ಕೊರೊನಾ ಲಾಕ್ಡೌನ್ ಎಫೆಕ್ಟ್ ; ಜಾಗತಿಕ ವಾಯುಮಾಲಿನ್ಯ ಇಳಿಕೆ

11-12-20 05:06 pm       Headline Karnataka News Network   ದೇಶ - ವಿದೇಶ

ಅಮೆರಿಕದ ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್ ಎನ್ನುವ ವರದಿಯಲ್ಲಿ ಜಾಗತಿಕವಾಗಿ ಇಂಗಾಲದ ಬಿಡುಗಡೆ 2020ಕ್ಕೆ ಹೋಲಿಸಿದರೆ, ಶೇ.7ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ.

ವಾಷ್ಟಿಂಗ್ಟನ್, ಡಿ.11: ಕೊರೊನಾ ಕಾರಣದಿಂದ ಜಗತ್ತಿನಾದ್ಯಂತ ಲಾಕ್ಡೌನ್ ಹೇರಿದ್ದು ಉದ್ಯೋಗ ನಷ್ಟ, ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಆದರೆ, ಇದೇ ಲಾಕ್ಡೌನ್ ಕಾರಣದಿಂದ ವಾತಾವರಣಕ್ಕೆ ಮಾಲಿನ್ಯ ಸೇರುವ ಶೇಕಡಾವಾರಿನಲ್ಲಿ ದೊಡ್ಡ ಮಟ್ಟಿಗೆ ಕಡಿಮೆಯಾಗಿದ್ಯಂತೆ.

ಹೌದು... ಅಮೆರಿಕದ ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್ ಎನ್ನುವ ವರದಿಯಲ್ಲಿ ಜಾಗತಿಕವಾಗಿ ಇಂಗಾಲದ ಬಿಡುಗಡೆ 2020ಕ್ಕೆ ಹೋಲಿಸಿದರೆ, ಶೇ.7ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ. ಅರ್ತ್ ಸಿಸ್ಟಮ್ ಸೈನ್ಸ್ ಡಾಟಾ ಎನ್ನುವ ನಿಯತಕಾಲಿಕದಲ್ಲಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ. 2019ರಲ್ಲಿ ಜಾಗತಿಕವಾಗಿ 3600 ಕೋಟಿ ಮೆಟ್ರಿಕ್ ಟನ್ ಇಂಗಾಲದ ಅಂಶ ವಾವಾತರಣಕ್ಕೆ ಬಿಡುಗಡೆಯಾಗಿದ್ದರೆ, 20120ರಲ್ಲಿ ಇದರ ಸರಾಸರಿ 3400 ಕೋಟಿಗೆ ಇಳಿಕೆಯಾಗಿದೆ ಅನ್ನುವ ವರದಿಯನ್ನು ನೀಡಿದೆ.

ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಸೇರಿ ಈ ವರದಿಯನ್ನು ತಯಾರಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರು ಹೆಚ್ಚಾಗಿ ಹೊರಗಡೆ ಓಡಾಡದೆ ಮನೆಯಲ್ಲೇ ಇರುತ್ತಿದ್ದರು. ಇದರಿಂದಾಗಿ ವಾಹನಗಳ ಬಳಕೆ ಕಡಿಮೆಯಾಗಿತ್ತು. ಅಲ್ಲದೆ, ಇಂಗಾಲ ಇನ್ನಿತರ ವಿಷ ಹೊರಸೂಸುವ ಹೆಚ್ಚಿನ ಫ್ಯಾಕ್ಟರಿಗಳು ಬಂದ್ ಆಗಿದ್ದವು. ವಾಹನಗಳಿಂದಾಗಿ ಐದನೇ ಒಂದು ಭಾಗದಷ್ಟು ಮಾಲಿನಯ್ ಬಿಡುಗಡೆಯಾಗುತ್ತದೆ. ಇವೆಲ್ಲ ಕಾರಣದಿಂದಾಗಿ ಇಂಗಾಲ ಕಡಿಮೆಯಾಗಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲಿ ಈ ವರ್ಷ ಇಂಗಾಲದ ಬಿಡುಗಡೆಯಲ್ಲಿ ಶೇಕಡವಾರು 12ರಷ್ಟು ಕಡಿಮೆಯಾಗಿದ್ದರೆ, ಯುರೋಪಿನಲ್ಲಿ 11 ಶೇ. ಕಡಿಮೆಯಾಗಿರುವುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಆದರೆ, ಚೀನಾದಲ್ಲಿ ಕೇವಲ 1.7ರಷ್ಟು ಮಾತ್ರ ಇಂಗಾಲದಂಶ ಕಡಿಮೆಯಾಗಿದೆ. ಅಲ್ಲಿ ಆರಂಭದಲ್ಲಿ ಒಂದಷ್ಟು ಕಾಲ ಮಾತ್ರ ಲಾಕ್ಡೌನ್ ಮಾಡಿದ್ದು ಮತ್ತು ಅತಿ ಹೆಚ್ಚು ಕೈಗಾರಿಕೆಗಳು ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.