ಬ್ರೇಕಿಂಗ್ ನ್ಯೂಸ್
17-03-25 09:43 pm HK News Desk ದೇಶ - ವಿದೇಶ
ನವದೆಹಲಿ, ಮಾ.17: ಜಮ್ಮು ಕಾಶ್ಮೀರದ ವೈಷ್ಣೋದೇವಿ ಮಂದಿರದ ಬಳಿಯ ತಪ್ಪಲಿನಲ್ಲಿ ಬಾಲಿವುಡ್ ನಟ- ನಟಿಯರು ಡ್ರಗ್ಸ್ ಪಾರ್ಟಿ ಮಾಡಿರುವ ಬಗ್ಗೆ ಜಮ್ಮು ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಬಾಲಿವುಡ್ಡಿನ ಫೇಮಸ್ ಇನ್ ಫ್ಲುವೆನ್ಸರ್, ಓರ್ರಿ ಎಂದೇ ಹೆಸರಾಗಿರುವ ಓರ್ಹಾನ್ ಅವಾತ್ರಮಣಿ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜಮ್ಮು ಪೊಲೀಸರು ನೆಲದ ಕಾನೂನು ರಕ್ಷಣೆ ಮತ್ತು ಧಾರ್ಮಿಕ ಭಾವನೆಗಳಿಗೆ ಅಗೌರವ ತೋರಿಸಿದರೆ ಸಹಿಸುವುದಿಲ್ಲ. ಪವಿತ್ರ ಜಾಗದಲ್ಲಿ ಡ್ರಗ್ಸ್, ಆಲ್ಕೋಹಾಲ್ ಸೇವನೆ ಮಾಡಿದರೆ ಕಠಿಣ ಕಾನೂನು ಖಚಿತ ಎಂಬ ಸಂದೇಶ ರವಾನಿಸಿದ್ದೇವೆ ಎಂದು ಹೇಳಿದ್ದಾರೆ.

ಕತ್ರಾ ಪೊಲೀಸ್ ಠಾಣೆಯಲ್ಲಿ ಮಾರ್ಚ್ 15ರಂದು ದೂರು ದಾಖಲಾಗಿದ್ದು, ಅದರ ಬೆನ್ನಲ್ಲೇ ನಾವು ಕ್ರಮ ಜರುಗಿಸಿದ್ದೇವೆ. ವೈಷ್ಣೋದೇವಿ ಯಾತ್ರೆ ಆರಂಭಗೊಳ್ಳುವ ಕತ್ರಾ ತಪ್ಪಲಿನ ಹೊಟೇಲಿನಲ್ಲಿ ಮದ್ಯ ಸೇವನೆ ಮಾಡಿದ್ದರು. ತಂಡದಲ್ಲಿ ಆರು ಮಂದಿ ಭಾರತೀಯರು ಮತ್ತು ಇನ್ನೊಬ್ಬ ರಷ್ಯನ್ ಪ್ರವಾಸಿಗ ಇದ್ದರು. ಓರ್ಹಾನ್ ಅವಾತ್ರಮಣಿ, ದರ್ಶನ್ ಸಿಂಗ್, ಪಾರ್ಥ್ ರೈನಾ, ರಿತಿಕ್ ಸಿಂಗ್, ರಾಶಿ ದತ್ತಾ, ರಕ್ಷಿತಾ ಭೋಗಾಲ್, ಶಗುನ್ ಕೋಹ್ಲಿ ಮತ್ತು ರಷ್ಯ ಮೂಲದ ಅನಾಸ್ತಸಿಲಾ ಅರ್ಜಾಮ್ ಸ್ಕಿನಾ ಅವರು ಮದ್ಯ-ಡ್ರಗ್ಸ್ ಸೇವನೆ, ನಾನ್ ವೆಜ್ ಬಳಕೆಗೆ ನಿಷೇಧ ಇದ್ದರೂ ಪಾರ್ಟಿ ಮಾಡಿದ್ದಾರೆ. ವೈಷ್ಣೋದೇವಿ ಯಾತ್ರಾ ಸ್ಥಳದಲ್ಲಿ ಇಂತಹ ಅಗೌರವ ನಾವು ಒಪ್ಪುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ರೀತಿಯ ವರ್ತನೆಯನ್ನು ಸಹಿಸುವುದಿಲ್ಲ ಎಂದು ಪ್ರವಾಸಿಗರಿಗೆ ಸಂದೇಶ ನೀಡುವುದಕ್ಕಾಗಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಓರಿ ಬಾಲಿವುಡ್ಡಿನ ಹೆಸರಾಂತ ಸೆಲೆಬ್ರಿಟಿಯಾಗಿದ್ದು, ಜೊತೆಗಿದ್ದವರು ಕೂಡ ನಟ- ನಟಿಯರಾಗಿದ್ದಾರೆ. ಬಾಲಿವುಡ್ ಮಂದಿ ಇದೇ ಜಾಗದಲ್ಲಿ ಪಾರ್ಟಿಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಗ್ಗೆ ಕಠಿಣ ಸಂದೇಶ ರವಾನಿಸಲು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
Police said that alcohol and non-vegetarian diet is not allowed inside Cottage Suite as it is strictly prohibited at divine places like Mata Vaishno devi temple.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm