ಬ್ರೇಕಿಂಗ್ ನ್ಯೂಸ್
17-09-24 07:08 pm HK News Desk ದೇಶ - ವಿದೇಶ
ನವದೆಹಲಿ, ಸೆ.17: ದೆಹಲಿಯ ನೂತನ ಸಿಎಂ ಆಗಿ ಅತಿಶಿ ಮರ್ಲೆನಾ ಸಿಂಗ್ ಆಯ್ಕೆಯಾಗಿದ್ದಾರೆ. ಆಮ್ ಆದ್ಮಿ ಪಾರ್ಟಿಯ (ಆಪ್) ಶಾಸಕಾಂಗ ಪಕ್ಷದ ಸಭೆಯಲ್ಲಿ ಅತಿಶಿ ಅವರನ್ನು ಶಾಸಕಾಂಗ ಪಕ್ಷದ ನೂತನ ನಾಯಕಿಯನ್ನಾಗಿ ಆರಿಸಲಾಗಿದೆ. ಹಾಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು ಅದರ ಬೆನ್ನಲ್ಲೇ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆಮ್ ಆದ್ಮಿ ಪಾರ್ಟಿ ಸೇರಿದ ಹತ್ತೇ ವರ್ಷದಲ್ಲಿ ಅತಿಶಿ ಮುಖ್ಯಮಂತ್ರಿ ಆಗಿದ್ದಾರೆ. 2012ರಲ್ಲಿ ಆಮ್ ಆದ್ಮಿ ಪಾರ್ಟಿ ಆರಂಭವಾಗಿತ್ತು. ಮರು ವರ್ಷವೇ ಅತಿಶಿ ಅವರು ಪಾರ್ಟಿ ಸೇರಿದ್ದರು. ಒಂದೇ ವರ್ಷದಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಆಮ್ ಆದ್ಮಿ ಪಾರ್ಟಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು.



1981ರ ಜೂನ್ 8ರಂದು ದೆಹಲಿಯ ಪಂಜಾಬಿ ಮೂಲದ ಕುಟುಂಬದಲ್ಲಿ ಜನಿಸಿದ್ದ ಅತಿಶಿ ಮರ್ಲೆನಾ ಸಿಂಗ್ ದೆಹಲಿ ವಿವಿಯಿಂದ ಬಿಎ ಪದವಿ ಪಡೆದಿದ್ದಾರೆ. ಪ್ರತಿಷ್ಠಿತ ಆಕ್ಸ್ ಫರ್ಡ್ ವಿವಿಯಲ್ಲಿ ಎಂಎ ವ್ಯಾಸಂಗ ಮಾಡಿದ್ದಾರೆ. ಪತಿಯ ಹೆಸರು ಪ್ರವೀಣ್ ಸಿಂಗ್ ಎಂದಾಗಿದ್ದು ಇದರಿಂದಲೇ ಅತಿಶಿ ಜೊತೆಗೆ ಸಿಂಗ್ ಎಂಬ ಹೆಸರು ಬಂದಿತ್ತು. ಆದರೆ, ಜನರು ತಮ್ಮನ್ನು ಅತಿಶಿ ಹೆಸರಿನಿಂದಲೇ ಗುರುತಿಸಬೇಕು ಎಂದು ಬಯಸಿ ಸಾರ್ವಜನಿಕ ಜೀವನಕ್ಕೆ ಬಂದ ಬಳಿಕ ಮರ್ಲೆನಾ ಹಾಗೂ ಸಿಂಗ್ ಎಂಬ ಪದಗಳನ್ನು ಕೈಬಿಟ್ಟಿದ್ದರು. ಸಚಿವ ಸಂಪುಟ, ಸರ್ಕಾರಿ ಕಡತಗಳಲ್ಲಿ ಅತಿಶಿ ಎಂದಷ್ಟೇ ಬಳಸುವಂತೆ ಸೂಚಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದರ್ ಜೈನ್ ಸಚಿವ ಸ್ಥಾನ ತೆರವಾಗಿದ್ದರಿಂದ ಅತಿಶಿ ಅವರನ್ನು ಕೇಜ್ರಿವಾಲ್ ತನ್ನ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಂಸ್ಕೃತಿ, ಪ್ರವಾಸ ಹಾಗೂ ಲೋಕೋಪಯೋಗಿ ಇಲಾಖೆಗಳನ್ನು ಅವರಿಗೆ ವಹಿಸಲಾಗಿತ್ತು. ಸಚಿವ ಖಾತೆ ನಿರ್ವಹಿಸಿದ ಅನುಭವ ಇಲ್ಲದಿದ್ದರೂ ಎಲ್ಲ ಇಲಾಖೆಗಳನ್ನು ಏಕಕಾಲದಲ್ಲಿ ಮುನ್ನಡೆಸಿದ್ದು ದೆಹಲಿ ಜನರ ಗಮನ ಸೆಳೆದಿತ್ತು.
Aam Aadmi Party (AAP) supremo Arvind Kejriwal on Tuesday met Lt Governor VK Saxena and tendered his resignation as the Chief Minister of Delhi. Senior AAP leader and minister Atishi, who was chosen by the party legislators to be the next Chief Minister, met the Lt Governor to stake claim to the post.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
04-10-26 07:07 pm
HK News Staffer
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್ಪಿಟ್ ಬಾಗಿಲು ತೆ...
02-10-26 05:28 pm
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
03-10-26 09:56 pm
HK News Staffer
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
04-10-26 12:51 pm
HK News Staffer
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm
Mangalore Crime, Mangalore Police, Delhi Thie...
03-10-26 06:39 pm
Kasaragod crime: ಕಾಸರಗೋಡು ; ಮನೆ ಮೇಲೆ ಬಿದ್ದ ಬೋ...
03-10-26 05:05 pm
Infra Developers, Vasudevan: ಬೆಂಗಳೂರಿನಲ್ಲಿ ಫ್...
03-10-26 03:41 pm