ಬ್ರೇಕಿಂಗ್ ನ್ಯೂಸ್
26-02-25 05:38 pm HK News Desk ದೇಶ - ವಿದೇಶ
ನವದೆಹಲಿ, ಫೆ.26 : ಸುಡಾನ್ ಮಿಲಿಟರಿ ವಿಮಾನವೊಂದು ಜನವಸತಿ ಪ್ರದೇಶದಲ್ಲಿ ಪತನಗೊಂಡಿದ್ದು ಸ್ಥಳೀಯ ನಾಗರಿಕರು, ಅಧಿಕಾರಿಗಳು ಸೇರಿದಂತೆ 46 ಜನರು ಸಾವನ್ನಪ್ಪಿದ್ದಾರೆ. ಸುಡಾನ್ ರಾಜಧಾನಿ ಖಾರ್ಟೂಮ್ ನಗರ ಸಮೀಪದ ಓಮ್ದುರ್ಮನ್ ಎಂಬಲ್ಲಿ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿದೆ.
ಸುಡಾನ್ ಮಿಲಿಟರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅಪಘಾತದಲ್ಲಿ ಮಿಲಿಟರಿ ಸಿಬ್ಬಂದಿ ಮತ್ತು ಸ್ಥಳೀಯ ನಾಗರಿಕರು ಸಾವನ್ನಪ್ಪಿದ್ದಾರೆ. ಅಪಘಾತದ ಕಾರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸುಡಾನ್ ಸೇನಾ ವರದಿಯ ಪ್ರಕಾರ, ಸೇನೆಯ ಆಂಟೊನೊವ್ ವಿಮಾನ ವಾಡಿ ಸಯೆದ್ನಾ ವಾಯುನೆಲೆಯಿಂದ ಟೇಕಾಫ್ ಆಗುವಾಗ ಅಪಘಾತಕ್ಕೀಡಾಗಿದೆ. ಮನೆಗಳು ಇದ್ದ ಜಾಗಕ್ಕೆ ವಿಮಾನ ಬಿದ್ದಿರುವುದರಿಂದ ಸ್ಥಳೀಯ ಹಲವರು ಗಾಯಗೊಂಡಿದ್ದಾರೆ.



ಸುಡಾನ್ ಆರೋಗ್ಯ ಸಚಿವಾಲಯವು ಸಾವಿನ ಸಂಖ್ಯೆ ಕನಿಷ್ಠ 46 ಎಂದು ತಿಳಿಸಿದೆ. ಘಟನೆ ವೇಳೆ, ಹತ್ತು ಮಂದಿ ನಾಗರಿಕರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಂತ್ರಿಕ ತೊಂದರೆಯಿಂದ ವಿಮಾನ ಪತನಗೊಂಡಿದೆ ಎಂದು ಸೇನೆ ಹೇಳಿಕೊಂಡಿದೆ.
ಹೆಚ್ಚುತ್ತಿರುವ ಅಂತರ್ಯುದ್ಧ
ಸುಡಾನ್ 2023ರಿಂದ ನಿರಂತರವಾಗಿ ಅಂತರ್ಯುದ್ಧ ನಡೆಯುತ್ತಿದ್ದು ದೇಶದ ಮಿಲಿಟರಿ ಮತ್ತು ಕುಖ್ಯಾತ ಅರೆಸೈನಿಕ ಗುಂಪು, ರಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ನಡುವಿನ ಉದ್ವಿಗ್ನ ಸ್ಥಿತಿ ಯುದ್ಧ ರೂಪ ಪಡೆದಿದೆ. ಜನಾಂಗೀಯ ಹಿಂಸಾಚಾರ ಮತ್ತು ಸಾಮೂಹಿಕ ಅತ್ಯಾಚಾರದಂತಹ ಭಯಾನಕ ಘಟನೆಗಳಿಗೆ ಕಾರಣವಾಗುತ್ತಿದೆ. ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳು ಈ ಘಟನೆಗಳನ್ನು ಮಾನವೀಯತೆಯ ವಿರುದ್ಧದ ಕ್ರೌರ್ಯಗಳು ಎಂದು ಕರೆದಿವೆ. ಇತ್ತೀಚಿಗೆ ಖಾರ್ಟೌಮ್ ಮತ್ತು ಇತರ ಪ್ರದೇಶಗಳಲ್ಲಿ ಆರ್‌ಎಸ್‌ಎಫ್ ಬಂಡುಕೋರರ ವಿರುದ್ಧ ಸೇನಾ ಕಾರ್ಯಾಚರಣೆ ತೀವ್ರಗೊಂಡಿದೆ. ಇದಕ್ಕೆ ಪ್ರತೀಕಾರ ಎನ್ನುವಂತೆ ಸುಡಾನ್ ಮಿಲಿಟರಿ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಹೇಳಳಲಾಗುತ್ತಿದೆ.
Forty-six people were killed when a Sudanese military transport plane crashed into a residential neighbourhood on the outskirts of Khartoum, the regional government said Wednesday.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm