ಬ್ರೇಕಿಂಗ್ ನ್ಯೂಸ್
12-05-25 10:21 pm HK News Desk ದೇಶ - ವಿದೇಶ
ನವದೆಹಲಿ, ಮೇ 12: ಎಲ್ಲಿ ಭಯೋತ್ಪಾದನೆ ಇದೆಯೋ ಅಲ್ಲಿ ಮಾತುಕತೆ ಮತ್ತು ವ್ಯವಹಾರ ಸಂಬಂಧ ಇರಲು ಸಾಧ್ಯವಿಲ್ಲ. ನೀರಿನ ಜೊತೆ ಜೊತೆಗೆ ರಕ್ತ ಹರಿಯುವುದಿಲ್ಲ.. ಪಾಕಿಸ್ತಾನದ ಜೊತೆಗೆ ಮಾತುಕತೆ ಆಗುವುದಿದ್ದರೆ ಅದು ಭಯೋತ್ಪಾದನೆ ಮತ್ತು ಪಿಓಕೆ ವಿಚಾರದಲ್ಲಿ ಮಾತ್ರ ಎಂದು ಜಗತ್ತಿಗೆ ಸಾರಿ ಹೇಳುತ್ತೇನೆ.. ಹೀಗೆಂದು ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಕಟು ಮಾತಿನ ಸಂದೇಶ ನೀಡಿದ್ದಾರೆ.
ಪಾಕಿಸ್ತಾನ ವಿರುದ್ಧ ಸೇನಾ ಸಂಘರ್ಷ, ಕದನ ವಿರಾಮದ ಪ್ರಹಸನ, ಸೇನಾಧಿಕಾರಿ ಮಟ್ಟದ ಮಾತುಕತೆ ಬಳಿಕ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನ್ನಾಡಿದ್ದಾರೆ. ಇದು ಯುದ್ಧಕ್ಕೆ ತಕ್ಕುದಾದ ಯುಗವೂ ಅಲ್ಲ ; ಜೊತೆಗೆ ಭಯೋತ್ಪಾದನೆಯ ಯುಗವೂ ಅಲ್ಲ. ಆದರೆ ಭಯೋತ್ಪಾದನೆ ಪೋಷಿಸುತ್ತಿರುವ ಪಾಕಿಸ್ತಾನವು ಒಂದು ದಿನ ಅದ ವಿಷದ ಕೂಪಕ್ಕೆ ಬಿದ್ದು ಅಂತ್ಯವಾಗಲಿದೆ. ದೇಶವನ್ನು ಉಗ್ರರಿಂದ ಮುಕ್ತಗೊಳಿಸಿ ಶಾಂತಿಯ ಬೀಜ ಬಿತ್ತದಿದ್ದರೆ ಇಡೀ ದೇಶ ಅದೇ ವಿಷದ ಜ್ವಾಲೆಯಲ್ಲಿ ಸುಟ್ಟು ಹೋಗಲಿದೆ.
ಪಾಕಿಸ್ತಾನ ಪರಮಾಣು ಅಸ್ತ್ರದ ಹೆಸರಲ್ಲಿ ಬ್ಲಾಕ್ಮೇಲ್ ನಡೆಸುವುದನ್ನು ಸಹಿಸುವುದಿಲ್ಲ. ಭಯೋತ್ಪಾದನೆಗೆ ಎದುರಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಲಾಗಿದೆ. ಭಯೋತ್ಪಾದನೆ ವಿರುದ್ಧ ನಾವು ನಮ್ಮ ಸ್ವಂತ ಬಲದಿಂದಲೇ ಪ್ರತಿಕ್ರಿಯೆ ನೀಡಿದ್ದೇವೆ. ಪರಮಾಣು ಶಸ್ತ್ರ ಇದೆಯೆಂದು ಬ್ಲಾಕ್ಮೇಲ್ ನಡೆಸೋದನ್ನು ಭಾರತವು ಇನ್ನೆಂದೂ ಸಹಿಸಲ್ಲ. ಯಾವ ಅಸ್ತ್ರ ಇದೆಯೆಂದು ಬೀಗಿತ್ತೋ ಆ ಅಸ್ತ್ರದ ಶಕ್ತಿಯನ್ನೇ ಉಡುಗಿಸಿದ್ದೇವೆ. ಉಗ್ರವಾದ ಮತ್ತು ಅದರ ಪ್ರಾಯೋಜಕತ್ವವನ್ನು ಪ್ರತ್ಯೇಕವಾಗಿ ನೋಡಲಾಗದು ಎಂದು ಮೋದಿ ಗುಡುಗಿದ್ದಾರೆ.
ಪಾಕಿಸ್ತಾನವು ಉಗ್ರವಾದ ಪರವಾಗಿದೆ ಎನ್ನುವುದನ್ನು ತಾನಾಗಿಯೇ ಜಗತ್ತಿಗೆ ತೋರಿಸಿಕೊಟ್ಟಿದೆ. ಭಾರತವು ಉಗ್ರರ ನೆಲೆಗಳಿಗೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಸೇನೆ ಮತ್ತು ಜನವಸತಿ ಪ್ರದೇಶಕ್ಕೆ ದಾಳಿ ನಡೆಸಿತ್ತು. ಭಾರತದ ಶಾಲೆ, ಗುರುದ್ವಾರ, ದೇವಸ್ಥಾನ, ನಾಗರಿಕರು, ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಆದರೆ ಪಾಕಿಸ್ತಾನದ ಡ್ರೋಣ್, ಕ್ಷಿಪಣಿ ದಾಳಿಯು ಭಾರತದ ವಾಯು ರಕ್ಷಣಾ ವ್ಯವಸ್ಥೆಯ ಮುಂದೆ ನೆಲ ಕಚ್ಚಿದ್ದನ್ನು ಇಡೀ ಜಗತ್ತು ನೋಡಿದೆ. ಪಾಕಿ ಸೈನಿಕರು ನಮ್ಮ ಗಡಿಭಾಗದಲ್ಲಿ ದಾಳಿ ನಡೆಸುವುದಕ್ಕೆ ಮುಂದಾಗಿದ್ದರೆ, ನಾವು ಅವರ ಸೇನೆಯ ಜಂಘಾಬಲವನ್ನೇ ಉಡುಗಿಸಿದ್ದೇವೆ. ಅವರ ಏರ್ ಬೇಸ್ ಅನ್ನೇ ಪುಡಿಗಟ್ಟಿದ್ದು ನಮ್ಮ ಸೇನಾ ಶಕ್ತಿಯನ್ನು ಜಗತ್ತಿಗೆ ತೋರಿಸಿದಂತಾಗಿತ್ತು. ಇದು ಹೆಮ್ಮೆಯ ಕ್ಷಣ ಎಂದು ಮೋದಿ ಹೇಳಿದರು.
Prime Minister Narendra Modi on Monday asserted that India will not tolerate any “nuclear blackmail”, and said that operations against Pakistan have only been kept in abeyance and the future will depend on their behaviour. Speaking for the first time after Operation Sindoor was launched, the Prime Minister said, “Operation Sindoor is now India’s new policy against terrorism, a new line has been drawn.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm