ಬ್ರೇಕಿಂಗ್ ನ್ಯೂಸ್
08-09-24 01:47 pm HK News Desk ದೇಶ - ವಿದೇಶ
ಚಂಡೀಗಢ, ಸೆ.8: ಹರ್ಯಾಣ ಅಸೆಂಬ್ಲಿ ಚುನಾವಣೆಯಲ್ಲಿ ಜುಲಾನಾ ಕ್ಷೇತ್ರದಿಂದ ಕಾಂಗ್ರೆಸಿನಿಂದ ಕಣಕ್ಕಿಳಿದಿರುವ ಕುಸ್ತಿ ಪಟು ವಿನೇಶ್ ಫೋಗಟ್ ಭಾನುವಾರವೇ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಅವರನ್ನು ಆಕೆಯ ರಾಥಿ ಸಮುದಾಯದರು ಮತ್ತು ಖಾಪ್ ಪಂಚಾಯತ್ ಪ್ರಮುಖರು ಸ್ವಾಗತಿಸಿದ್ದಾರೆ.
ಜುಲಾನಾ ಕ್ಷೇತ್ರವು ಜಾಟ್ ಸಮುದಾಯದ ಪ್ರಭಾವ ಹೆಚ್ಚಿರುವ ಅಸೆಂಬ್ಲಿ ಕ್ಷೇತ್ರವಾಗಿದೆ. ಕಳೆದ 15 ವರ್ಷಗಳಿಂದ ಈ ಕ್ಷೇತ್ರವನ್ನು ಇಂಡಿಯನ್ ನೇಶನಲ್ ಲೋಕದಳ (ಐಎನ್ ಎಲ್ ಡಿ ಮತ್ತು ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಲೋಕದಳ್ ಪಕ್ಷದ ಪರ್ಮಿಂದರ್ ಸಿಂಗ್ 2009 ಮತ್ತು 2014ರಲ್ಲಿ ಈ ಕ್ಷೇತ್ರವನ್ನು ಗೆದ್ದುಕೊಂಡಿದ್ದರೆ, 2019ರಲ್ಲಿ ಜೆಜೆಪಿಯ ಅಮರ್ ಜೀತ್ ಧಾಂಡಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು.
ಒಲಿಂಪಿಕ್ಸ್ ಹೀರೋ ಆಗಿ ಮಿಂಚು ಹರಿಸಿರುವ ವಿನೇಶ್ ಫೋಗಟ್ ಕಣಕ್ಕೆ ಇಳಿದಿರುವುದು ಜುಲಾನಾ ಕ್ಷೇತ್ರವನ್ನು ಹೈಪ್ರೊಫೈಲ್ ಕಣವಾಗಿಸಿದೆ. ರಾಥಿ ಸಮುದಾಯದವರು ವಿನೇಶ್ ಪರವಾಗಿ ನಿಂತಿದ್ದಾರೆ. ಇದರ ಜೊತೆಗೆ, ಜಾಟ್ ಸಮುದಾಯದ ಮತಗಳನ್ನು ಇವರು ಎಷ್ಟು ಆಕರ್ಷಿಸಲಿದ್ದಾರೆ ಎನ್ನುವುದು ಗೆಲುವನ್ನು ನಿರ್ಧರಿಸಲಿದೆ. ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ ಸಿಂಗ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಾಗ, ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಮುಂಚೂಣಿಯಲ್ಲಿ ನಿಂತು ಪ್ರತಿಭಟಿಸಿದ್ದರು. ಬಿಜೆಪಿ ಮಾಜಿ ಸಂಸದರಾಗಿರುವ ಬ್ರಿಜ್ ಭೂಷಣ ಸಿಂಗ್ ರಾಜಕೀಯ ಎದುರಾಳಿಯಾಗಿ ಬದ0ಲಾಗಿದ್ದು, ವಿನೇಶ್ ಅವರನ್ನು ನಾವು ಸೋಲಿಸುತ್ತೇವೆ ಎಂದು ತೊಡೆ ತಟ್ಟಿದ್ದಾರೆ.
ಪ್ರತಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದೇನೆ, ಜನರ ಕಲ್ಯಾಣವೇ ನನ್ನ ಗುರಿ. ಮಹಿಳೆಗೆ ಅನ್ಯಾಯವಾದಾಗ ಧ್ವನಿ ಎತ್ತಿದ್ದು ಕಾಂಗ್ರೆಸ್. ಅದಕ್ಕಾಗಿ ಆ ಪಕ್ಷದ ಜೊತೆಗೆ ನಿಂತಿದ್ದೇನೆ ಎಂದು ಹೇಳಿದ್ದಾರೆ. ಬ್ರಿಜ್ ಭೂಷಣ ಸಿಂಗ್ ಜಾಟ್ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು, ವಿನೇಶ್ ಫೋಗಟ್ ಕಾಂಗ್ರೆಸ್ ಸೇರಿದ್ದನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಪ್ರಭಾವಿ ವ್ಯಕ್ತಿಯನ್ನು ಆಕೆಯ ಮುಂದೆ ಕಣಕ್ಕಿಳಿಸಲು ಮುಂದಾಗಿದ್ದಾರೆ.
Vinesh Phogat, the ace wrestler and Congress candidate from the Julana constituency for the upcoming Haryana Assembly election, began her poll campaign on Sunday. Hundreds of party workers welcomed her as she arrived for the campaign. The 30-year-old Olympic wrestler will address a gathering as seven khap panchayats, including the Rathi community's, are set to welcome her.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm