ಬ್ರೇಕಿಂಗ್ ನ್ಯೂಸ್
25-04-25 06:37 pm HK News Desk ದೇಶ - ವಿದೇಶ
ಕುಮಟಾ, ಏ 25: ತಮಿಳುನಾಡಿನ ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿನಿಯರು ಗೋಕರ್ಣದ ಜಟಾಯುತೀರ್ಥ ಗುಡ್ಡದ ಬಳಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್(23) ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿಯರು.
ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ 23 ವಿದ್ಯಾರ್ಥಿನಿಯರು ಚೆನ್ನೈನ ವೆಟ್ರಿ ಟೂರ್ಸ್ & ಟ್ರಾವೆಲ್ಸ್ ಮೂಲಕ ದಾಂಡೇಲಿ, ಗೋಕರ್ಣ ಮತ್ತು ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಗುರುವಾರ ದಾಂಡೇಲಿಯಿಂದ ತೆರಳಿ ಅಂಕೋಲಾದ ವಿಭೂತಿ ಫಾಲ್ಸ್ ನೋಡಿದ್ದರು. ನಂತರ ಸಂಜೆ ಗೋಕರ್ಣ ತಲುಪಿದ್ದರು. ಅಲ್ಲಿನ ಟೂರ್ ಗೈಡ್ ಗಾಂಧಿ ಸಿವಕುಮಾರ್ ಸೂರ್ಯಾಸ್ತ ನೋಡಲು ಗುರುವಾರ ಕುಡ್ಲೆ ಬೀಚ್ ಬಳಿಯ ಜಟಾಯುತೀರ್ಥ ಸಮುದ್ರ ತೀರಕ್ಕೆ ವಿದ್ಯಾರ್ಥಿನಿಯರನ್ನು ಕರೆದೊಯ್ದಿದ್ದರು. ಸಂಜೆ 6:20ರ ಸುಮಾರಿಗೆ ಇಬ್ಬರು ವಿದ್ಯಾರ್ಥಿನಿಯರು ಭಾರಿ ಅಲೆಗಳಿಗೆ ಸಿಕ್ಕು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸ್ಥಳೀಯರಾದ ಮಣಿರಾಜು ರಕ್ಷಣೆಗೆ ಧಾವಿಸಿದರೂ, ಅವರೂ ಅಪಾಯಕ್ಕೆ ಸಿಲುಕಿದ್ದರು. ನಂತರ ಅಡ್ವೆಂಚರ್ ಬೋಟ್ ಮೂಲಕ ಇಬ್ಬರು ವಿದ್ಯಾರ್ಥಿನಿಯರನ್ನು ಮತ್ತು ಮಣಿರಾಜು ಅವರನ್ನು ದಡಕ್ಕೆ ತರಲಾಯಿತು. ಆದರೂ, ವಿದ್ಯಾರ್ಥಿನಿಯರಾದ ಕನ್ನಿಮೋಳಿ ಮತ್ತು ಹಿಂದುಜಾ ಪ್ರಾಣ ಕಳೆದುಕೊಂಡಿದ್ದಾರೆ. ಮಣಿರಾಜು ಆಪಾಯದಿಂದ ಪಾರಾಗಿದ್ದಾರೆ.
ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯ ಇಲ್ಲದಿರುವುದರಿಂದ, ಮೃತದೇಹಗಳನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವಿದ್ಯಾರ್ಥಿನಿಯರ ಸಾವಿಗೆ ಟೂರ್ ಗೈಡ್ ಮತ್ತು ಟೂರ್ ಆಪರೇಟರ್ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Gokarna, Karnataka – In a heartbreaking incident, two MBBS students from Tiruchi lost their lives while swimming at the popular Gokarna beach. The deceased have been identified as Kinnimoli Eshwaran and Hinduja Natranjan, both pursuing their medical degrees at a local college.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm