ಬ್ರೇಕಿಂಗ್ ನ್ಯೂಸ್
09-04-25 04:07 pm HK News Desk ದೇಶ - ವಿದೇಶ
ಮುಂಬೈ, ಎ.9 : 2008ರ 26-11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಅಮೆರಿಕದಲ್ಲಿ ಅಡಗಿರುವ ತಹಾವ್ವುರ್ ರಾಣಾನನ್ನು ವಶಕ್ಕೆ ಪಡೆಯಲು ಎನ್ಐಎ ಅಧಿಕಾರಿಗಳು ಅಮೆರಿಕ ತಲುಪಿದ್ದಾರೆ. ತಿಂಗಳ ಹಿಂದೆ ಅಮೆರಿಕಕ್ಕೆ ಪ್ರಧಾನಿ ಮೋದಿ ಹೋಗಿದ್ದ ಸಂದರ್ಭದಲ್ಲಿ ರಾಣಾನನ್ನು ಗಡೀಪಾರು ಮಾಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ಜನವರಿ 21ರಂದು ಯುಎಸ್ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ರಾಣಾ ತನ್ನನ್ನು ಗಡೀಪಾರು ಮಾಡದಂತೆ ತಡೆ ನೀಡಲು ಮನವಿ ಮಾಡಿದ್ದ. ಆದರೆ ಕೋರ್ಟ್ ಆತನ ಮನವಿಯನ್ನು ನಿರಾಕರಿಸಿ ಅರ್ಜಿ ವಜಾಗೊಳಿಸಿತ್ತು. ಎನ್ಐಎ ಐಜಿಪಿ ಆಶಿಷ್ ಬಾತ್ರಾ ನೇತೃತ್ವದ ಮೂವರು ಅಧಿಕಾರಿಗಳ ತಂಡ ಅಮೆರಿಕ ತಲುಪಿದ್ದು, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ನನ್ನು ಇನ್ನೆರಡು ದಿನದಲ್ಲಿ ವಶಕ್ಕೆ ಪಡೆಯಲಿದ್ದಾರೆ. ಅಮೆರಿಕ ನ್ಯಾಯಾಲಯದಿಂದ ಸರೆಂಡರ್ ವಾರೆಂಟ್ ಪಡೆದ ಬಳಿಕ ಭಾನುವಾರ ಹೊತ್ತಿಗೆ ಅಧಿಕಾರಿಗಳು ಭಾರತಕ್ಕೆ ಹಿಂತಿರುಗಲಿದ್ದಾರೆ ಎನ್ನಲಾಗುತ್ತಿದೆ.
ರಾಣಾನನ್ನು ನೇರವಾಗಿ ದೆಹಲಿಗೆ ಕರೆತಂದ ಬಳಿಕ 2008ರ ಮುಂಬೈ ದಾಳಿಯ ಸಂಚಿನ ಬಗ್ಗೆ ಎನ್ಐಎ ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ಮಾಡಲಿದ್ದಾರೆ. ಅಲ್ಲದೆ, ಆತನನ್ನು ಇರಿಸಿಕೊಳ್ಳಲು ತಿಹಾರ್ ಜೈಲಿನಲ್ಲಿ ವಿಶೇಷ ಸೆಲ್ ಮಾಡಲಾಗಿದ್ದು, ಅದಕ್ಕೆ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಸೆಲ್ ಒಳಗಡೆಯೇ ಬಾತ್ ರೂಮ್ ಸೌಲಭ್ಯ ಮತ್ತು ಸಿಸಿಟಿವಿಯೂ ಇರಲಿದ್ದು, 24 ಗಂಟೆ ಪ್ರತ್ಯೇಕ ಕಾವಲಿಗೆ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಮುಬೈ ದಾಳಿಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ 166 ಮಂದಿ ಮಡಿದಿದ್ದರು. ಭಾರತದ ವಾಣಿಜ್ಯ ರಾಜಧಾನಿಗೆ ನೇರವಾಗಿ ಹೊಡೆತ ಬಿದ್ದ ಘಟನೆಯಾಗಿತ್ತು.
ತಹಾವುರ್ ರಾಣಾ 64 ವಯಸ್ಸಿನ ವ್ಯಕ್ತಿಯಾಗಿದ್ದು, ಮೂಲತಃ ಪಾಕಿಸ್ತಾನ ಪ್ರಜೆ. ಸದ್ಯ ಆತನನ್ನು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಮೆಟ್ರೋಪಾಲಿಟನ್ ಡಿಟೆನ್ಶನ್ ಸೆಂಟರ್ ನಲ್ಲಿ ಇರಿಸಲಾಗಿದೆ. ರಾಣಾ, ಪಾಕಿಸ್ತಾನಿ- ಅಮೆರಿಕನ್ ಲಷ್ಕರ್ ಇ- ತೈಬಾ ಉಗ್ರ ಡೇವಿಡ್ ಕೋಲ್ಮನ್ ಸಹಚರನಾಗಿದ್ದು, ಮುಂಬೈ ದಾಳಿಯನ್ನು ಇಬ್ಬರು ಸೇರಿ ಸಂಚು ನಡೆಸಿದ್ದರು. ಕಳೆದ ಜನವರಿಯಲ್ಲಿ ಅಮೆರಿಕದಲ್ಲಿ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಉದ್ದೇಶದಿಂದ ಅವರನ್ನು ವಶಕ್ಕೆ ಪಡೆದು ನಿಗಾ ಕೇಂದ್ರಕ್ಕೆ ಹಾಕಲಾಗಿತ್ತು. ಅದೇ ಸಂದರ್ಭದಲ್ಲಿ ಭಾರತದ ಗೃಹ ಸಚಿವಾಲಯ ಮತ್ತು ಎನ್ಐಎ ಅಧಿಕಾರಿಗಳು ರಾಣಾನನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿಕೆ ಇಟ್ಟಿದ್ದರು.
Tahawwur Rana, an accused in the 2008 Mumbai terror attacks, is being brought to India in a special plane after he exhausted his legal options in the US, sources have said. The plane would need refuelling and is expected to touch down tonight or early tomorrow.
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am