ಬ್ರೇಕಿಂಗ್ ನ್ಯೂಸ್
14-05-25 07:33 pm HK News Desk ದೇಶ - ವಿದೇಶ
ನವದೆಹಲಿ, ಮೇ 14 : ಅಕಸ್ಮಾತ್ತಾಗಿ ಪಾಕಿಸ್ತಾನದ ವಶಕ್ಕೆ ಒಳಗಾಗಿದ್ದ ಗಡಿ ಭದ್ರತಾ ಪಡೆಯ ಯೋಧ ಕೊನೆಗೂ ಸುರಕ್ಷಿತವಾಗಿ ಮರಳಿ ಬಂದಿದ್ದಾರೆ. ಪಾಕಿಸ್ತಾನ ಸೇನೆಯು ಬುಧವಾರ ಬೆಳಗ್ಗೆ 10.30ಕ್ಕೆ ಅಟ್ಟಾರಿ ವಾಘಾ ಗಡಿಯ ಮೂಲಕ ಬಿಎಸ್ಎಫ್ ಕಾನ್ಸ್ಟೇಬಲ್ ಪೂರ್ಣಮ್ ಕುಮಾರ್ ಶಾ ಅವರನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಏಪ್ರಿಲ್ 23 ರಂದು ಆಕಸ್ಮಿಕವಾಗಿ ಪಾಕ್ ಗಡಿಯೊಳಗೆ ಪ್ರವೇಶಿಸಿದ ಶಾ ಅವರನ್ನು 20 ದಿನಗಳ ಕಾಲ ಪಾಕಿಸ್ತಾನಿ ಸೇನೆ ತನ್ನ ವಶದಲ್ಲಿರಿಸಿಕೊಂಡಿತ್ತು. ಯೋಧ ಪೂರ್ಣಮ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಮನೆಗೆ ತೆರಳುವ ಮೊದಲು ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಲಿದ್ದಾರೆ.

ಬಿಎಸ್ಎಫ್ ವಿಭಾಗದಲ್ಲಿ 182ನೇ ಬೆಟಾಲಿಯನ್ ಯೋಧರಾಗಿದ್ದ ಪೂರ್ಣಮ್ ಕುಮಾರ್ ಶಾ ಪಂಜಾಬ್ನ ಫಿರೋಜ್ಪುರ ಗಡಿಭಾಗದಲ್ಲಿ ಆಕಸ್ಮಿಕವಾಗಿ ಸ್ಥಳೀಯ ರೈತರೊಂದಿಗೆ ಪಾಕಿಸ್ತಾನ ಪ್ರವೇಶಿಸಿದ್ದರು. ಸೇನಾ ಸಮವಸ್ತ್ರ ಧರಿಸಿದ್ದ ಪೂರ್ಣಮ್ ಅವರು ವಿಶ್ರಾಂತಿ ಪಡೆಯಲೆಂದು ಸ್ಥಳೀಯ ರೈತರ ಜತೆ ಗಡಿಭಾಗದ ವ್ಯಾಪ್ತಿ ತಿಳಿಯದೆ ಪಾಕಿಸ್ತಾನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ, ಪಾಕಿಸ್ತಾನದ ರೇಂಜರ್ಸ್ ಯೋಧನನ್ನು ವಶಕ್ಕೆ ಪಡೆದಿದ್ದರು. ಯೋಧನ ಬಿಡುಗಡೆಗೆ ಉನ್ನತ ಮಟ್ಟದ ಮಾತುಕತೆ ನಡೆದಿತ್ತಾದರೂ, ಗಡಿಯಲ್ಲಿ ಯುದ್ಧ ಸನ್ನಿವೇಶ ಎದುರಾಗಿದ್ದರಿಂದ ಬಿಡುಗಡೆ ಆಗಿರಲಿಲ್ಲ.
ಉದ್ವಿಗ್ನ ಸ್ಥಿತಿಯ ನಡುವೆ ಯೋಧನ ಬಿಡುಗಡೆಗೆ ಪಾಕಿಸ್ತಾನ ನಿರಾಕರಿಸಿದರೂ, ಮಾತುಕತೆ ಮುಂದುವರಿದಿತ್ತು. ದೇಶದ ರಕ್ಷಣೆಗೆ ಸೇವೆ ಸಲ್ಲಿಸುತ್ತಿರುವ ನಮ್ಮ ಮಗನನ್ನು ಸರಕಾರ ಸುರಕ್ಷಿತವಾಗಿ ಬಿಡುಗಡೆ ಮಾಡಿಸುವ ವಿಶ್ವಾಸವಿದೆ ಎಂದು ಯೋಧನ ತಂದೆ ಭೋಲಾನಾಥ್ ತಿಳಿಸಿದ್ದರು.
A Border Security Force (BSF) Constable, who had inadvertently crossed into Pakistani territory along the Punjab border on April 23, was repatriated on Wednesday by the Pakistan Rangers. The exchange took place at the Attari-Wagah border at around 10:30 a.m., according to an official statement issued by the BSF.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm