ಬ್ರೇಕಿಂಗ್ ನ್ಯೂಸ್
09-06-25 05:16 pm HK News Desk ದೇಶ - ವಿದೇಶ
ಕೇರಳ, ಜೂ 09 : ಕೊಲಂಬೊದಿಂದ ಮುಂಬಯಿಗೆ ರಾಸಾಯನಿಕ ವಸ್ತುಗಳನ್ನು ಸಾಗಿಸುತ್ತಿದ್ದ ಹಡಗಿನಲ್ಲಿ ಸ್ಫೋಟ ಸಂಭವಿಸಿದೆ. ಕೇರಳ ಕರಾವಳಿಯ ಕೋಝಿಕೋಡ್ ಮತ್ತು ಕಣ್ಣೂರಿನಿಂದ ಪಶ್ಚಿಮಕ್ಕೆ ಸುಮಾರು 120 ಕಿ.ಮೀ ದೂರದಲ್ಲಿ ಘಟನೆ ನಡೆದಿದೆ. ಸಿಂಗಾಪುರದ MV ವಾನ್ ಹೈ 503 ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಡಗು 650ಕ್ಕೂ ಹೆಚ್ಚು ಕಂಟೇನರ್‌ಗಳನ್ನು ಹೊತ್ತೊಯ್ಯುತ್ತಿತ್ತು.
ಜೂನ್ 7 ರಂದು ಕೊಲಂಬೊದಿಂದ ಹೊರಟಿದ್ದ 270 ಮೀಟರ್ ಉದ್ದದ ಈ ಹಡಗು, ಜೂನ್ 10 ರಂದು ಮುಂಬಯಿಗೆ ತಲುಪುವ ನಿರೀಕ್ಷೆಯಿತ್ತು. ಕೇರಳ ಕರಾವಳಿಯಲ್ಲಿ ಸಾಗುತ್ತಿದ್ದಾಗ ಹಡಗಿನ ಒಳಭಾಗದಲ್ಲಿ ಸ್ಫೋಟ ಸಂಭವಿಸಿದೆ. ಸೋಮವಾರ ಬೆಳಗ್ಗೆ 10.30ಕ್ಕೆ ಘಟನೆ ನಡೆದಿದೆ. ಮಾಹಿತಿ ತಿಳಿದು ತಕ್ಷಣವೇ ಭಾರತೀಯ ನೌಕಾಪಡೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.
ಜೂನ್ 9 ರಂದು ಸುಮಾರು 10.30ಕ್ಕೆ MV ವಾನ್ ಹೈ 503 ಹಡಗಿನಲ್ಲಿ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಬಂದಿದೆ. ಈ ಹಡಗು ಸಿಂಗಾಪುರ ಧ್ವಜ ಹೊಂದಿದ್ದು, 270 ಮೀಟರ್ ಉದ್ದವಿದೆ. ಇದರ ಆಳ 12.5 ಮೀಟರ್. ಇದು ಕೊಲಂಬೊದಿಂದ ಹೊರಟಿತ್ತು. ಮಾಹಿತಿ ಲಭಿಸುತ್ತಿದ್ದಂತೆ ಭಾರತೀಯ ನೌಕಾಪಡೆಯು ತಕ್ಷಣವೇ INS ಸೂರತ್ ಹಡಗನ್ನು ರಕ್ಷಣಾ ಕಾರ್ಯಕ್ಕೆ ಕಳುಹಿಸಿತು. ಈ ಹಡಗು ಮೊದಲು ಕೊಚ್ಚಿಗೆ ಹೋಗಬೇಕಿತ್ತು. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೂಡಲೇ ಸ್ಥಳಕ್ಕೆ ಧಾವಿಸಿತು. ಪಶ್ಚಿಮ ನೌಕಾ ದಳವು ಬೆಳಿಗ್ಗೆ 11 ಗಂಟೆಗೆ ಹಡಗನ್ನು ಬೇರೆಡೆಗೆ ತಿರುಗಿಸಿತುʼ ಎಂದು ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.
ಸದ್ಯದ ಮಾಹಿತಿಯ ಪ್ರಕಾರ, ಹಡಗಿನಲ್ಲಿದ್ದ 22 ಸಿಬ್ಬಂದಿಯಲ್ಲಿ 18 ಜನರನ್ನು ರಕ್ಷಿಸಲಾಗಿದೆ. ಕೆಲವು ಬೆಂಕಿಯಿಂದ ರಕ್ಷಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದಾರೆ. ಕೋಸ್ಟ್ ಗಾರ್ಡ್ (CG) ಮತ್ತು ಭಾರತೀಯ ನೌಕಾಪಡೆಯು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಹಡಗಿನಲ್ಲಿ ಬೆಂಕಿ ಉರಿಯುತ್ತಿದ್ದು, ಅದು ತೇಲುತ್ತಿದೆ. ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನೆರವು ನೀಡಲು ಕೊಚ್ಚಿಯ INS ಗರುಡ ನೌಕಾ ವಾಯುನೆಲೆಯಿಂದ ನೌಕಾಪಡೆಯ ಡೋರ್ನಿಯರ್ ವಿಮಾನವನ್ನು ಕಳುಹಿಸಲು ಯೋಜಿಸಲಾಗಿದೆ.
ರಾಸಾಯನಿಕ ಹೊತ್ತೊಯ್ಯುತ್ತಿದ್ದ ಹಡಗು!
ಹಡಗಿನಲ್ಲಿ ನಾಲ್ಕು ವಿಧದ ರಾಸಾಯನಿಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂದು ವರದಿಯಾಗಿದೆ. ಪ್ರಬಲವಾದ ಗಾಳಿಗೆ ಮತ್ತು ಘರ್ಷಣೆಗೆ ಒಡ್ಡಿಕೊಂಡಾಗ ಹಡಗಿನಲ್ಲಿದ್ದ ರಾಸಾಯನಿಕಗಳು ಹೊತ್ತಿಕೊಳ್ಳುವ ಆರಂಭವಾಗಿವೆ. ಜತೆಗೆ ಹಡಗಿನಲ್ಲಿ ವಿಷಕಾರಿ ವಸ್ತುಗಳು ಸಹ ಇವೆ ಎಂದು ಹೇಳಲಾಗುತ್ತಿದೆ. ದುರಂತದಲ್ಲಿ 20 ಕಂಟೈನರ್‌ಗಳು ಸಮುದ್ರಕ್ಕೆ ಬಿದ್ದಿವೆ. ಬೆಂಕಿ ನಂದಿಸಲು ಐದು ಕೋಸ್ಟ್ ಗಾರ್ಡ್ ಹಡಗುಗಳು ಸ್ಥಳಕ್ಕೆ ತಲುಪಿವೆ. ಹಡಗಿನಲ್ಲಿ ಒಟ್ಟು 22 ಜನರಿದ್ದರು. 18 ಜನರನ್ನು ರಕ್ಷಿಸಲಾಗಿದೆ. ನಾಲ್ವರು ನಾಪತ್ತೆಯಾಗಿದ್ದಾರೆ. ಇಂಡೋನೇಷ್ಯಾ ಮತ್ತು ಮ್ಯಾನ್ಮಾರ್ ಪ್ರಜೆಗಳು ಸಹ ನಾಪತ್ತೆಯಾದವರಲ್ಲಿ ಸೇರಿದ್ದಾರೆ. ಕೆಲವರಿಗೆ ಸುಟ್ಟ ಗಾಯಗಳಾಗಿವೆ. ಐವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಕ್ಯಾಪ್ಟನ್ ಮತ್ತು ಇತರರು ಇನ್ನೂ ಹಡಗಿನಲ್ಲಿದ್ದಾರೆ.
ಬೆಂಕಿ ಕಾಣಿಸಿಕೊಂಡ ನಂತರ ಹಡಗಿನಲ್ಲಿ ಸ್ಫೋಟ ಸಂಭವಿಸಿದೆ. ಹಡಗಿನ ಸಿಬ್ಬಂದಿಗೆ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡುವಂತೆ ಎರ್ನಾಕುಲಂ ಮತ್ತು ಕೋಝಿಕೋಡ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಿಬ್ಬಂದಿಯನ್ನು ಕೇರಳ ಕರಾವಳಿಗೆ ಕರೆತರುಲಾಗುತ್ತಿದೆ.
An explosion was reported on board the Singapore-flagged container ship MV Wan Hai 503 off the coast of Kerala on Monday morning, a Defence PRO said. The underdeck blast was first reported at around 10.30 am by the Maritime Operations Centre in Mumbai to their counterparts in Kochi.
24-06-25 05:23 pm
Bangalore Correspondent
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm