ಬ್ರೇಕಿಂಗ್ ನ್ಯೂಸ್
01-02-25 05:51 pm HK News Desk ದೇಶ - ವಿದೇಶ
ನವದೆಹಲಿ, ಫೆ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ ಬಜೆಟ್‌ನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ. ಇದು 'ಗುಂಡೇಟಿನ ಗಾಯಗಳಿಗೆ ಹಾಕಿದ ಬ್ಯಾಂಡೇಜ್' ಎಂದು ಅವರು ಹೇಳಿದ್ದಾರೆ
ಫೆಬ್ರವರಿ 1, 2025ರಂದು ಮಂಡಿಸಿದ 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕಟುವಾಗಿ ವಿಮರ್ಶಿಸಿರುವ ಅವರು, 'ಕೇಂದ್ರ ಸರ್ಕಾರ ಹೊಸ ಚಿಂತನೆ ಇಲ್ಲದೆ ದಿವಾಳಿಯಾಗಿದೆ' ಎಂದು ಲೇವಡಿ ಮಾಡಿದ್ದಾರೆ.
ಜಾಗತಿಕ ಅನಿಶ್ಚಿತತೆಯ ನಡುವೆ, ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಹೊಸ ಚಿಂತನೆ ಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವ ರಾಹುಲ್ ಗಾಂಧಿ, ಇದು ಗುಂಡೇಟಿನ ಗಾಯಗಳಿಗೆ ಹಚ್ಚಿದ ಬ್ಯಾಂಡೇಜ್ ಎಂದು ವ್ಯಂಗ್ಯವಾಡಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮುಂದಿನ ಹಣಕಾಸು ವರ್ಷದ ಆಯವ್ಯಯವನ್ನು ಮಂಡಿಸಿದ ಬಳಿಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಕೇಂದ್ರದ ನಡೆಯನ್ನು ಟೀಕಿಸಿದ್ದಾರೆ.
"ಗುಂಡಿನ ಗಾಯಗಳಿಗೆ ಬ್ಯಾಂಡೇಜ್. ಜಾಗತಿಕ ಅನಿಶ್ಚಿತತೆಯ ಮಧ್ಯೆ, ನಮ್ಮ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಒಂದು ಮಾದರಿಯಾದ ಬದಲಾವಣೆ ಬೇಕಾಗಿತ್ತು. ಆದರೆ ಈ ಸರ್ಕಾರ ಹೊಸ ಚಿಂತನೆಗಳಿಲ್ಲದೆ ದಿವಾಳಿಯಾಗಿದೆ," ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಈ ಮೂಲಕ ಆದಾಯ ತೆರಿಗೆ ಮಿತಿ ಹೆಚ್ಚಳದಂಥಹ ಕ್ರಮಗಳ ಮೂಲಕ ದೇಶದ ಜನರಿಗೆ ಅಲ್ಪ ಕೊಡುಗೆ ನೀಡಲಾಗಿದೆ. ಆದರೆ, ಆರ್ಥಿಕತೆಯನ್ನು ಮೇಲೆತ್ತಲು ಇದು ಸಾಕಾಗಲ್ಲ. ಮತ್ತಷ್ಟು ಕೊಡುಗೆಗಳು ಬೇಕಿತ್ತು ಎನ್ನುವ ಅರ್ಥದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಹೊಸ ಚಿಂತನೆಗಳಿಲ್ಲದೆ ಕೇಂದ್ರ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಟೀಕೆ ಕೇವಲ ಬಜೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಬಜೆಟ್ ರಚನೆಯ ಪ್ರಕ್ರಿಯೆಯ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಜೆಟ್ ರಚನೆಯಲ್ಲಿ ಹಿಂದುಳಿದ, ತುಳಿತಕ್ಕೊಳಗಾದ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಶುಕ್ರವಾರ ಹಣಕಾಸು ಸಚಿವರನ್ನು ತೀವ್ರವಾಗಿ ಟೀಕಿಸಿದ್ದ ಅವರು, ಬಜೆಟ್ ರಚನೆಯಲ್ಲಿ ಕೆಲವು ವರ್ಗಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದರು.
Congress MP Rahul Gandhi on Friday launched a sharp attack on Finance Minister Nirmala Sitharaman over the preparation of the Union Budget, questioning the alleged lack of representation for the marginalised communities in the decision-making process.
01-02-25 05:12 pm
HK News Desk
ಕಾಂಗ್ರೆಸ್ ನಿಂದ ಬಿಜೆಪಿ ಹೋದವರಿಗೆ ಅಲ್ಲಿ ಯಾವ ಸ್ಥಾ...
31-01-25 10:10 pm
Sriramulu, BJP, B. Y. Vijayendra: ವಿಜಯೇಂದ್ರ ಸ...
31-01-25 08:03 pm
SC directive for patients, Karnataka Health D...
31-01-25 06:07 pm
Cheque bounce, Snehamahi Krishna: ಮುಡಾ ಹಗರಣ ಹ...
31-01-25 02:02 pm
01-02-25 05:51 pm
HK News Desk
ಕೇಂದ್ರ ಬಜೆಟ್ ಮಂಡನೆ ; ಕೃಷಿಕರು, ಮಧ್ಯಮ ವರ್ಗಕ್ಕೆ...
01-02-25 02:10 pm
Sonia Gandhi, president Murmu: ರಾಷ್ಟ್ರಪತಿ ಬಗ್...
31-01-25 09:10 pm
ಅಮೆರಿಕದಲ್ಲಿ ವಿಮಾನ ದುರಂತ ; ಪ್ರಯಾಣಿಕ ವಿಮಾನಕ್ಕೆ...
31-01-25 12:30 pm
1954ರ ಕುಂಭ ಮೇಳದಲ್ಲಿ ಪ್ರಧಾನಿ ನೆಹರು ಬಂದಿದ್ದಾಗಲೇ...
29-01-25 07:55 pm
01-02-25 07:47 pm
Mangalore Correspondent
Kotekar Bank Robbery, Murgan D Devar: ಕೋಟೆಕಾರ...
01-02-25 02:32 pm
Mangalore builder Jitendra Kottary, prasanna...
31-01-25 11:05 pm
Mangalore Prasad attavar, RTI Snehamayi Krish...
31-01-25 10:49 pm
Ullal Panchyath, Mangalore; ಉಳ್ಳಾಲ ನಗರಸಭೆ ಸೀಲ...
31-01-25 09:49 pm
31-01-25 10:22 am
HK News Desk
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am
Ankola, Mangalore Car, Cash, Crime: ಅಂಕೋಲಾದಲ್...
29-01-25 04:12 pm
Mangalore News, Crime, Court: 14 ವರ್ಷದ ಬಾಲಕಿಯ...
28-01-25 05:17 pm
Hubballi Murder, Crime: ಹುಬ್ಬಳ್ಳಿಯಲ್ಲಿ ಯುವಕನ...
28-01-25 11:03 am