ಬ್ರೇಕಿಂಗ್ ನ್ಯೂಸ್
18-09-24 02:52 pm HK News Desk ದೇಶ - ವಿದೇಶ
ನವದೆಹಲಿ, ಸೆ.18: ಸ್ಮಾರ್ಟ್ ಫೋನ್ ಬಳಸಿದರೆ ಇಸ್ರೇಲಿಗರು ಹ್ಯಾಕ್ ಮಾಡುತ್ತಾರೆ ಎಂಬ ಭಯದಲ್ಲಿ ಮೆಸೇಜ್ ಕಳಿಸಲು ಪೇಜರ್ ಬಳಸುತ್ತಿದ್ದ ಹೆಜ್ಬುಲ್ಲಾ ಬಂಡುಕೋರರಿಗೆ ಮರ್ಮಾಘಾತ ಉಂಟಾಗಿದೆ. ಲೆಬನಾನ್ ಮತ್ತು ಸಿರಿಯಾದಲ್ಲಿ ಉಗ್ರರು ಬಳಸುತ್ತಿದ್ದು ಸಾವಿರಾರು ಪೇಜರ್ ಏಕಕಾಲದಲ್ಲಿ ಸ್ಫೋಟಗೊಂಡಿದ್ದು ಒಂಬತ್ತು ಮಂದಿ ಬಲಿಯಾಗಿದ್ದಾರೆ. ಇದನ್ನೂ ಇಸ್ರೇಲ್ ಸೇನಾಪಡೆ ಮಾಡಿದೆ ಎನ್ನಲಾಗುತ್ತಿದ್ದು ಹೊಸ ರೀತಿಯ ಯುದ್ಧ ತಂತ್ರಕ್ಕೆ ಜಗತ್ತು ಬೆರಗಾಗಿದೆ.
ಲೆಬನಾನ್ ದೇಶದಲ್ಲಿ ಬೀಡುಬಿಟ್ಟಿರುವ ಹೆಜ್ಬುಲ್ಲಾ ಉಗ್ರರು ಬಳಸುವ ಪೇಜರ್ ಗಳು ಏಕಾಏಕಿ ಬ್ಲಾಸ್ಟ್ ಆಗಿದ್ದು 9 ಮಂದಿ ಸಾವಿಗೀಡಾಗಿ 2,800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸುಮಾರು 200 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಗಾಯಾಳುಗಳಿಗೆ ಹೆಚ್ಚಾಗಿ ಮುಖ, ಕೈಗಳು ಮತ್ತು ಹೊಟ್ಟೆಗೆ ಗಾಯಗಳಾಗಿವೆ ಎಂದು ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಹೇಳಿದ್ದಾರೆ. ಹೆಜ್ಬುಲ್ಲಾ ಉಗ್ರರು ಎರಡು ದಿನಗಳ ಹಿಂದಷ್ಟೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಅದಕ್ಕೆ ನೀವು ತಕ್ಕ ಬೆಲೆ ತೆರುತ್ತೀರಿ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಹೆಜ್ಬುಲ್ಲಾ ಉಗ್ರರಿಗೆ ಬೆಂಬಲಿಸುತ್ತಿದ್ದ ಲೆಬನಾನ್ ಮತ್ತು ಸಿರಿಯಾದಲ್ಲಿ ಇದ್ದಕ್ಕಿದ್ದಂತೆ ಪೇಜರ್ ಸ್ಫೋಟಗೊಂಡಿದ್ದು ಇದು ಇಸ್ರೇಲಿಗರದ್ದೇ ಕೃತ್ಯ ಎನ್ನುವ ಅನುಮಾನ ಮೂಡಿದೆ.
ಪೇಜರ್ ಸ್ಫೋಟ ಹೇಗಾಯ್ತು ?
ಪೇಜರ್ ಗಳು ರೇಡಿಯೋ ಕಿರಣಗಳ ಮೇಲೆ ಕಾರ್ಯ ನಿರ್ವಹಿಸುವ ಸಾಧನ. ಹೆಜ್ಬುಲ್ಲಾ ಉಗ್ರರು ಆರೋಪಿಸಿರುವಂತೆ ಈ ಪೇಜರ್ ತರಂಗಗಳನ್ನೇ ಇಸ್ರೇಲ್ ತಂತ್ರಜ್ಞರು ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಮಾಡಿ, ಅವುಗಳ ಡೇಟಾ ಗಳನ್ನು ಸಂಗ್ರಹಿಸಿ ಯಾರ ಸಂದೇಶಗಳಲ್ಲಿ ಉಗ್ರ ಚಟುವಟಿಕೆ ಸಂಬಂಧಿಸಿದ ಸಂವಹನ ಇದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಉಗ್ರರು ಬಳಸುತ್ತಿರುವ ಪೇಜರ್ ನಂಬರ್ ಗಳನ್ನು ಪ್ರತ್ಯೇಕಿಸಿ, ಹ್ಯಾಕ್ ಮಾಡಿರುವ ಶಂಕೆಯಿದೆ. ಬಳಿಕ ಪ್ರತ್ಯೇಕ ಸಾಫ್ಟ್ ವೇರ್ ಕೋಡಿಂಗ್ ಮಾಡಿ ವೈರಸ್ ರೂಪದಲ್ಲಿ ಅಟ್ಯಾಕ್ ಮಾಡಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಉಗ್ರರ ರೀತಿ ಸಂವಹನ ಮಾಡಿದ್ದ ನಂಬರ್ ಗಳ ಪೇಜರ್ ಗಳನ್ನೇ ಟಾರ್ಗೆಟ್ ಆಗುವಂತೆ ವೈರಸ್ ಸಿದ್ಧಪಡಿಸಿದ್ದು ವಿಶೇಷ. ಟಾರ್ಗೆಟ್ ಆಗಿದ್ದ ಪೇಜರ್ ಗಳನ್ನು ಸೇರಿಕೊಂಡ ವೈರಸ್ ಕೆಲವೇ ಸೆಕೆಂಡ್ ಗಳಲ್ಲಿ ಅದರಲ್ಲಿದ್ದ ಬ್ಯಾಟರಿ ವಿಪರೀತ ಹೀಟ್ ಆಗುವಂತೆ ಮಾಡಿವೆ. ಅತಿಯಾದ ಉಷ್ಣದಿಂದಾಗಿ ಪೇಜರ್ ಗಳು ಸ್ಫೋಟಗೊಂಡಿವೆ ಎಂದು ಹೇಳಲಾಗಿದೆ. ಇದೇ ವೇಳೆ, ತೈವಾನ್ ಮೂಲದ ಪೇಜರ್ ತಯಾರಿಕಾ ಸಂಸ್ಥೆ ತಯಾರಿಸಿರುವ ಪೇಜರ್ ಗಳಲ್ಲಿ ದೂರದಿಂದಲೇ ಅವನ್ನು ಸ್ಫೋಟಿಸಲು ನಿಗೂಢ ಸ್ವಿಚ್ ಅನ್ನು ಇರಿಸಲಾಗಿತ್ತು ಎಂಬ ವಾದ ಕೂಡ ಇದೆ.
ಸ್ಮಾರ್ಟ್ ಫೋನ್ ಗಳನ್ನು ಹ್ಯಾಕ್ ಮಾಡಿ ತಮ್ಮ ಯೋಜನೆಗಳನ್ನು ತಿಳಿಯುತ್ತಾರೆ ಎಂಬ ಭೀತಿಯಿಂದ ಬಂಡುಕೋರರು ಮೊಬೈಲ್ ಬದಲು ಪೇಜರ್ ಗಳನ್ನು ಬಳಸುತ್ತಿದ್ದರು ಎಂದು ಹೇಳಲಾಗಿದೆ. ರೇಡಿಯೋ ತರಂಗಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಸಾಮಾನ್ಯ ತಂತ್ರಜ್ಞಾನಗಳಿಂದ ಅದನ್ನು ಟ್ರ್ಯಾಕ್ ಮಾಡುವುದು ಸಾಧ್ಯವಿಲ್ಲ. ಹಾಗಾಗಿಯೇ ಉಗ್ರರು ಪೇಜರ್ ಗಳನ್ನು ಬಳಸುತ್ತಿದ್ದರು. ಆದರೆ ಇಸ್ರೇಲ್ ಟೆಕ್ನಾಲಜಿ ಅದನ್ನೂ ಭೇದಿಸಿದ್ದು ಹೆಜ್ಬುಲ್ಲಾ ಉಗ್ರರು ನಿಂತಲ್ಲೇ ನಡುಗಿದ್ದಾರೆ. ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಈ ಹಿಂದೆಯೇ ತನ್ನ ಗುಂಪಿನ ಸದಸ್ಯರಿಗೆ ಸೆಲ್ ಫೋನ್‌ಗಳನ್ನು ಜೊತೆಗೆ ಒಯ್ಯದಂತೆ ಎಚ್ಚರಿಕೆ ನೀಡಿದ್ದ. ಇಸ್ರೇಲ್ ತಮ್ಮ ಚಲನವಲನಗಳನ್ನು ಪತ್ತೆಹಚ್ಚಲು, ದಾಳಿ ನಡೆಸಲು ಅವನ್ನು ಬಳಸಬಹುದು ಎಂದು ಎಚ್ಚರಿಕೆ ನೀಡಿದ್ದರು.
At least nine people were killed and 2,750 were injured in Lebanon on Tuesday after wireless communication devices used by militant group Hezbollah exploded in what appears to be a targeted attack. Multiple reports have now claimed that Israel's spy agency, Mossad, planted a small amount of explosives inside the Taiwan-made pagers five months before.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 04:24 pm
Mangalore Correspondent
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm