ಬ್ರೇಕಿಂಗ್ ನ್ಯೂಸ್
04-04-25 12:44 pm HK News Desk ದೇಶ - ವಿದೇಶ
ನವದೆಹಲಿ, ಎ.4 : ಹಗಲು - ರಾತ್ರಿಯೆನ್ನದೆ ಸುದೀರ್ಘ ಚರ್ಚೆ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧ ನಡುವೆಯೇ ಸಂಸತ್ತಿನ ಎರಡೂ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ರಾಜ್ಯಸಭೆಯಲ್ಲಿ ಬುಧವಾರ ಮಧ್ಯಾಹ್ನದಿಂದ ಶುರುವಾದ ಚರ್ಚೆ ಮಧ್ಯರಾತ್ರಿ ಕಳೆದೂ ಮುಂದುವರಿದಿತ್ತು. ಕೊನೆಗೆ, ಮಸೂದೆಯ ಪರವಾಗಿ 128 ಮತಗಳು ಮತ್ತು ವಿರೋಧವಾಗಿ 95 ಮತಗಳು ಚಲಾವಣೆಗೊಂಡು ಕಾನೂನಿಗೆ ಸಂಸತ್ತಿನ ಮನ್ನಣೆ ಸಿಕ್ಕಿತು.
ವಕ್ಫ್ ಮಂಡಳಿಗೆ ತಿದ್ದುಪಡಿ ತರಲು ಕೋರುವ ಮಸೂದೆಯು ಮುಸಲ್ಮಾನ ಸಮುದಾಯಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಬದಲಿಗೆ ಅವರಿಗೆ ಇನ್ನಷ್ಟು ಹೆಚ್ಚಿನ ಪ್ರಯೋಜನ ಮತ್ತು ಭದ್ರತೆಯನ್ನು ನೀಡುತ್ತದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತಿಗೆ ಹೆಚ್ಚಿನ ಸಂಸದರು ತಲೆದೂಗಿದ್ದಾರೆ.
ವಕ್ಫ್ ಮಂಡಳಿ ಮುಂದೆಯೂ ಹಾಗೆಯೇ ಇರುತ್ತದೆ. ವಕ್ಫ್ ಮಂಡಳಿಯು ಶಾಸನಬದ್ಧ ಸಂಸ್ಥೆಯಾಗಿದ್ದು, ಮುಸ್ಲಿಮರನ್ನು ಮಾತ್ರ ಶಾಸನಬದ್ಧ ಸಂಸ್ಥೆಯಲ್ಲಿ ಏಕೆ ಸೇರಿಸಬೇಕು. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿವಾದವಿದ್ದರೆ, ಆ ವಿವಾದವನ್ನು ಹೇಗೆ ಪರಿಹರಿಸಲಾಗುತ್ತದೆ. ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರೊಂದಿಗೆ ಇರಬಹುದಾದ ವಿವಾದಗಳನ್ನೂ ಪರಿಹರಿಸಬೇಕಲ್ಲವೇ ಎಂದು ಸಚಿವ ಕಿರಣ್ ರಿಜಿಜು ಪ್ರಶ್ನಿಸಿದರು.
ಜಾತ್ಯತೀತ ಸಂಸ್ಥೆಯಾಗಿರಬೇಕು ; ರಿಜಿಜು
ಶಾಸನಬದ್ಧ ಸಂಸ್ಥೆಯು ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನು ಒಳಗೊಂಡ ಜಾತ್ಯತೀತ ಸಂಸ್ಥೆಯಾಗಿರಬೇಕು ಎಂದು ರಿಜಿಜು ವಾದಿಸಿದರು. ನಂತರ ಮಸೂದೆಯನ್ನು ರಾಜ್ಯಸಭೆಯಲ್ಲಿ ಷರತ್ತು-ಅನುಬಂಧದ ಆಧಾರದ ಮೇಲೆ ಮತಕ್ಕೆ ಹಾಕಲಾಯಿತು. ರಾಜ್ಯಸಭೆಯಲ್ಲಿ ಬಿಜೆಪಿಗೆ ಸದಸ್ಯ ಬಲ ಕಡಿಮೆಯಿದ್ದರೂ, ಮಿತ್ರಪಕ್ಷಗಳ ನೆರವಿನಿಂದ ಮಸೂದೆಗೆ ಜಯ ಸಿಕ್ಕಿತು. ಎ.2ರಂದು ಲೋಕಸಭೆಯಲ್ಲಿ ಮಸೂದೆ ಪರವಾಗಿ 288 ಸದಸ್ಯರು ಮತ್ತು 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದರು.
ಒಂದ್ವೇಳೆ, ರಾಜ್ಯಸಭೆಯಲ್ಲಿ ಈ ಮಸೂದೆ ತಿರಸ್ಕೃತಗೊಂಡಿದ್ದರೆ, ಇದನ್ನು ಮತ್ತೆ ಲೋಕಸಭೆಯಲ್ಲಿ ಮಂಡಿಸಿ ಪುನಃ ರಾಜ್ಯಸಭೆ ಅನುಮೋದನೆಗೆ ಒಯ್ಯಬೇಕಿತ್ತು. ಅದಕ್ಕೆ ಮತ್ತಷ್ಟು ದಿನಗಳು ಬೇಕಾಗುತ್ತಿದ್ದವು. ಈಗ ಇದೇ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಸಂಸತ್ತಿನ ಎರಡೂ ಸದನಗಳ ಅಂಗೀಕಾರ ಸಿಕ್ಕಿರುವುದರಿಂದ ಮುಂದೆ ರಾಷ್ಟ್ರಪತಿಗಳ ಸಹಿಗೆ ಕಳುಹಿಸಲಾಗುತ್ತದೆ. ಸಹಿ ಬಿದ್ದ ಕೂಡಲೇ ಅದು ಉಮೀದ್ ಎಂಬ ಹೆಸರಿನಲ್ಲಿ ಕಾನೂನಾಗಿ ಜಾರಿಗೆ ಬರಲಿದೆ.
The Budget session of Parliament will convene on Friday (April 4, 2025) after two days of hectic debate in Lok Sabha and Rajya Sabha for the passage of Waqf (Amendment) Bill 2025.
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am