ಬ್ರೇಕಿಂಗ್ ನ್ಯೂಸ್
05-05-25 11:10 pm HK News Desk ದೇಶ - ವಿದೇಶ
ನವದೆಹಲಿ, ಮೇ 5 : ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ಸನ್ನಿವೇಶ ಎದುರಾಗಿದೆ. ಎರಡೂ ದೇಶಗಳು ಯುದ್ಧೋಪಕರಣಗಳ ತಾಲೀಮು ನಡೆಸಿದ್ದು, ಇದರ ನಡುವಲ್ಲೇ ಮೇ 7ರಂದು ಭಾರತ ದೇಶಾದ್ಯಂತ ಸೇನೆ ಅಣಕು ಕಾರ್ಯಾಚರಣೆ ನಡೆಸುವುದಕ್ಕೆ ಮುಂದಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ರೆಡಿ ಆಗಿರುವಂತೆ ಸೂಚನೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದ್ದು, ನಾಗರಿಕರ ರಕ್ಷಣೆ ವಿಚಾರದಲ್ಲಿ ಮೇ 7ರಂದು ದೇಶಾದ್ಯಂತ ಅಣಕು ಪ್ರದರ್ಶನ ಮಾಡಲಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿ ಸಂದರ್ಭದಲ್ಲಿ ಆಗಬಲ್ಲ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಎಲ್ಲ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯದ ಅಣಕು ಕವಾಯತು ನಡೆಯಲಿದೆ.

ಪ್ರತಿಕೂಲ ದಾಳಿ ಸಂದರ್ಭದಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವುದಕ್ಕಾಗಿ ಮೇ 7ರಂದು ರಕ್ಷಣಾ ಅಣಕು ಕಸರತ್ತುಗಳನ್ನು ನಡೆಸುವಂತೆ ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶನ ನೀಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕಸರತ್ತುಗಳು ನಿರ್ಣಾಯಕ ಸನ್ನದ್ಧತಾ ಕ್ರಮಗಳ ಮೇಲೆ ಕೇಂದ್ರೀಕೃತ ಆಗಿರಲಿವೆ. ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆ ಮತ್ತು ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರಿಗೆ ಅಗತ್ಯ ನಾಗರಿಕ ರಕ್ಷಣಾ ತಂತ್ರಗಳಲ್ಲಿ ತರಬೇತಿಯೂ ಇರಲಿವೆ. ವೈಮಾನಿಕ ದಾಳಿಗಳು ಅಥವಾ ಇತರ ಪ್ರತಿಕೂಲ ಘಟನೆಗಳ ಸಂದರ್ಭಗಳಲ್ಲಿ ನಾಗರಿಕರು ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆಂದು ಅವರನ್ನು ಸಜ್ಜುಗೊಳಿಸುವುದು ಇದರ ಗುರಿಯಾಗಿರುತ್ತದೆ.
The Union Home Ministry has asked several states to conduct mock drills on May 7. The measures to be taken during the drill include operationalisation of air raid warning sirens and training of civilians on civil defence aspects to protect themselves in the event of a "hostile… pic.twitter.com/TTkbBEfT46
— Press Trust of India (@PTI_News) May 5, 2025
The Centre has asked several states to conduct security mock drills on Wednesday, May 7, for "effective civil defence in the event of a hostile attack" amid tensions between India and Pakistan following the Pahalgam terror attack on April 22.
08-04-26 02:09 pm
HK News Staffer
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಹೈಕಮಾಂಡ್...
06-04-26 08:51 pm
08-04-26 02:39 pm
HK News Staffer
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
Pakistan News, Fuel Crisis: ಇಂಧನ ಬಿಕ್ಕಟ್ಟು ;...
07-04-26 08:01 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 05:53 pm
HK News Staffer
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm
Arif Murder Case, Mangalore: ಟ್ಯಾಬ್ಲೆಟ್ ಆರೀಫ್...
07-04-26 06:18 pm