 pm HK News Desk ದೇಶ - ವಿದೇಶ
ಕೊಲ್ಕೊತ್ತಾ, ಆಗಸ್ಟ್.24: ನನ್ನ ಮಗಳನ್ನು ಸಾಯಿಸಲು ಯಾರೋ ಆರೋಪಿಯನ್ನು ಛೂಬಿಟ್ಟಿದ್ದರು. ಅಲ್ಲಿನ ಕಹಿಸತ್ಯಗಳನ್ನು ತಿಳಿದುಕೊಂಡಿದ್ದಕ್ಕಾಗಿ ಸಾಯಿಸಿದ್ದಾರೆ ಎಂದು ಕೊಲ್ಕತ್ತಾದಲ್ಲಿ ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ತಾಯಿ ಹೇಳಿದ್ದಾರೆ.
ಆಜ್ ತಕ್ ಬಾಂಗ್ಲಾ ಸುದ್ದಿ ವಾಹಿನಿಗೆ ಸಂದರ್ಶನ ನೀಡಿರುವ ಮಹಿಳೆ, ತನ್ನ ಮಗಳನ್ನು ಯಾರೋ ಉದ್ದೇಶಪೂರ್ವಕ ಸಾಯಿಸಿದ್ದಾರೆ. ಇದರ ಹಿಂದೆ ನಿಗೂಢ ಸಂಚು ಇದೆ. ಕೊಲ್ಕತ್ತಾ ಪೊಲೀಸ್ ಇಲಾಖೆಗೆ ಸೇರಿದ ಆರೋಪಿ ಸಂಜಯ್ ರಾಯ್ ಯಾರದ್ದೋ ಅಣತಿ ಮೇರೆಗೆ ಈ ಕೃತ್ಯ ಎಸಗಿದ್ದಾನೆ. ಆಸ್ಪತ್ರೆ ಒಳಗಿನ ಡಾರ್ಕ್ ಸೀಕ್ರೆಟ್ ಗಳನ್ನು ಆಕೆ ಅರಿತುಕೊಂಡಿದ್ದಳು ಅನ್ನುವ ಕಾರಣಕ್ಕೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಿನ್ಸಿಪಾಲ್ ಸಂದೀಪ್ ಘೋಷ್ ತನ್ನನ್ನು ಫೇಲ್ ಮಾಡುತ್ತಾನೆ ಎಂದು ಮಗಳು ಹೆದರಿಕೊಂಡಿದ್ದಳು. ಅಂದು ಕೊಲೆಯಾದ ದಿನವೂ ನನ್ನ ಮಗಳ ಮೃತದೇಹ ತೋರಿಸದೆ ಮುಚ್ಚಿಟ್ಟಿದ್ದರು. ಯಾಕೆ ಮಗಳ ಮುಖ ನೋಡುವುದಕ್ಕೆ ನಾಲ್ಕು ಗಂಟೆ ಬೇಕಾಯಿತು. ಅವರು ಶವವನ್ನು ಮಣ್ಣು ಮಾಡುವುದಕ್ಕೇ ಹೆಚ್ಚು ಆಸಕ್ತಿ ವಹಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಎಂಡಿ ಪೂರೈಸಬೇಕೆಂದು ಭಾರೀ ಆಸೆಯಿಂದ ಇದ್ದಳು. 36 ಗಂಟೆ ಕೆಲಸ ಮಾಡಿದರೂ, ಅದರ ಜೊತೆಗೆ ಆನ್ಲೈನ್ ಕೋರ್ಸ್ ಮಾಡುತ್ತಿದ್ದಳು. ಕೊರೊನಾ ಸಂದರ್ಭದಲ್ಲಿ ಸತತ ನಾಲ್ಕು ದಿನ ಕೆಲಸ ಮಾಡುತ್ತಿದ್ದಳು. ಮೊನ್ನೆ ಕೊನೆಯ ಬಾರಿ ತನ್ನ ತಂದೆಯ ಆರೋಗ್ಯ ವಿಚಾರಿಸಿದ್ದಳು. ಅವರಿಗೆ ಔಷಧಿಯನ್ನೂ ತಾನೇ ಆರ್ಡರ್ ಮಾಡಿದ್ದಳು. ಕೊನೆಗೆ, ತನಗೆ ಊಟ ಬಂತೆಂದು ಹೇಳಿ ಕರೆ ಕಟ್ ಮಾಡಿದ್ದಳು ಎಂದು ಗೋಗರೆದಿದ್ದಾರೆ.
The mother of Sanjoy Roy, accused of raping and killing a trainee doctor in Kolkata, said her son was "harmless" and such an incident could have been prevented had she been more strict with him. In an exclusive interview with India Today, Roy's mother indicated that someone might have framed her son and demanded strict punishment.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm