ಬ್ರೇಕಿಂಗ್ ನ್ಯೂಸ್
27-03-25 04:07 pm HK News Desk ದೇಶ - ವಿದೇಶ
ನವದೆಹಲಿ, ಮಾ.27 : ಶೀಘ್ರದಲ್ಲಿಯೇ ದೇಶದಲ್ಲಿ ಸಹಕಾರಿ ವ್ಯವಸ್ಥೆಯಡಿ ಟ್ಯಾಕ್ಸಿ ಸೇವೆ ಆರಂಭಿಸಲಾಗುವುದು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಘೋಷಣೆ ಮಾಡಿದ್ದಾರೆ. ಓಲಾ, ಊಬರ್ ರೀತಿಯಲ್ಲೇ ಈ ಸೇವೆ ಕೆಲಸ ಮಾಡಲಿದ್ದು ಇದರ ಬೆನಿಫಿಟ್ ನೇರವಾಗಿ ಚಾಲಕರಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಮುಂದಿನ ದಿನಗಳಲ್ಲಿ ಟ್ಯಾಕ್ಸಿ ಚಾಲಕರಿಗಾಗಿ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಟನೆಯನ್ನು ಸ್ಥಾಪಿಸಲಾಗುವುದು ಎಂದು ಅಮಿತ್ ಷಾ ತಿಳಿಸಿದ್ದಾರೆ. ಓಲಾ ಮತ್ತು ಉಬರ್ ನಂತಹ ಪ್ಲಾಟ್ಫಾರ್ಮ್ ಮಾದರಿಯನ್ನು ಅನುಸರಿಸಿ ಚಾಲಕರಿಗೆ ಉದ್ಯೋಗ ಭದ್ರತೆ, ನ್ಯಾಯಯುತ ವೇತನ ಮತ್ತು ರಚನಾತ್ಮಕ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.
ಸಹಕಾರದಿಂದ ಸಮೃದ್ದಿ ಎಂದು ಪ್ರಧಾನಿ ಹೇಳಿರುವುದು ಬರೀ ಘೋಷಣೆಯಲ್ಲ. ಮುಂದಿನ ದಿನಗಳಲ್ಲಿ ಓಲಾ, ಉಬರ್ ರೀತಿಯಲ್ಲಿ ಸಹಕಾರಿ ಟ್ಯಾಕ್ಸಿ ಸೇವೆಯೂ ಆರಂಭವಾಗಲಿದೆ. ಇದರಲ್ಲಿ ದ್ವಿಚಕ್ರ ವಾಹನವನ್ನೂ ಅದರಲ್ಲಿ ಟ್ಯಾಕ್ಸಿಯಾಗಿ ರಿಜಿಷ್ಟ್ರೇಷನ್ ಮಾಡಿಕೊಳ್ಳಬಹುದು. ರಿಕ್ಷಾ, ಕಾರಿನಂತಹ ವಾಹನಗಳನ್ನು ಅದರಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದರ ಯಾವುದೇ ಲಾಭಗಳು ಮೂರನೇ ವ್ಯಕ್ತಿಯ ಪಾಲಾಗೋದಿಲ್ಲ. ಅದು ನೇರವಾಗಿ ಚಾಲಕನಿಗೆ ಸೇರಲಿದೆ. ಅದರೊಂದಿಗೆ ಸಹಕಾರಿ ವಿಮೆ ಕೂಡ ಶೀಘ್ರದಲ್ಲಿ ಬರಲಿದೆ ಎಂದು ಸಂಸತ್ತಿನಲ್ಲಿ ಗೃಹ ಸಚಿವರು ತಿಳಿಸಿದ್ದಾರೆ.
ಸಹಕಾರಿ ಚೌಕಟ್ಟನ್ನು ಬಳಸಿಕೊಳ್ಳುವ ಮೂಲಕ, ಈ ಸಂಸ್ಥೆಯು ಭಾರತದಾದ್ಯಂತ ಚಾಲಕರಿಗೆ ಹೆಚ್ಚಿನ ಆರ್ಥಿಕ ಸ್ಥಿರತೆ ಖಚಿತಪಡಿಸಲಿದೆ. ಸಹಕಾರಿ ವಲಯವನ್ನು ವಿವಿಧ ಅಗತ್ಯ ಸೇವೆಗಳಾಗಿ ವಿಸ್ತರಿಸುವ ಸರ್ಕಾರದ ಬದ್ಧತೆಯನ್ನು ಅಮಿತ್ ಶಾ ಒತ್ತಿ ಹೇಳಿದರು. ಇದರಲ್ಲಿ ಪೆಟ್ರೋಲ್ ಪಂಪ್ಗಳು, ಅನಿಲ ವಿತರಣೆ, ಪಡಿತರ ಅಂಗಡಿಗಳು, ಔಷಧ ಅಂಗಡಿಗಳು, ಗೋದಾಮುಗಳು, ನೀರಿನ ನಿರ್ವಹಣೆ, ಬೀಜ ಉತ್ಪಾದನೆ ಮತ್ತು ಸಾವಯವ ಕೃಷಿಯೂ ಸೇರಿರುತ್ತವೆ.
Union Home Minister Amit Shah announced in Parliament that the government is set to introduce 'Sahkar Taxi', a cooperative-based ride-hailing service designed to benefit drivers directly. The initiative, modelled after app-based services like Ola and Uber, will allow cooperative societies to register two-wheelers, taxis, rickshaws, and four-wheelers without intermediaries taking a cut from drivers' earnings.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm