ಮನೆ ಮಾಲೀಕನ ಮೇಲಿನ ಸಿಟ್ಟಿನಲ್ಲಿ ಚಪಾತಿ ಹಿಟ್ಟಿಗೆ ಮೂತ್ರ ಬಳಸುತ್ತಿದ್ದ ಕೆಲಸದಾಳು ಮಹಿಳೆ ! ಮೊಬೈಲ್ ಕ್ಯಾಮರಾದಲ್ಲಿ ಕೃತ್ಯ ಸೆರೆ 

17-10-24 11:16 am       HK News Desk   ದೇಶ - ವಿದೇಶ

ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಮಾಲೀಕನ ಮೇಲಿನ ಕೋಪದಲ್ಲಿ ತನ್ನ ಮೂತ್ರವನ್ನೇ ಬಳಸಿ ಚಪಾತಿ ಹಿಟ್ಟು ತಯಾರಿಸಿ ರೊಟ್ಟಿ ಮಾಡಿಕೊಡುತ್ತಿದ್ದ ಕೃತ್ಯ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 

ಗಾಜಿಯಾಬಾದ್, ಅ.17: ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಮಾಲೀಕನ ಮೇಲಿನ ಕೋಪದಲ್ಲಿ ತನ್ನ ಮೂತ್ರವನ್ನೇ ಬಳಸಿ ಚಪಾತಿ ಹಿಟ್ಟು ತಯಾರಿಸಿ ರೊಟ್ಟಿ ಮಾಡಿಕೊಡುತ್ತಿದ್ದ ಕೃತ್ಯ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ನಿತಿನ್ ಗೌತಮ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ರೀನಾ (32) ಪಾಪ ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾಳೆ. 

ಮನೆಯವರಿಗೆ ಲಿವರ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಉದ್ಯಮಿ ನಿತಿನ್ ಗೌತಮ್ ಅವರ ಪತ್ನಿ ರೂಪಂ ಮನೆಯಲ್ಲಿ ಏನೋ ದುಷ್ಕೃತ್ಯ ನಡೆಯುತ್ತಿದೆಯಾ ಎಂದು ನೋಡಲು ಮನೆ ಕೆಲಸದಾಕೆಯ ಬಗ್ಗೆ ಶಂಕಿಸಿ ಮೊಬೈಲ್ ಕ್ಯಾಮರಾ ಇಟ್ಟಿದ್ದರು. ಮಹಿಳೆಯ ಚಲನವಲನದ ಬಗ್ಗೆ ತಪಾಸಣೆ ನಡೆಸುವ ಸಲುವಾಗಿ ಪರಿಶೀಲಿಸಿದಾ್, ಚಪಾತಿ ಹಿಟ್ಟಿಗೆ ಮಹಿಳೆ ಮೂತ್ರ ಬೆರೆಸುತ್ತಿರುವ ದೃಶ್ಯ ಪತ್ತೆಯಾಗಿದೆ. ಮಾಲೀಕರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿರುವ ಪೊಲೀಸರು ರೀನಾಳನ್ನು ಬಂಧಿಸಿದ್ದಾರೆ. 

ಅಡುಗೆ ತಯಾರಿಸುವ ಪಾತ್ರೆಗೆ ಅದೇ ಕೊಠಡಿಯಲ್ಲಿ ಮೂತ್ರ ಮಾಡಿ, ಅದನ್ನು ಚಪಾತಿ ಹಿಟ್ಟು ತಯಾರಿಸಲು ಬಳಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮೊದಲು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದ ಮಹಿಳೆ ಬಳಿಕ ವಿಡಿಯೋ ತೋರಿಸಿದ ನಂತರ ಒಪ್ಪಿಕೊಂಡಿದ್ದಾಳೆ. ಮನೆ ಮಾಲೀಕರು ನನ್ನ ಮೇಲೆ ವಿನಾಕಾರಣ ಬೈಯುತ್ತಿದ್ದರು, ಆ ಕಾರಣಕ್ಕಾಗಿ ನಾನು ಈ ರೀತಿ ಮಾಡಿದ್ದೇನೆ ಎಂದು ಹೇಳಿದ್ದಾಳೆ. 

ಒಂದು ತಿಂಗಳ ಹಿಂದೆ ಜ್ಯೂಸ್ ತಯಾರಿಸಲು ತನ್ನ ಮೂತ್ರ ಬಳಸುತ್ತಿದ್ದ ಪ್ರಕರಣ ಗಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿ ಜ್ಯೂಸ್ ಸೆಂಟರ್ ಮಾಲೀಕ ಅಮೀರ್ ಖಾನ್ ನನ್ನು ಬಂಧಿಸಲಾಗಿತ್ತು. ಉತ್ತರ ಪ್ರದೇಶ ಸರ್ಕಾರ, ಮಾನವ ಮೂತ್ರ ಸೇರಿದಂತೆ ತ್ಯಾಜ್ಯ ಬಳಸುವುದನ್ನು, ಉಗುಳಿ ಆಹಾರ ತಯಾರಿಸುವುದನ್ನು ತಡೆಯಲು ಕಠಿಣ ಮಸೂದೆ ತರಲು ಮುಂದಾಗಿದೆ. ಮಸೂದೆಯಲ್ಲಿ ಆರೋಪಿಗಳಿಗೆ ಹತ್ತು ವರ್ಷಗಳ ಕಠಿಣ ಸಜೆ ವಿಧಿಸಲು ಅವಕಾಶ ಇರಲಿದೆ.

A 32-year-old domestic help was arrested by police in Uttar Pradesh's Ghaziabad on Wednesday for allegedly mixing urine in the flour dough to make chapatis (flatbread) for her employers. The woman, identified as Reena, was arrested following a complaint by one of her employers.