ಬಿಜೆಪಿಯೇ ತುಕ್ಡೇ ಗ್ಯಾಂಗ್, ಶಾಂತಿ ನೆಲೆಸಿದ್ದ ಪಂಜಾಬಿನಲ್ಲಿ ಹಿಂಸೆ ಸೃಷ್ಟಿಸುತ್ತಿದೆ

15-12-20 06:25 pm       Headline Karnataka News Network   ದೇಶ - ವಿದೇಶ

ಪಂಜಾಬಿನಲ್ಲಿ ರೈತರ ಪ್ರತಿಭಟನೆ ಮುಂದಿಟ್ಟು ಹಿಂದುಗಳನ್ನು ಸಿಖ್ಖರ ವಿರುದ್ಧ ಎತ್ತಿಕಟ್ಟುತ್ತಿದೆ. ಸೌಹಾರ್ದತೆ ನೆಲೆಸಿದ್ದ ನಾಡಿನಲ್ಲಿ ಹಿಂಸೆ ಸೃಷ್ಟಿಸುತ್ತಿದೆ ಎಂದು ಸುಖಬೀರ್ ಸಿಂಗ್ ಬಾದಲ್ ಆರೋಪಿಸಿದ್ದಾರೆ.

ನವದೆಹಲಿ, ಡಿ.15: ಈ ದೇಶದಲ್ಲಿ ಬಿಜೆಪಿಯೇ ನಿಜವಾದ ತುಕ್ಡೇ ತುಕ್ಡೇ ಗ್ಯಾಂಗ್. ಪಂಜಾಬಿನಲ್ಲಿ ರೈತರ ಪ್ರತಿಭಟನೆ ಮುಂದಿಟ್ಟು ಹಿಂದುಗಳನ್ನು ಸಿಖ್ಖರ ವಿರುದ್ಧ ಎತ್ತಿಕಟ್ಟುತ್ತಿದೆ. ಸೌಹಾರ್ದತೆ ನೆಲೆಸಿದ್ದ ನಾಡಿನಲ್ಲಿ ಹಿಂಸೆ ಸೃಷ್ಟಿಸುತ್ತಿದೆ ಎಂದು ಶಿರೋಮಣಿ ಅಕಾಲಿದಳ್ ಘಟಕದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಆರೋಪಿಸಿದ್ದಾರೆ.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಾದಲ್ ಈ ರೀತಿ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಹಿಂದು- ಮುಸ್ಲಿಮರನ್ನು ಒಡೆಯುವಂತೆ ಮಾಡಿದ್ರು. ಈಗ ಶಾಂತಿ ನೆಲೆಸಿದ್ದ ಪಂಜಾಬಿನಲ್ಲಿ ಹಿಂದುಗಳನ್ನು ಎತ್ತಿಕಟ್ಟುತ್ತಿದ್ದಾರೆ. ಹಿಂಸೆಗೆ ದೂಡುತ್ತಿದ್ದಾರೆ. ಎನ್ ಡಿಎ ಸರಕಾರ ರಾಜ್ಯಗಳ ಅಧಿಕಾರವನ್ನು ಬದಿಗೊತ್ತಿ ಕೃಷಿ ಕಾನೂನುಗಳನ್ನು ಹೇರುತ್ತಿದೆ. ಅಕಾಲಿ ದಳ ಹಿಂದೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಮಾತನಾಡಿದಾಗ ನಮ್ಮನ್ನು ಪ್ರತ್ಯೇಕತಾವಾದಿಗಳು ಎಂದಿದ್ದರು. ಈಗ ಎಲ್ಲರೂ ಈ ಬಗ್ಗೆ ದನಿ ಎತ್ತುತ್ತಿದ್ದಾರೆ. ವಿಕೇಂದ್ರೀಕರಣವೇ ಸರಿ ಎನ್ನುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ಈಗಿನ ಸ್ಥಿತಿ ಹೇಗಿದೆ ಎಂದ್ರೆ ಕೇಂದ್ರ ಸರಕಾರವನ್ನು ಒಪ್ಪಿದವರು ಮಾತ್ರ ದೇಶಭಕ್ತರು. ವಿರೋಧಿಸಿದರೆ ಅವರೆಲ್ಲ ದೇಶ ವಿರೋಧಿಗಳು ಅನ್ನುವ ಸ್ಥಿತಿ ಇದೆ. ಕೇಂದ್ರ ಸರಕಾರದ ಕೃಷಿ ನೀತಿ ವಿರೋಧಿಸಿ ಪ್ರಕಾಶ್ ಸಿಂಗ್ ಬಾದಲ್ ಪದ್ಮ ಪ್ರಶಸ್ತಿ ನಿರಾಕರಿಸಿದ್ದು, ಕೇಂದ್ರ ಸಚಿವ ಸ್ಥಾನಕ್ಕೆ ಹರ್ ಸಿಮ್ರತ್ ಕೌರ್ ಬಾದಲ್ ರಾಜಿನಾಮೆ ನೀಡಿದ್ದೆಲ್ಲ ದೇಶದ್ರೋಹಿ ಚಟುವಟಿಕೆ ಎನ್ನುವಂತಾಗಿದೆ. ಈಗಿನ ಕೃಷಿ ನೀತಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂದು- ಸಿಕ್ಖರ ನಡುವಿನ ಸಂಘರ್ಷ ಎನ್ನುವಂತೆ ಬಿಂಬಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.