Mangalore Crime, Cattle Theft: ಅಡ್ಯಾರ್ ನಲ್ಲಿ ಹಟ್ಟಿಯಿಂದ ದನ ಕದ್ದು ಮಾಂಸಕ್ಕೆ ಮಾರಾಟ ; ಮೂವರ ಬಂಧನ, ಹತ್ಯೆಗೆ ಸಿದ್ಧತೆ ನಡೆಸಿದ್ದ ವಳಚ್ಚಿಲ್ ಶೆಡ್ ಸರ್ಕಾರಕ್ಕೆ ಮುಟ್ಟುಗೋಲು 

17-09-25 06:04 pm       Mangalore Correspondent   ಕ್ರೈಂ

ನಗರದ ಅಡ್ಯಾರ್ ನಲ್ಲಿ ಹಟ್ಟಿಯಿಂದ ಸಾಕು ಜರ್ಸಿ ದನವನ್ನು ರಾತ್ರಿ ವೇಳೆ ಕದ್ದೊಯ್ದ ಘಟನೆಗೆ ಸಂಬಂಧಿಸಿ ಕಂಕನಾಡಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಮಂಗಳೂರು, ಸೆ.17 : ನಗರದ ಅಡ್ಯಾರ್ ನಲ್ಲಿ ಹಟ್ಟಿಯಿಂದ ಸಾಕು ಜರ್ಸಿ ದನವನ್ನು ರಾತ್ರಿ ವೇಳೆ ಕದ್ದೊಯ್ದ ಘಟನೆಗೆ ಸಂಬಂಧಿಸಿ ಕಂಕನಾಡಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಸೆ.13ರಂದು ನಸುಕಿನಲ್ಲಿ ಅಡ್ಯಾರ್ ಬಳಿಯ ತಜಿಪೋಡಿ ಎಂಬಲ್ಲಿ ಉಮೇಶ್ ಆಳ್ವ ಎಂಬವರ ಮನೆಯ ಅಂಗಳದಿಂದ ಒಂದು ಕ್ರಾಸ್ ಜರ್ಸಿ ಹಸುವನ್ನು ಕಳ್ಳತನ ಮಾಡಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ರಿ ಪ್ರಕರಣದಲ್ಲಿ ಕಳುವಾದ ಹಸುವನ್ನು ಕಂಕನಾಡಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಜೀವಂತವಾಗಿ ಪತ್ತೆ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. 

ಅಡ್ಯಾರ್ ಗಾಣದಬೆಟ್ಟು ನಿವಾಸಿ ಶಾಬಾಜ್ ಅಹಮ್ಮದ್, ವಳಚ್ಚಿಲ್ ನಿವಾಸಿ ಮೊಹಮ್ಮದ್ ಸುಹಾನ್,  ವಳಚ್ಚಿಲ್ ಖಾದರ್ ಮೊಹಮ್ಮದ್ @ ಕೋಳಿ ಮೋನಕ್ಕ ಬಂಧಿತರು.‌ ಶಾಬಾಜ್ ಮತ್ತು ಸುಹಾನ್ ದನ ಕಳ್ಳತನ ಮಾಡಿ, ವಳಚ್ಚಿಲ್ ಖಾದರ್ ಗೆ ಮಾರಾಟ ಮಾಡಿದ್ದರು. ಅದನ್ನು ಮಾಂಸ ಮಾಡಲು ಖರೀದಿಸಿದ್ದು, ದನವನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಗಿರುತ್ತದೆ. 

ಶಾಬಾಜ್ ಅಹ್ಮದ್ ವಿರುದ್ದ ಈಗಾಗಲೇ ಮಂಗಳೂರು ಗ್ರಾಮಾಂತರ ಮತ್ತು  ಕಂಕನಾಡಿ ಠಾಣೆಯಲ್ಲಿ ಒಂದು ಕೊಲೆ, ಎರಡು ಕೊಲೆ ಪ್ರಯತ್ನ ಮತ್ತು ಒಂದು ದೊಂಬಿ ಪ್ರಕರಣಗಳು ಮತ್ತು ಮೊಹಮ್ಮದ್ ಸುಹಾನ್, ಅರ್ಕುಳ  ಎಂಬಾತನ ವಿರುದ್ದ ಉಳ್ಳಾಲ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕರಣ ಹಾಗೂ ವಳಚ್ಚಿಲ್ ಖಾದರ್ ಮೊಹಮ್ಮದ್ ಎಂಬಾತನ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಗೋ ಹತ್ಯೆ ಪ್ರಕರಣ  ದಾಖಲಾಗಿರುತ್ತದೆ.

ಆರೋಪಿಗಳು ದನ ಕಳವುಗೈದು ವಳಚ್ಚಿಲ್ ಅಬ್ದುಲ್ ಖಾದರ್ ಮನೆಗೆ ಹೊಂದಿಕೊಂಡ ಶೆಡ್ ನಲ್ಲಿ ಹತ್ಯೆ ಮಾಡಿ ಮಾಂಸ ಮಾಡಲು ಸಿದ್ಧತೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸದ್ರಿ ಜಾಗವನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ -2020 ರಲ್ಲಿ ಪ್ರದತ್ತವಾದ ಅಧಿಕಾರದಂತೆ ಜಪ್ತಿ ಮಾಡಿ, ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ.

In a case of attempted illegal cattle slaughter, police in Mangaluru have arrested three individuals in connection with the theft of a Jersey cow from a cattle shed in Adyar. The accused allegedly planned to kill the animal and sell its meat.