ಬ್ರೇಕಿಂಗ್ ನ್ಯೂಸ್
08-02-25 02:23 pm HK News Desk ದೇಶ - ವಿದೇಶ
ನವದೆಹಲಿ, ಫೆ.8: ಲಿಕ್ಕರ್ ಹಗರಣದಲ್ಲಿ ಮುಳುಗೆದ್ದ ಆಮ್ ಆದ್ಮಿ ಪಕ್ಷವನ್ನು ದೆಹಲಿ ಮತದಾರ ಪೊರಕೆ ಹಿಡಿದು ಗುಡಿಸಿ ಹಾಕಿದ್ದಾನೆ. ಬಿಜೆಪಿ 46 ಸ್ಥಾನಗಳಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದ್ದರೆ, ಆಪ್ ಪಕ್ಷವು 22 ಸ್ಥಾನಗಳನ್ನು ಪಡೆದು ಏದುಸಿರು ಬಿಟ್ಟಿದೆ.
ಆಪ್ ಮುಖ್ಯಮಂತ್ರಿ ಅತಿಷಿ ಕಾಲ್ಕಜಿ ಮತ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಸಾಧಿಸಿದರೆ, ಮಾಜಿ ಮುಖ್ಯಮಂತ್ರಿ, ಆಪ್ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅಚ್ಚರಿಯ ಸೋಲು ಕಂಡಿದ್ದಾರೆ. ಅತಿಷಿ ಪ್ರತಿಸ್ಪರ್ಧಿ ಬಿಜೆಪಿಯ ರಮೇಶ್ ಬಿಧೂರಿ ವಿರುದ್ಧ 2700 ಮತಗಳಿಂದ ಗೆಲುವು ಪಡೆದಿದ್ದಾರೆ.
ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ 21561 ಮತ ಗಳಿಸಿದ್ದು ಬಿಜೆಪಿಯ ಪರ್ವೇಶ್ ವರ್ಮಾ (24743) ವಿರುದ್ಧ 3152 ಮತಗಳಿಂದ ಸೋಲುಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸಿನ ಸಂದೀಪ್ ದೀಕ್ಷಿತ್ 3113 ಮತಗಳನ್ನಷ್ಟೆ ಪಡೆದಿದ್ದಾರೆ.
ಡಿಸಿಎಂ ಮನೀಶ್ ಸಿಸೋಡಿಯಾ (30724) ಜಾನ್ ಪುರ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಎದುರಾಳಿ ಬಿಜೆಪಿಯ ತರ್ವಿಂದರ್ ಸಿಂಗ್ ಮರ್ವಾ (31593) ವಿರುದ್ಧ ಅಲ್ಪ ಅಂತರದಲ್ಲಿ ಸೋಲನುಭವಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ಸತತ ನಾಲ್ಕನೇ ಬಾರಿಗೆ ದೆಹಲಿ ಗದ್ದುಗೆ ಪಡೆಯಲು ಸಿದ್ಧತೆ ನಡೆಸಿತ್ತು. ಆದರೆ ಆಪ್ ಆಡಳಿತಕ್ಕೆ ಆಡಳಿತ ವಿರೋಧಿ ಅಲೆಯೂ ಜೋರಾಗಿತ್ತು. ಇದನ್ನು ಸೆಳೆದುಕೊಳ್ಳುವಲ್ಲಿ ಕಾಂಗ್ರೆಸ್ ಸೋತಿದ್ದರೆ, ಬಿಜೆಪಿಗೆ ವರವಾಗಿ ಪರಿಣಮಿಸಿತು. ಇದರಿಂದಾಗಿ 70 ಕ್ಷೇತ್ರಗಳಲ್ಲಿ ಬಿಜೆಪಿ ಯಾರೂ ಊಹಿಸದ ರೀತಿಯ ಗೆಲುವು ದಾಖಲಿಸಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ - ಆಪ್ - ಬಿಜೆಪಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ ಬಿಜೆಪಿ ವಿರೋಧಿ ಕೂಟಕ್ಕೆ ಸೋಲಾಗಿದೆ.
Election Commission of India Delhi results LIVE: Current standings indicate that the BJP is set to return to power in Delhi after 27 years, with party leading/winning in 48 seats, while AAP is ahead/has won 22, much below the majority mark of 36, according to EC data at around 1:20 pm.
11-03-25 06:19 pm
Bangalore Correspondent
ರಾಜ್ಯದ ಕಿರು ಫೈನಾನ್ಸ್ ಸಂಸ್ಥೆಗಳಲ್ಲಿ 40 ಸಾವಿರ ಕೋ...
11-03-25 03:41 pm
Ranya Rao gold smuggling case: ರನ್ಯಾ ರಾವ್ ಚಿನ...
11-03-25 02:27 pm
Ranya Rao Latest News: ವಿಧಾನಸಭೆಯಲ್ಲಿ ರನ್ಯಾ ಪ್...
10-03-25 09:51 pm
Yathindra, Muda Site: ಮುಡಾಕ್ಕೆ ಹಿಂತಿರುಗಿಸಿದ್ದ...
10-03-25 02:07 pm
10-03-25 10:17 pm
HK News Desk
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
Cricket Win India, Trophy 2025: ರೋಚಕ ಹಣಾಹಣಿಯಲ...
09-03-25 10:49 pm
Dubai, Kerala, Death Sentence: ದುಬೈನಲ್ಲಿ ಇಬ್ಬ...
08-03-25 04:03 pm
James Harrison, Golden Arm, Death: ಲಕ್ಷಾಂತರ ಮ...
05-03-25 05:38 pm
11-03-25 10:33 pm
Mangalore Correspondent
Mangalore Railway Station News: ರೈಲ್ವೇ ನಿಲ್ದಾ...
11-03-25 10:10 pm
Mangalore MP Brijesh Chowta, ISPRL: ಎಂಟು ವರ್ಷ...
11-03-25 08:42 pm
Katrina Kaif, Kukke Subrahmanya Temple, Mang...
11-03-25 03:19 pm
Mangalore Bakrabailu Subbaiah Shetty Death: ದ...
10-03-25 09:16 pm
11-03-25 07:34 pm
Bangalore Correspondent
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm
Koppal Rape, Crime, Arrest: ಪೆಟ್ರೋಲ್ ದುಡ್ಡು ಕ...
08-03-25 10:44 pm