ಬ್ರೇಕಿಂಗ್ ನ್ಯೂಸ್
28-04-25 06:52 pm HK News Desk ದೇಶ - ವಿದೇಶ
ನವದೆಹಲಿ, ಎ.28 : 35 ವರ್ಷಗಳ ಹಿಂದೆ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಮೂಲತಃ ಪಾಕಿಸ್ತಾನಿ ಪ್ರಜೆ, ಹಿಂದು ಮಹಿಳೆ ಶಾರದಾ ಬಾಯಿಗೆ ತಕ್ಷಣವೇ ದೇಶ ಬಿಟ್ಟು ಹೋಗುವಂತೆ ಒಡಿಶಾ ಪೊಲೀಸರು ಸೂಚಿಸಿದ್ದು ಆಕೆ ಕಂಗಾಲಾಗಿದ್ದಾರೆ. ಶಾರದಾ ಬಾಯಿ ವೀಸಾವನ್ನು ರದ್ದುಗೊಳಿಸಿದ್ದು ಅವರನ್ನು ಪಾಕಿಸ್ತಾನಕ್ಕೆ ಮರಳಲು ಸೂಚಿಸಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ ಪಾಕ್ ಪ್ರಜೆಗಳನ್ನು ದೇಶ ಬಿಟ್ಟು ಹೋಗಲು ಸೂಚಿಸಿದ್ದು ಅದರಂತೆ ಅಧಿಕಾರಿಗಳು ವೀಸಾ ರದ್ದುಗೊಂಡ ನಿವಾಸಿಗಳನ್ನು ಪತ್ತೆ. ಮಾಡುತ್ತಿದ್ದಾರೆ. ಒಡಿಶಾ ರಾಜ್ಯದ ಬೋಲಂಗೀರ್ನಲ್ಲಿ ಹಿಂದೂ ಕುಟುಂಬದ ಮಹೇಶ್ ಕುಕ್ರೇಜಾ ಎಂಬವರನ್ನು ಶಾರದಾ ಬಾಯಿ ವಿವಾಹವಾಗಿದ್ದರು. ದಂಪತಿಗೆ ಮಗ ಮತ್ತು ಮಗಳು ಇದ್ದಾರೆ. ಮತದಾರರ ಗುರುತಿನ ಚೀಟಿ ಸೇರಿದಂತೆ ಎಲ್ಲ ಪ್ರಮುಖ ದಾಖಲೆಗಳನ್ನು ಹೊಂದಿದ್ದರೂ, ಅವರಿಗೆ ಭಾರತೀಯ ಪೌರತ್ವ ನೀಡಿಲ್ಲ.
ಸರ್ಕಾರ ತನ್ನನ್ನು ತನ್ನ ಕುಟುಂಬದಿಂದ ಬೇರ್ಪಡಿಸಬಾರದು. ಮೂರು ದಶಕಗಳಿಗೂ ಹೆಚ್ಚು ಕಾಲ ತಾನು ಭಾರತದಲ್ಲಿ ವಾಸಿಸುತ್ತಿದ್ದು, ಈಗಲೂ ಇರಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ. ನನ್ನ ಪಾಸ್ಪೋರ್ಟ್ ತುಂಬಾ ಹಳೆಯದು. ದಯವಿಟ್ಟು ನನಗೆ ಇಲ್ಲಿ ವಾಸಿಸಲು ಅವಕಾಶ ನೀಡಿ ಎಂದು ಸರ್ಕಾರ ಮತ್ತು ನಿಮ್ಮೆಲ್ಲರನ್ನು ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನನಗೆ ಇಬ್ಬರು ಮಕ್ಕಳು, ಮೊಮ್ಮಕ್ಕಳಿದ್ದು ನಾನು ಭಾರತೀಯಳಾಗಿರಲು ಬಯಸುತ್ತೇನೆ ಎಂದಿದ್ದಾರೆ.
Sarada Bai, a Pakistani national, who has been living in India for over 35 years, has been asked by the Odisha police to leave India immediately. The authorities confirmed that the visa of Sarada Bai has been cancelled and she has been instructed to return to Pakistan without delay. The police have warned that if she fails to comply with the expulsion order, legal action will be taken against her.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am