ಬ್ರೇಕಿಂಗ್ ನ್ಯೂಸ್
17-12-20 04:36 pm Headline Karnataka News Network ದೇಶ - ವಿದೇಶ
ವಾರಣಾಸಿ, ಡಿ.17: ಮದುವೆ ಫಿಕ್ಸ್ ಆದಬಳಿಕ ಹುಡುಗ ಕೈಕೊಡುವುದನ್ನು ಕೇಳಿದ್ದೇವೆ. ಮದುವೆ ನಿರಾಕರಿಸಿ, ಹುಡುಗಿ ಬೇರೆ ಹುಡುಗನ ಜೊತೆ ಓಡಿ ಹೋಗಿದ್ದನ್ನೂ ಕೇಳಿದ್ದೇವೆ. ಆದರೆ, ಇಲ್ಲಿ ಮಾತ್ರ ಬೇರೆಯದ್ದೇ ಕತೆ ಆಗಿದೆ. ಹುಡುಗನ ಕಡೆಯವರು ಸಂಜೆ ಹೊತ್ತಿಗೆ ಹುಡುಗಿ ಮನೆಗೆಂದು ದಿಬ್ಬಣ ತೆರಳಿದ್ದಾರೆ. ಆದರೆ, ಹುಡುಗಿ ಮನೆಯನ್ನು ಪತ್ತೆ ಮಾಡಲಾಗದೆ ಇಡೀ ರಾತ್ರಿ ಬಸವಳಿದಿದ್ದಾರೆ.
ಹೌದು.. ಹುಡುಗನ ಮನೆಯವರು, ಸಂಬಂಧಿಕರೆಲ್ಲ ಸೇರಿ ಹುಡುಕಿದ್ರೂ ಹುಡುಗಿಯ ಮನೆ ಪತ್ತೆ ಮಾಡಲಾಗದೆ ಹೈರಾಣಾದ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಾವೋ ಜಿಲ್ಲೆಯ ರಾಣಿಪುರ ಎಂಬಲ್ಲಿ ಘಟನೆ ನಡೆದಿದ್ದು, ಇಡೀ ರಾತ್ರಿ ಊರಲ್ಲಿ ಅಲೆದಾಡಿದ ಮಂದಿ ಬೆಳಗ್ಗಿನ ಹೊತ್ತಿಗೆ ತಮ್ಮೂರಿಗೆ ಮರಳಿದ್ದಾರೆ.
ವಿಷ್ಯ ಆಗಿದ್ದು ಏನಪ್ಪಾಂದ್ರೆ, ಹುಡುಗನ ಕಡೆಯವರಿಗೆ ಸಂಬಂಧ ಮಾಡಿದ್ದು ಒಬ್ಬ ಮಧ್ಯವರ್ತಿ ಮಹಿಳೆ. ಹುಡುಗನಿಗೆ ಈ ಹಿಂದೆ ಮದುವೆಯಾಗಿದ್ದು, ಪತ್ನಿಯನ್ನು ಬಿಟ್ಟಿದ್ದ. ಆತನ ಪತ್ನಿ ಒಬ್ಬಂಟಿಯಾಗಿ ಬಿಹಾರದ ಸಮಸ್ತಿಪುರದ ತನ್ನ ಮನೆಯಲ್ಲಿ ವಾಸ ಇದ್ದಾಳೆ. ಈ ನಡುವೆ, ಬೇರೆ ಮದುವೆಯಾಗಲು ಹುಡುಗ ಮತ್ತು ಆತನ ತಾಯಿ ರೆಡಿ ಮಾಡಿಕೊಂಡಿದ್ದಾರೆ. ಹೊಸ ಸಂಬಂಧದ ಬಗ್ಗೆ ಹೇಳಿಕೊಂಡು ಬಂದಿದ್ದ ಮಹಿಳೆಯೊಬ್ಬಳು ಹೊಟೇಲ್ ಒಂದರಲ್ಲಿ ಹುಡುಗ ಮತ್ತು ಆತನ ತಾಯಿ ಜೊತೆ ಮಾತುಕತೆ ನಡೆಸಿದ್ದಾಳೆ. ಆದರೆ, ಹುಡುಗನ ಕಡೆಯವರು ಹುಡುಗಿ ಮನೆಗೆ ಹೋಗಲಿಲ್ಲ. ನೀವು ದಿಬ್ಬಣ ತಗೊಂಡು ಬನ್ನಿ. ಅಲ್ಲಿ ಅರೇಂಜ್ ಮಾಡಿಸ್ತೀನಿ ಎಂದು 20 ಸಾವಿರ ಹಣವನ್ನೂ ಮಹಿಳೆ ಪಡೆದಿದ್ದಳು. ಹುಡುಗಿ ಮನೆಯವರಿಗೆ ಹಣ ಕೊಟ್ಟು ಅಲ್ಲಿ ವ್ಯವಸ್ಥೆ ಮಾಡಬೇಕು ಎಂದಿದ್ದಳು.

ಡಿ.10ರಂದು ಮದುವೆಗೆ ದಿನ ನಿಶ್ಚಯ ಆಗಿದ್ದು, ಹುಡುಗನ ಕಡೆಯವರು ಮುನ್ನಾದಿನ ಸಂಜೆಯೇ ಹೊರಟಿದ್ದಾರೆ. ಅಜಾಮ್ ಘರ್ ಜಿಲ್ಲೆಯ ಕೊತ್ವಾಲಿ ನಗರದ ಕಾನ್ಶೀರಾಮ್ ಕಾಲನಿಯಿಂದ ಹೊರಟಿದ್ದು ಸರಿಯಾದ ಸಮಯಕ್ಕೇ ತಲುಪಿದ್ದರು. ಆದರೆ, ಹುಡುಗಿ ಮನೆಯನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಸಂಬಂಧ ಕುದುರಿಸಿದ್ದ ಮಹಿಳೆಯೂ ನಾಪತ್ತೆಯಾಗಿದ್ದಳು. ರಾತ್ರಿಯಿಡೀ ರಾಣಿಪುರ ಗ್ರಾಮದಲ್ಲಿ ಹುಡುಕಾಡಿ, ಮರುದಿನ ಬೆಳಗ್ಗೆ ಹುಡುಗನ ಸಂಬಂಧಿಕರು ಪೆಚ್ಚು ಮೋರೆ ಹಾಕ್ಕೊಂಡು ಮರಳಿದ್ದಾರೆ.
ಮನೆಗೆ ಆಗಮಿಸಿ, ಸಂಬಂಧ ಕುದುರಿಸಿದ್ದ ಮಹಿಳೆಯ ವಿರುದ್ಧ ಕೊತ್ವಾಲಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿದ್ದು, ಮಹಿಳೆ ಮತ್ತು ಹುಡುಗನ ಕಡೆಯವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.
A wedding procession of a bridegroom that reached Ranipur in Mau district from Kanshi Ram Colony in Kotwali town of Uttar Pradesh's Azamgarh district, could not find the address of the bride
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm