ಬ್ರೇಕಿಂಗ್ ನ್ಯೂಸ್
05-09-24 07:53 pm HK News Desk ದೇಶ - ವಿದೇಶ
ತಮಿಳುನಾಡು, ಸೆ.05: ಹೇಮಾ ಸಮಿತಿ ವರದಿಯ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಬಗ್ಗೆ ಸುದ್ದಿಯಾಗುತ್ತಿರುವ ನಡುವೆ ಈಗ ತಮಿಳು ಚಿತ್ರರಂಗದ ನಿರ್ದೇಶಕರೊಬ್ಬರ ಮೇಲೆ ತಮಿಳು, ಮಲಯಾಳಂ ಸಿನಿಮಾದ ನಟಿ ಸೌಮ್ಯ ಗಂಭೀರ ಆರೋಪ ಮಾಡಿದ್ದಾರೆ. ಜನನಾಂಗಕ್ಕೆ ‘ರಾಡ್’ ತುರುಕಿಸಿ ನಿರ್ದೇಶಕರೊಬ್ಬರು ಖುಷಿಪಟ್ಟಿದ್ದರು ಎಂದು ತಮಿಳು ನಟಿ ಸೌಮ್ಯ ಹೇಳಿದ್ದಾರೆ.
ತಮಿಳು ನಿರ್ದೇಶಕರೊಬ್ಬರು ತನ್ನ ಮೇಲೆ ಮಾಡಿರುವ ಭೀಕರವಾದ ಮಾನಸಿಕ, ದೈಹಿಕ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ಜನಪ್ರಿಯ ನಟಿ ಸೌಮ್ಯಾ ಎನ್‌ಡಿಟಿವಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮಗಳು ಎಂದು ಹೇಳಿಕೊಂಡೇ ತನ್ನ ಮೇಲೆ ಒಂದು ವರ್ಷ ನಿರಂತರವಾಗಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ.
ತನ್ನನ್ನು ಲೈಂಗಿಕ ಗುಲಾಮರಂತೆ ಇರಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲದೆ ನಟಿಯ ಜನನಾಂಗಕ್ಕೆ ‘ರಾಡ್’ ತುರಿಕಿಸಿ ನಿರ್ದೇಶಕ ಖುಷಿ ಪಟ್ಟಿರುವುದಾಗಿಯೂ ಹೇಳಿದ್ದಾರೆ. ಆದರೆ ಸದ್ಯಕ್ಕೆ ತಾನು ನಿರ್ದೇಶಕ ಹೆಸರು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.
ನಾನು ಆತನ ಹೆಸರನ್ನು ಬಹಿರಂಗವಾಗಿ ಹೇಳುವುದಿಲ್ಲ. ನಾನು ಸದ್ಯ ಹಲವು ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ನಡೆಸುತ್ತಿರುವ ಕೇರಳ ಸರ್ಕಾರ ರಚಿಸಿದ ವಿಶೇಷ ತನಿಖಾ ಸಂಸ್ಥೆಗೆ ಆ ನಿರ್ದೇಶಕನ ಹೆಸರನ್ನು ತಿಳಿಸುತ್ತೇನೆ” ಎಂದು ನಟಿ ಸೌಮ್ಯ ತಿಳಿಸಿದ್ದಾರೆ.
“ನಾನು 18 ವರ್ಷದ ಹುಡುಗಿಯಾಗಿದ್ದೆ. ನನ್ನ ಪೋಷಕರಿಗೆ ಚಿತ್ರರಂಗದ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ಆರಂಭದಲ್ಲಿ ನನ್ನ ಬಳಿ ಆ ವ್ಯಕ್ತಿ ಮಾತನಾಡುತ್ತಿರಲಿಲ್ಲ. ಆತನ ಪತ್ನಿ ನಿರ್ದೇಶಕಿಯಾಗಿದ್ದರು. ಆದರೆ ನಿಜವಾಗಿ ಆತನೇ ಎಲ್ಲಾ ಸಿನಿಮಾದ ನಿರ್ದೇಶನ ಮಾಡುತ್ತಿದ್ದ” ಎಂದು ಹೇಳಿದ್ದಾರೆ.
ಒಂದು ವರ್ಷ ನಡೆದ ಈ ದೌರ್ಜನ್ಯದಿಂದಾಗಿ ನಾನು ಸಂಪೂರ್ಣವಾಗಿ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೆ. ಈ ಆಘಾತದಿಂದ ಹೊರಗೆ ಬರಲು ನನಗೆ 30 ವರ್ಷಗಳು ಬೇಕಾಯಿತು ಎಂದಿದ್ದಾರೆ.
The wave of sexual assault and rape allegations that have shaken the Malayalam film industry has now reverberated in Tamil Nadu. South Indian actor Sowmya has accused a Tamil director of severe mental, physical, and sexual abuse, including the horrific act of inserting a rod into her genitals for 'entertainment.'
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm