ಬ್ರೇಕಿಂಗ್ ನ್ಯೂಸ್
28-10-24 11:47 am HK News Desk ದೇಶ - ವಿದೇಶ
ನವದೆಹಲಿ, ಅ.28: "ಡಿಜಿಟಲ್ ಅರೆಸ್ಟ್" ಅನ್ನುವ ಪರಿಕಲ್ಪನೆ ಜಾರಿಯಲ್ಲಿ ಇಲ್ಲ. ಸೈಬರ್ ಕ್ರೈಂ ಪ್ರಕರಣಗಳ ಬಗ್ಗೆ ಎಲ್ಲಾ ವರ್ಗದ ಜನರು ಜಾಗೃತಿ ವಹಿಸಬೇಕು. ಇಂತಹ ಸಂದರ್ಭಗಳಲ್ಲಿ ಜನರು ಯೋಚಿಸಿ, ತಾಳ್ಮೆ ವಹಿಸಿ ಕ್ರಮ ಮುಂದಡಿ ಇಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಭಾನುವಾರ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ವಿಷಯದ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ. ತನಿಖಾ ಸಂಸ್ಥೆಗಳು ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿವೆ. ಇಂತಹ ಅಪರಾಧಗಳಿಂದ ತಾವಾಗಿಯೇ ರಕ್ಷಿಸಿಕೊಳ್ಳಲು ಜನರಲ್ಲಿ ಜಾಗೃತಿ ಅಗತ್ಯ ಎಂದು ಹೇಳಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಆಡಿಯೋ ಒಂದನ್ನು ಪ್ಲೇ ಮಾಡಿದ ಮೋದಿ, ಆಧಾರ್ ಕಾರ್ಡ್, ಮೊಬೈಲ್ ನಂಬರ್ ಬ್ಲಾಕ್ ಆಗಿದೆಯೆಂದು ಹೇಳಿ ಜನರನ್ನು ಯಾಮಾರಿಸುವ ವಿಚಾರವನ್ನು ಉಲ್ಲೇಖಿಸಿದರು. ಸಂತ್ರಸ್ತ ವ್ಯಕ್ತಿ ಮತ್ತು ವಂಚಕನ ನಡುವಿನ ಸಂಭಾಷಣೆ ಹೀಗಿರುತ್ತದೆ ಎಂದು ಮೋದಿ ಉದಾಹರಣೆ ಹೇಳಿದ್ದು ಈ ಬಗ್ಗೆ ಜನರು ಜಾಗೃತಿ ವಹಿಸಬೇಕು ಎಂದರು. ಸಿಬಿಐ ಅಧಿಕಾರಿಗಳು, ಆರ್ ಬಿಐ ಅಧಿಕಾರಿಗಳೆಂಬ ಹೆಸರಲ್ಲಿ ವಂಚಕರು ಅತ್ಯಂತ ನಾಜೂಕಿನಿಂದ ಮಾತನಾಡಿ ಜನರನ್ನು ಯಾಮಾರಿಸುತ್ತಾರೆ. ಮೊದಲಿಗೆ, ನಿಮ್ಮ ಎಲ್ಲ ವಿಚಾರಗಳನ್ನೂ ಸಂಗ್ರಹಿಸುತ್ತಾರೆ. ಬಳಿಕ ನೀವು ಲಾಸ್ಟ್ ವೀಕ್ ಗೋವಾ ಹೋಗಿದ್ದೀರಲ್ವಾ.. ನಿಮ್ಮ ಮಗಳು ದೆಹಲಿಯಲ್ಲಿ ಕಲಿಯುತ್ತಿದ್ದಾರಲ್ವಾ ಎಂದು ಇರುವ ವಿಷಯಗಳನ್ನು ಹೇಳಿ ನಂಬಿಕೆ ಬರುವಂತೆ ಮಾಡುತ್ತಾರೆ. ಇವರ ಮಾತು ಹೇಗಿರುತ್ತೆ ಅಂದ್ರೆ ನೀವು ಅವರ ಮಾತುಗಳನ್ನು ತಿರುಗಿ ಮಾತನಾಡದೆ ಕೇಳುತ್ತೀರಿ. ಒಂದು ರೀತಿಯ ಭಯ ನಿಮ್ಮಲ್ಲಿ ಆವರಿಸುವಂತೆ ಮಾಡುತ್ತಾರೆ. ಮೂರನೇ ಪ್ರಯತ್ನವಾಗಿ ನಿಮ್ಮನ್ನು ಬಂಧಿಸಿದ್ದೇವೆಂದು ಹೇಳಿ, ನೀವು ಈಗಲೇ ನಿರ್ಧಾರಕ್ಕೆ ಬರಬೇಕು ಎಂದು ಒತ್ತಡ ಹೇರುತ್ತಾರೆ. ಮಾನಸಿಕ ಕಿರುಕುಳಕ್ಕೆ ಬೇಸತ್ತು ಅವರು ಹೇಳಿದ್ದನ್ನು ಕೇಳುತ್ತಾರೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಮೂರು ಮಂತ್ರಗಳನ್ನು ಮೋದಿಯವರು ಹೇಳಿದ್ದಾರೆ. ನಿಲ್ಲಿಸಿ, ಯೋಚಿಸಿ ಮತ್ತು ನಿರ್ಧಾರಕ್ಕೆ ಬನ್ನಿ ಎಂಬ ಮೂರು ಮಂತ್ರಗಳನ್ನು ಪಾಲಿಸಲು ಕರೆ ಕೊಟ್ಟಿದ್ದಾರೆ. ಅಪರಿಚಿತರ ಕರೆ ಬಂದಾಗ ಭಯಗೊಳ್ಳಬೇಡಿ, ಪ್ಯಾನಿಕ್ ಆಗದೆ ಯಾವುದೇ ವೈಯಕ್ತಿಕ ಮಾಹಿತಿ ಷೇರ್ ಮಾಡದಿರಿ, ಅಪರಿಚಿತರ ಕರೆ, ಮೆಸೇಜ್ ಗಳನ್ನು ಸ್ಕ್ರೀನ್ ಶಾಟನ್ನೂ ತೆಗೆದಿಟ್ಟುಕೊಳ್ಳಿ. ಯಾವುದೇ ಸರ್ಕಾರದ ತನಿಖಾ ಸಂಸ್ಥೆಗಳು ಫೋನ್ ಕರೆ ಮಾಡಿ ಬಂಧಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಕೂಡಲೇ 1930 ಸೈಬರ್ ಹೆಲ್ಪ್ ಲೈನ್ ಗಮನಕ್ಕೆ ತನ್ನಿ.ಆಮೂಲಕ ಇಂತಹ ಮೋಸದ ಜಾಲವನ್ನು ತಪ್ಪಿಸಬಹುದು ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ, ಸೃಜನಶೀಲ ಶಕ್ತಿಯ ಅಲೆಯು ಭಾರತವನ್ನು ಆವರಿಸುತ್ತಿದೆ. ಅನಿಮೇಷನ್ ಜಗತ್ತಿನಲ್ಲಿ 'ಮೇಡ್ ಇನ್ ಇಂಡಿಯಾ' ಮತ್ತು 'ಮೇಡ್ ಬೈ ಇಂಡಿಯಾ' ಪ್ರಕಾಶಮಾನವಾಗಿ ಮಿಂಚುತ್ತಿವೆ ಎಂದು ಹೇಳಿದರು. ಛೋಟಾ ಭೀಮ್, ಕೃಷ್ಣ ಮತ್ತು ಮೋಟು ಪತ್ಲು ಮುಂತಾದ ಭಾರತೀಯ ಅನಿಮೇಷನ್ ಪಾತ್ರಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ಭಾರತದ ವಿಷಯ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಜಗತ್ತಿನಾದ್ಯಂತ ಜನ ಇಷ್ಟ ಪಡುತ್ತಾರೆ ಎಂದು ಅವರು ಹೇಳಿದರು.
'ಆತ್ಮನಿರ್ಭರ ಭಾರತ'ದ ಪ್ರಯತ್ನವು ಪ್ರತಿಯೊಂದು ವಲಯದಲ್ಲೂ ದಾಪುಗಾಲು ಹಾಕುತ್ತಿದೆ, ದೇಶವು ತನ್ನ ರಕ್ಷಣಾ ಉತ್ಪನ್ನಗಳನ್ನು ಈಗ 85 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ಹೇಳಿದರು.
Indians lost approximately Rs 120.3 crore to ‘digital arrest’ fraud schemes during the first quarter of 2024, as per recent government data. This fraud, among other scams, was highlighted by Prime Minister Narendra Modi during his monthly radio address ‘Mann Ki Baat’ on Sunday (October 27).
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm