ಬ್ರೇಕಿಂಗ್ ನ್ಯೂಸ್
08-01-25 11:07 pm HK News Desk ದೇಶ - ವಿದೇಶ
ಚೆನ್ನೈ, ಜ.8: ಅತ್ಯಂತ ಹಳೆಯದಾದ ಸಿಂಧೂ ನಾಗಕರಿಕತೆಯ ಲಿಪಿಗಳು ಲಭ್ಯವಿದ್ದು ಅದನ್ನು ಅರ್ಥೈಸುವುದು ಇಂದಿಗೂ ಕಠಿಣವೇ ಆಗಿದೆ. ಈ ಲಿಪಿಗಳನ್ನು ಓದಿ ಸರಿಯಾಗಿ ಅರ್ಥೈಸುವವರಿಗೆ ತಮಿಳುನಾಡು ಸರ್ಕಾರ ಬಂಪರ್ ಬಹುಮಾನ ಘೋಷಿಸಿದೆ. ಈ ಲಿಪಿಗಳ ಚೆನ್ನಾಗಿ ವಿವರಣೆ ಮಾಡುವವರಿಗೆ ಬರೋಬ್ಬರಿ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸಿಂಧೂ ಕಣಿವೆ ನಾಗರಿಕತೆಯ ಲಿಪಿಯನ್ನು ಯಶಸ್ವಿಯಾಗಿ ಅರ್ಥೈಸುವವರಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಭಾರತದ ಕರೆನ್ಸಿಯಲ್ಲಿ ಇದರ ಮೌಲ್ಯ ಬರೋಬ್ಬರಿ 8.5 ಕೋಟಿ ರೂಪಾಯಿ ಆಗುತ್ತದೆ. ಒಂದು ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಿಂಧೂ ಕಣಿವೆಯ ಬರವಣಿಗೆಯ ವ್ಯವಸ್ಥೆಯನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಾರ್ಯಕ್ರಮ ಒಂದರಲ್ಲಿ ಸ್ಟಾಲಿನ್ ಅಭಿಪ್ರಾಯ ಪಟ್ಟಿದ್ದಾರೆ.
ಪುರಾತತ್ವ ಶಾಸ್ತ್ರಜ್ಞರು ಮತ್ತು ತಜ್ಞರ ಹಲವಾರು ಪ್ರಯತ್ನಗಳ ಹೊರತಾಗಿಯೂ ಸಿಂಧೂ ಕಣಿವೆ ನಾಗರಿಕತೆ ಕುರಿತ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಇದಕ್ಕಾಗಿ, ಈ ಲಿಪಿಗಳನ್ನು ಓದಿ ಅರ್ಥೈಸಿದವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದರು.
ಸಿಂಧೂ ಕಣಿವೆಯಲ್ಲಿ ಗೂಳಿಗಳ ಚಿತ್ರಗಳಿದ್ದವು. ಗೂಳಿ ದ್ರಾವಿಡ ಸಂಕೇತವಾಗಿದ್ದು ಸಿಂಧೂ ಕಣಿವೆಯಿಂದ ಅಲಂಗನಲ್ಲೂರ್ (ಜಲ್ಲಿಕಟ್ಟುಗೆ ಪ್ರಸಿದ್ಧವಾದ ಮಧುರೈ ಬಳಿಯ ಗ್ರಾಮ) ವರೆಗೆ ಹರಡಿದ್ದನ್ನು ತೋರಿಸುತ್ತದೆ. ಇದು ನಮ್ಮ ಸಂಸ್ಕೃತಿಗೆ ಬಹಳ ಹತ್ತಿರವಾಗಿದೆ. ಹೀಗಾಗಿ ಸಿಂಧೂ ಕಣಿವೆಯ ಲಿಪಿ ಅರಿಯುವುದು ನಮ್ಮ ಹಿನ್ನೆಲೆ ಅರಿಯಲು ಅವಶ್ಯಕ ಎಂದಿದ್ದಾರೆ.
ಜಾನ್ ಮಾರ್ಷಲ್ ನೆನೆದ ಸ್ಟಾಲಿನ್!
1924 ರಲ್ಲಿ ಬ್ರಿಟಿಷ್ ವ್ಯಕ್ತಿ ಸರ್ ಜಾನ್ ಮಾರ್ಷಲ್ ಸಿಂಧೂ ಕಣಿವೆ ನಾಗರಿಕತೆಯನ್ನು ಜಗತ್ತಿಗೆ ಪರಿಚಯಿಸಿದರು. ಈ ಆವಿಷ್ಕಾರವು ಭಾರತೀಯ ನಾಗರಿಕತೆ ಎಷ್ಟು ಪ್ರಾಚೀನವಾದದ್ದು ಎಂಬುದರ ಮೇಲೆ ಬೆಳಕು ಚೆಲ್ಲಿತ್ತು. ಸಿಂಧೂ ಕಣಿವೆಯಲ್ಲಿದ್ದವರು ಕ್ರಮೇಣ ವಲಸೆ ಹೋಗಿ ದಕ್ಷಿಣದ ಕಡೆಗೆ ಬಂದು ನೆಲೆಸಲು ಆರಂಭಿಸಿದ್ದರು ಎಂಬ ವಾದವಾಗಿತ್ತು. ದ್ರಾವಿಡ ಸಂಸ್ಕೃತಿಯ ಪ್ರಾತಿನಿಧ್ಯವೆಂದು ಪರಿಗಣಿಸಲಾದ ಗೂಳಿಗಳ ಚಿಹ್ನೆಗಳು ಸಿಂಧೂ ಕಣಿವೆಯ ಕಲಾಕೃತಿಗಳಲ್ಲಿ ಪ್ರಚಲಿತದಲ್ಲಿವೆ ಎಂದು ಅಧ್ಯಯನಗಳು ತೋರಿಸುತ್ತವೆ. ತಮಿಳುನಾಡಿನ ಶಿವಕಲೈ, ಆದಿಚನಲ್ಲೂರು, ಮೈಲಾಡುಂಪರೈ ಮುಂತಾದ ಸ್ಥಳಗಳಲ್ಲಿ ಈ ರೀತಿಯ ಚಿಹ್ನೆಗಳು ಮತ್ತು ಶಾಸನಗಳು ಕಂಡುಬರುತ್ತವೆ. ಇಲ್ಲಿನ ಕುಂಬಾರಿಕೆ ಪ್ರಕಾರವೂ ಶೇ.60 ರಷ್ಟು ಸಿಂಧೂ ಕಣಿವೆ ನಾಗರಿಕತೆಗೆ ಹೋಲಿಕೆಯಾಗುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ.
With the script of the Indus Valley Civilisation (IVC) remaining a mystery even after a 100 years after its discovery, Tamil Nadu chief minister MK Stalin on Sunday announced a prize of $1 million to those who decipher the ancient script.
13-10-26 03:38 pm
HK News Staffer
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm