ಬ್ರೇಕಿಂಗ್ ನ್ಯೂಸ್
16-01-25 04:24 pm HK News Desk ದೇಶ - ವಿದೇಶ
ಮುಂಬೈ, ಜ.16: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮನೆಯೊಳಗೆ ಮಧ್ಯರಾತ್ರಿಯಲ್ಲಿ ಹೊಕ್ಕಿದ್ದ ವ್ಯಕ್ತಿಯೊಬ್ಬ ಸೈಫ್ ಮೇಲೆ ಚೂರಿಯಿಂದ ತಿವಿದು ಹಲ್ಲೆಗೊಳಿಸಿದ ಘಟನೆ ನಡೆದಿದೆ. ಗುರುವಾರ ನಸುಕಿನ 2.230ರ ವೇಳೆಗೆ ಬಾಂದ್ರಾದಲ್ಲಿರುವ ಅಪಾರ್ಟ್ಮೆಂಟ್ ಕಟ್ಟಡದ ಮನೆಯೊಳಗೆ ಘಟನೆ ನಡೆದಿದೆ. ಆಗಂತುಕ ವ್ಯಕ್ತಿ ನೇರವಾಗಿ ಸೈಫ್ ಮೇಲೆ ಚೂರಿಯಿಂದ ತಿವಿದಿದ್ದಾನೆ. ಈ ವೇಳೆ, ಬೊಬ್ಬೆ ಕೇಳಿ ಮನೆಯ ಇತರ ಸದಸ್ಯರು ಎಚ್ಚತ್ತಿದ್ದು, ಅಷ್ಟರಲ್ಲಿ ಆಗಂತುಕ ಪರಾರಿಯಾಗಿದ್ದಾನೆ.
ಮೇಲ್ನೋಟಕ್ಕೆ ದರೋಡೆ ಮಾಡಲು ಮನೆಗೆ ಹೊಕ್ಕಿದ್ದ ಆಗಂತುಕನೇ ಚೂರಿಯಿಂದ ಇರಿದಿದ್ದಾನೆ ಎನ್ನಲಾಗುತ್ತಿದೆ. ಸೈಫ್ ದೇಹಕ್ಕೆ ಆರು ಕಡೆ ಇರಿತದ ಗಾಯಗಳಾಗಿದ್ದು ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎರಡು ಸರ್ಜರಿಗಳನ್ನು ಮಾಡಲಾಗಿದ್ದು, ಸದ್ಯ ಸೈಫ್ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸೈಫ್ ಅವರ ಬೆನ್ನು ಮೂಳೆಗೆ ತೀವ್ರ ಗಾಯವಾಗಿದ್ದು, ಅಲ್ಲಿ ಚೂರಿಯ ತುಣುಕು ಉಳಿದುಕೊಂಡಿತ್ತು. ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆರವು ಮಾಡಿದ್ದಾರೆ.
ಸೈಫ್ ಮನೆಯೊಳಗಿನ ಸಿಸಿಟಿವಿಯಲ್ಲಿ ವ್ಯಕ್ತಿಯ ಚಹರೆ ಪತ್ತೆಯಾಗಿಲ್ಲ. ಘಟನೆ ಬಳಿಕ ಮೆಟ್ಟಿಲ ಮೂಲಕ ಪರಾರಿಯಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಸಿಸಿಟಿವಿ ದೃಶ್ಯಗಳನ್ನು ತಪಾಸಣೆ ಮಾಡುತ್ತಿದ್ದೇವೆ. ಆರೋಪಿ ಪತ್ತೆಗಾಗಿ ಹತ್ತು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಬಾಂದ್ರಾ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಮುಂಬೈ ಬಾಂದ್ರಾ ವಲಯ ಡಿಸಿಪಿ ದೀಕ್ಷಿತ್ ಕದಮ್ ತಿಳಿಸಿದ್ದಾರೆ.
ಬಾಂದ್ರಾದ ಸದ್ಗುರು ಶರಣ್ ಅಪಾರ್ಟ್ಮೆಂಟ್ ಕಟ್ಟಡದಲ್ಲಿರುವ 100 ಕೋಟಿಯ ಮನೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳದಲ್ಲಿ ತೀವ್ರ ತಪಾಸಣೆ ಕೈಗೊಂಡಿದ್ದಾರೆ. ಸಿಎನ್ ಬಿಸಿ ಟಿವಿ 18 ಮಾಧ್ಯಮ ವರದಿ ಪ್ರಕಾರ, ಆಗಂತುಕ ಸೈಫ್ ಆಲಿ ಖಾನ್ ಅವರ ಮಗು ಮಲಗಿದ್ದ ಬೆಡ್ ರೂಮಿನಲ್ಲಿ ಅಡಗಿಕೊಂಡಿದ್ದ. ಮನೆ ಕೆಲಸಕ್ಕಿದ್ದ ಅರಿಯಮ್ಮ ಫಿಲಿಪ್ಸ್ ಆಗಂತುಕ ವ್ಯಕ್ತಿಯನ್ನು ನೋಡಿ ಕಿರುಚಿದ್ದಾಳೆ. ಈ ವೇಳೆ ಆಕೆಯ ಮೇಲೆ ಆಗಂತುಕ ದಾಳಿ ಮಾಡಿದ್ದಾನೆ. ಇಷ್ಟರಲ್ಲೇ ಮಗು ಚೀರಾಡಿದ್ದು, ಸದ್ದು ಕೇಳಿ ಸೈಫ್ ಆಲಿ ಖಾನ್ ಕೋಣೆಗೆ ಎಂಟ್ರಿ ಕೊಟ್ಟಿದ್ದಾರೆ. ಮಗುವಿನ ರಕ್ಷಣೆಗಾಗಿ ವ್ಯಕ್ತಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ, ಆಗಂತುಕ ಚೂರಿಯಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಯ ಸ್ಪಷ್ಟ ಚಿತ್ರಣ ಇನ್ನೂ ಲಭಿಸಿಲ್ಲ. ಹೀಗಾಗಿ ಬಂದಿದ್ದ ಆಗಂತುಕ ದರೋಡೆಗಾಗಿಯೇ ಬಂದಿದ್ದನೇ ಬೇರಾವುದೇ ಉದ್ದೇಶದಿಂದ ಮನೆಯೊಳಗೆ ಹೊಕ್ಕಿದ್ದನೇ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಗಂತುಕ ವ್ಯಕ್ತಿ ಮನೆಗೆ ಎಂಟ್ರಿ ಕೊಟ್ಟಿದ್ದು ಹೇಗೆ, ಮೊದಲೇ ಬಂದು ಮನೆಯೊಳಗೆ ಅಡಗಿಕೊಂಡಿದ್ದನೇ ಎನ್ನುವ ಬಗ್ಗೆಯೂ ತಿಳಿದಿಲ್ಲ. ಕೆಲವು ದಿನಗಳ ಹಿಂದೆ ಮನೆಗೆ ನೆಲಕ್ಕೆ ಪಾಲಿಶಿಂಗ್ ಮಾಡುವುದಕ್ಕಾಗಿ ಕಾರ್ಮಿಕರು ಬಂದಿದ್ದರು. ಈ ಬಗ್ಗೆ ಸೈಫ್ ಅವರ ಮೂವರು ಸ್ಟಾಫ್ ಸಿಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ, ಆಗಂತುಕ ಕಿಟಕಿ ಮೂಲಕ ಎಂಟ್ರಿ ಕೊಟ್ಟಿದ್ದಾನೆ. ಕಿಟಕಿ ಒಡೆದು ಹೋಗಿರುವುದು ಪತ್ತೆಯಾಗಿದೆ ಎನ್ನುವ ಮಾಹಿತಿ ಇದೆ. ಸೈಫ್ ಆಲಿ ಖಾನ್ ಜನಪ್ರಿಯ ನಟಿ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.
Bollywood actor Saif Ali Khan has been stabbed after an intruder invaded his home in Mumbai. Khan, 54, was taken to a nearby hospital in Mumbai at about 3:30am on Thursday (22:00 GMT on Wednesday) with six injuries, two deeper than the rest and one close to his spine, ANI news agency said, quoting the hospital’s chief operating officer.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
22-07-25 11:19 am
Mangalore Correspondent
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm