ಬ್ರೇಕಿಂಗ್ ನ್ಯೂಸ್
12-11-24 12:35 pm HK News Desk ದೇಶ - ವಿದೇಶ
ನವದೆಹಲಿ, ನ.12: ಅಲ್ ಖೈದಾ ಉಗ್ರರ ಜೊತೆಗಿನ ಲಿಂಕ್ ಇರುವ ಬಾಂಗ್ಲಾದೇಶಿಗರು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಆಧರಿಸಿ ಎನ್ಐಎ ಅಧಿಕಾರಿಗಳು ಕರ್ನಾಟಕ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಬೆಳಗ್ಗಿನಿಂದಲೇ ಕೆಲವು ಶಂಕಿತರ ನಿವಾಸಗಳಿಗೆ ದಾಳಿ ನಡೆಸಲಾಗಿದ್ದು, ಮೊಬೈಲ್ ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಉಗ್ರವಾದಿ ಚಟುವಟಿಕೆಗಳಿಗೆ ಫಂಡಿಂಗ್ ಮಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಮೊಬೈಲ್, ಬ್ಯಾಂಕ್ ಖಾತೆ ಕುರಿತ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಬಾಂಗ್ಲಾ ಮೂಲದ ಅಲ್ ಖೈದಾ ಸಂಘಟನೆಯ ಜೊತೆಗೆ ಲಿಂಕ್ ಇರುವವರು ಮತ್ತು ಅಂಥವರ ಜೊತೆಗೆ ನಿಕಟ ನಂಟು ಹೊಂದಿರುವವರನ್ನು ಕೇಂದ್ರೀಕರಿಸಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. 2023ರಲ್ಲಿ ಬಾಂಗ್ಲಾದೇಶಿ ಉಗ್ರರು ದೇಶದಲ್ಲಿ ಯುವಕರನ್ನು ಇವರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದುದು ಪತ್ತೆಯಾಗಿತ್ತು. ಅದೇ ಪ್ರಕರಣದಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದ್ದು ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ಬಾಂಗ್ಲಾ ನೆಟ್ವರ್ಕ್ ನಲ್ಲಿದ್ದ ಮೊಹಮ್ಮದ್ ಸೋಜಿಬ್ ಮಿಯಾನ್, ಮುನ್ನಾ ಖಾಲಿದ್ ಅನ್ಸಾರಿ, ಅಜರುಲ್ ಇಸ್ಲಾಂ, ಅಬ್ದುಲ್ ಲತೀಫ್ ಅನ್ಸಾರಿ, ಭಾರತೀಯ ಪ್ರಜೆ ಫರೀದ್ ಎಂಬವರನ್ನು ಬಂಧಿಸಲಾಗಿತ್ತು. ಇವರ ತನಿಖೆಯ ವೇಳೆ ಭಾರತದಲ್ಲಿ ಯುವಕರನ್ನು ಅಲ್ ಖೈದಾ ಸಂಘಟನೆಯತ್ತ ಪ್ರೇರೇಪಿಸಿ, ಟೆರರ್ ಫಂಡಿಂಗ್ ಕೆಲಸ ಮಾಡಿಸುವುದು, ಆಮೂಲಕ ಅಲ್ ಖೈದಾಗೆ ಹಣ ರವಾನೆ ಮಾಡುವುದು, ದೇಶ ವಿರೋಧಿ ಚಟುವಟಿಕೆಯತ್ತ ಪ್ರೇರೇಪಿಸುವಂತಹ ಕೆಲಸ ಮಾಡಿಸುತ್ತಿದ್ದರು ಎನ್ನುವುದು ಪತ್ತೆಯಾಗಿತ್ತು. ಮಾಹಿತಿ ಆಧರಿಸಿ ಎನ್ಐಎ ಆಗಿಂದಾಗ್ಗೆ ಕಾರ್ಯಾಚರಣೆ ನಡೆಸುತ್ತಿದೆ.
The National Investigation Agency (NIA) on Monday (November 11, 2024) carried out searches at nine locations across five States and one Union Territory in connection with the alleged activities promoted by some Bangladeshi nationals as part of the banned terror group al-Qaeda’s conspiracy to “destabilise” India.
10-12-24 10:47 pm
HK News Desk
Panchamasali Protest, Belagavi: ಬೆಳಗಾವಿ ಸುವರ್...
10-12-24 10:32 pm
Murudeshwara beach drowning bhatkal: ಮುರ್ಡೇಶ್...
10-12-24 10:03 pm
SM krishna school holiday: ಎಸ್ಸೆಂ ಕೃಷ್ಣ ನಿಧನ...
10-12-24 11:48 am
SM Krishna Death, Wikipedia; ಬೆಂಗಳೂರಿಗೆ 'ಸಿಲಿ...
10-12-24 11:34 am
10-12-24 10:57 pm
HK News Desk
Idli Guru, Franchise Fraud, Owner Karthik She...
09-12-24 10:12 pm
Assad dynasty; ಸಿರಿಯಾದಲ್ಲಿ 54 ವರ್ಷಗಳ ವಂಶಾಡಳಿತ...
09-12-24 12:17 pm
ಮೇಕ್ ಇನ್ ಇಂಡಿಯಾ ಬಗ್ಗೆ ಪುಟಿನ್ ಮೆಚ್ಚುಗೆ ; ಭಾ...
05-12-24 11:00 pm
Devendra Fadnavis, Maharashtra New CM; 'ಮಹಾ'...
04-12-24 01:29 pm
10-12-24 09:37 pm
Mangalore Correspondent
Ranjith Ballal Bike Accident, Kundapur, Manga...
09-12-24 11:05 pm
Swamiji, Mangalore, Waqf: ಬಾಂಗ್ಲಾ ವಿರುದ್ಧ ಇಸ್...
09-12-24 07:40 pm
Ullal, Mangalore, Accident, Netravathi bridge...
09-12-24 06:03 pm
ಜೋಕಾಲಿಗೆ ಸಿಲುಕಿ 3ನೇ ತರಗತಿ ಬಾಲಕಿ ಸಾವಿನ ಸುದ್ದಿಗ...
09-12-24 03:26 pm
10-12-24 11:18 pm
Mangalore Correspondent
Mangalore crime, Kadri police, robbery: ಕಂಕನಾ...
10-12-24 06:46 pm
ಕೇವಲ ಎಂಟು ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರಿಗೆ ವ...
10-12-24 03:59 pm
Chikkamagaluru murder: ಸೋಶಿಯಲ್ ಮೀಡಿಯಾದಲ್ಲಿ ಪರ...
08-12-24 05:02 pm
ಷೇರು ಹೂಡಿಕೆ ಹೆಸರಲ್ಲಿ ಸೈಬರ್ ವಂಚಕರ ಮೋಸ ; ನಕಲಿ ಟ...
07-12-24 09:48 pm