ಬ್ರೇಕಿಂಗ್ ನ್ಯೂಸ್
10-02-26 11:03 pm Mangalore Correspondent ಕರಾವಳಿ
ಮಂಗಳೂರು, ಫೆ.10 : ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಕ್ರಿಮಿನಾಲಜಿ ಬಿಎಸ್ಸಿ ಕಲಿಯುತ್ತಿದ್ದ ಕಾಸರಗೋಡು ಮೂಲದ ಹಿಂದು ಯುವತಿ, ಕೇರಳದ ವಯನಾಡು ಮೂಲದ ಮುಸ್ಲಿಂ ಯುವಕನೊಂದಿಗೆ ಎಸ್ಕೇಪ್ ಆಗಿದ್ದು, ವಯನಾಡಿನಲ್ಲಿ ರಿಜಿಸ್ಟರ್ ಮದುವೆಯಾಗಲು ಮುಂದಾಗಿರುವ ಘಟನೆ ನಡೆದಿದೆ.
ಕಾಸರಗೋಡು ಜಿಲ್ಲೆಯ ಮಧೂರು ಬಳಿಯ ಮೀಪುಗುರಿ ನಿವಾಸಿ, ಬಿಲ್ಲವ ಸಮುದಾಯದ ವಿದ್ಯಾರ್ಥಿನಿ ವೈಶಾಲಿ ಮೂರು ವರ್ಷಗಳಿಂದ ಮಂಗಳೂರಿನ ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದಳು. ಈ ಬಾರಿ ಬಿಎಸ್ಸಿ ಪದವಿ ಮುಗಿದಿದ್ದರೂ, ಸುರತ್ಕಲ್ ಬಳಿಯಿರುವ ಪಿಜಿಯಲ್ಲಿ ತನ್ನ ಸಹವರ್ತಿ ಗೆಳತಿಯರೊಂದಿಗೆ ಉಳಿದುಕೊಂಡಿದ್ದಳು. ಈ ವೇಳೆ, ವಯನಾಡು ಮೂಲದ ಮೊಹಮ್ಮದ್ ಮಿದ್ಲಾಜ್ ಎಂಬ ಯುವಕನ ಗೆಳೆತನ ಆಗಿತ್ತು ಎನ್ನಲಾಗಿದೆ.
ಮೊಹಮ್ಮದ್ ಮಿದ್ಲಾಜ್ ಸುರತ್ಕಲ್ ನಲ್ಲಿರುವ ಅಟ್ಲಾಸ್ ಜುವೆಲ್ಲರಿಯಲ್ಲಿ ಕೆಲಸಕ್ಕಿದ್ದ. ಜನವರಿ 31ರಂದು ವಯನಾಡಿನಲ್ಲಿ ಇವರಿಬ್ಬರು ರಿಜಿಸ್ಟರ್ ಮದುವೆಗೆ ನೋಂದಣಿ ಮಾಡಿಕೊಂಡಿದ್ದು, ಅದರ ಫೋಟೋವನ್ನು ಅಲ್ಲಿನ ರಿಜಿಸ್ಟರ್ ಕಚೇರಿಯಲ್ಲಿ ಅಂಟಿಸಲಾಗಿತ್ತು. ಈ ಫೋಟೋ ಜಾಲತಾಣದ ಮೂಲಕ ವೈಶಾಲಿ ಕುಟುಂಬಸ್ಥರಿಗೆ ಫೆ.8ರಂದು ಸಿಕ್ಕಿತ್ತು. ಇದರಂತೆ, ಕತಾರ್ ನಲ್ಲಿ ಉದ್ಯೋಗದಲ್ಲಿದ್ದ ತಂದೆ ನೇರವಾಗಿ ಊರಿಗೆ ಬಂದಿದ್ದು, ಪತ್ನಿ ಜೊತೆಗೆ ಸುರತ್ಕಲ್ ನಲ್ಲಿರುವ ಪಿಜಿಗೆ ಬಂದಿದ್ದಾರೆ.
ಅಲ್ಲಿನ ಸಿಸಿಟಿವಿ ತಪಾಸಣೆ ನಡೆಸಿದಾಗ ಫೆ.8ರಂದು ಬೆಳಗ್ಗೆ ಕೊನೆಯ ಬಾರಿಗೆ ಪ್ಯಾಂಟ್, ಶರ್ಟ್ ಧರಿಸಿಕೊಂಡು ವ್ಯಾನಿಟಿ ಬ್ಯಾಗ್ ಜೊತೆಗೆ ವೈಶಾಲಿ ಅಲ್ಲಿಂದ ತೆರಳಿರುವುದು ಕಂಡುಬಂದಿದೆ. ಅದಕ್ಕೂ ಮೊದಲು ತಾಯಿ ಮಗಳ ಜೊತೆಗೆ ಫೋನ್ ಮಾಡಿ ಮಾತನಾಡಿದ್ದರು. ಆನಂತರ, ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸುರತ್ಕಲ್ ಠಾಣೆಯಲ್ಲಿ ಹೆತ್ತವರು ದೂರು ನೀಡಿದ್ದು, ಪೊಲೀಸರು ತಕ್ಷಣವೇ ಕೇರಳದ ವಯನಾಡಿಗೆ ತೆರಳಿದ್ದಾರೆ. ಸುರತ್ಕಲ್ ಅಟ್ಲಾಸ್ ಜುವೆಲ್ಲರಿ ಎಸ್ಡಿಪಿಐ ಮುಖಂಡನಿಗೆ ಸೇರಿದ್ದಾಗಿದ್ದು, ಆತನ ಮೂಲಕ ಮಾಹಿತಿ ಪಡೆದ ಪೊಲೀಸರು ವಯನಾಡಿಗೆ ತೆರಳಿ ಮಿದ್ಲಾಜ್ ಮತ್ತು ವೈಶಾಲಿಯನ್ನು ಪತ್ತೆ ಮಾಡಿದ್ದಾರೆ.
ಜೋಡಿಯನ್ನು ಸ್ಥಳೀಯ ಠಾಣೆಗೆ ಕರೆದೊಯ್ದಿದ್ದು ಅಲ್ಲಿ ಸುರತ್ಕಲ್ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಈ ವೇಳೆ, ಹುಡುಗಿಯ ಹೆತ್ತವರು ಆಕೆಯ ಬಳಿ ಅಂಗಲಾಚಿದ್ದು 22 ವರ್ಷಗಳ ಕಾಲ ಜೋಪಾನದಲ್ಲಿ ಸಾಕಿದ್ದೇವೆ, ಈಗ ನಮ್ಮನ್ನು ಬಿಟ್ಟು ಹೋಗಬೇಡ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ವೈಶಾಲಿ ತಾನು ಮಿದ್ಲಾಜ್ ಜೊತೆಗೇ ತೆರಳುವುದಾಗಿ ಹೇಳಿ ಪಟ್ಟು ಹಿಡಿದಿದ್ದರಿಂದ ಪೊಲೀಸರು ಅಲ್ಲಿನ ಠಾಣೆಯಲ್ಲೇ ಹೇಳಿಕೆ ಪಡೆದು ಬಿಟ್ಟಿದ್ದಾರೆ.
ಬಿಎಸ್ಸಿ ಕ್ರಿಮಿನಾಲಜಿ ಓದಿ ಮುಗಿಸಿದ್ದ ವೈಶಾಲಿ ಒಂದು ವರ್ಷದಿಂದ ತನ್ನ ಗೆಳತಿಯರೊಂದಿಗೆ ಸುತ್ತಾಟ ಮಾಡಿಕೊಂಡಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಹೆತ್ತವರಿಗೆ ಇವರು ಮೂವರು ಹೆಣ್ಮಕ್ಕಳಾಗಿದ್ದು ದೊಡ್ಡವಳು ಮದುವೆಯಾಗಿ ಅಮೆರಿಕದಲ್ಲಿದ್ದಾಳೆ. ಈಕೆ ಎರಡನೆಯವಳಾಗಿದ್ದು, ಇನ್ನೊಬ್ಬಳು ತಂಗಿಯಿದ್ದಾಳೆ. ಕ್ರಿಮಿನಾಲಜಿ ಓದಿದರೂ ಮುಸ್ಲಿಂ ಯುವಕನ ಸಖ್ಯ ಬೆಳೆಸಿ ಅಡ್ಡ ದಾರಿ ಹಿಡಿದಿದ್ದು ಊರಿನವರು ಮತ್ತು ಕುಟುಂಬಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದು ಸಂಘಟನೆ ಯುವಕರು ಇದೊಂದು ಲವ್ ಜಿಹಾದ್ ಕೃತ್ಯವೆಂದು ಆರೋಪ ಮಾಡಿದ್ದಾರೆ.
ಪಿಜಿ ಟು ಜುವೆಲ್ಲರಿ ಕ್ರಿಮಿನಲ್ಲವ್ !
ಪಿಜಿಯಲ್ಲಿದ್ದ ಮೇಲೆ ಅಲ್ಲಿನ ವಿದ್ಯಾರ್ಥಿಗಳನ್ನು ನಿಯಂತ್ರಣದಲ್ಲಿಡೋದು, ರಾತ್ರಿ ವೇಳೆ ಸುತ್ತಾಟಕ್ಕೆ ಹೋಗದಂತೆ ಜವಾಬ್ದಾರಿ ವಹಿಸೋದು ಪಿಜಿ ನಡೆಸೋರ ಜವಾಬ್ದಾರಿ. ಆದರೆ ಮಂಗಳೂರು, ಸುರತ್ಕಲ್ ನಲ್ಲಿರುವ ಹೆಚ್ಚಿನ ಪಿಜಿಗಳಲ್ಲಿರುವ ವಿದ್ಯಾರ್ಥಿಗಳ ಮೇಲೆ ಅದರ ಮುಖ್ಯಸ್ಥರಿಗೆ ಹತೋಟಿ ಇಲ್ಲ. ಡ್ರಗ್ಸ್, ಪಬ್ ಎಂದು ರಾತ್ರಿ ವೇಳೆ ಕೇರಳದ ವಿದ್ಯಾರ್ಥಿನಿಯರು ಗೆಳೆಯರ ಜೊತೆಗೆ ಸುತ್ತಾಟಕ್ಕೆ ಹೋಗುತ್ತಾರೆ. ಲೇಟ್ ನೈಟ್ ಬರ್ತಾರೆ, ಇಂಥವರೇ ಮುಂದೆ ಹಾದಿ ತಪ್ಪುತ್ತಾರೆ ಎನ್ನುವುದು ಹೆತ್ತವರಿಗೂ ಅರಿವು ಇರಬೇಕು. ಕಲಿಯೋಕೆ, ಉದ್ಯೋಗಕ್ಕೆ ಹೋದವರು ಎಲ್ಲಿ ಹೋಗ್ತಾರೆ, ಎಲ್ಲಿ ಸುತ್ತಾಡುತ್ತಾರೆ ಎನ್ನುವ ಬಗ್ಗೆ ನಿಗಾ ಇಡಬೇಕಿದೆ.
A 22-year-old BSc Criminology graduate from Kasaragod reportedly left her PG accommodation in Surathkal and travelled with a youth from Wayanad, with whom she had registered for marriage in Kerala. After her parents filed a missing complaint, police traced the couple to Wayanad. The woman told police she wished to stay with the man, following which her statement was recorded and the case closed.
29-03-26 10:19 am
HK News Staffer
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
30-03-26 10:31 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
30-03-26 11:13 pm
Mangalore Correspondent
Mangalore Attavar Suicide: ಅತ್ತಾವರದ ಅಪಾರ್ಟ್ಮೆ...
30-03-26 06:09 pm
ಮಂಗಳೂರಿನಲ್ಲಿ ಆಟೋ ಎಲ್ಪಿಜಿ ಗ್ಯಾಸ್ ಅಭಾವ ; ಸ್ಟೇಶನ...
30-03-26 02:06 pm
ಕುಕ್ಕರ್ನಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದೇನೆ, ನಾನು...
29-03-26 11:11 am
ಬೇಸಗೆ ಬಿರು ಬಿಸಿಲ ನಡುವೆ ಕರಾವಳಿಯಲ್ಲಿ ಹಲವೆಡೆ ಮಳೆ...
28-03-26 09:08 pm
30-03-26 07:35 pm
HK News Desk
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm
ಕಾರ್ಕಳದಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನ ; ಆರ...
29-03-26 06:03 pm