ಬ್ರೇಕಿಂಗ್ ನ್ಯೂಸ್
28-07-25 11:07 pm HK News Desk ದೇಶ - ವಿದೇಶ
ಶ್ರೀನಗರ, ಜುಲೈ 28 : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾಗಿದ್ದ ಲಷ್ಕರ್ ಉಗ್ರನನ್ನು ಭಾರತೀಯ ಸೇನೆಯು ಆಪರೇಶನ್ ಮಹಾದೇವ್ ಹೆಸರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿದೆ.
ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ದಚಿಗಮ್ ಅರಣ್ಯದಲ್ಲಿ ಉಗ್ರರು ಅಡಗಿರುವ ಸುಳಿವು ಲಭಿಸಿತ್ತು. ಇದರಂತೆ, ಕಾಡಿಗೆ ನುಗ್ಗುವ ಕಾರ್ಯಾಚರಣೆಗೆ ಮುಂದಾದ ಸೇನೆಯು ಸೋಮವಾರ ಬೆಳಗ್ಗೆ ಮೂವರನ್ನು ಎನ್ಕೌಂಟರ್ ಮಾಡಿದೆ. ಅದರಲ್ಲಿ ಒಬ್ಬಾತ ಪಹಲ್ಗಾಮ್ ದಾಳಿಯ ರೂವಾರಿ ಎನ್ನಲಾದ ಸುಲೇಮಾನ್ ಅಲಿಯಾಸ್ ಹಾಶಿಮ್ ಮೂಸಾ ಎನ್ನುವುದನ್ನು ಗುರುತಿಸಲಾಗಿದೆ. ಈತ ಪಾಕಿಸ್ತಾನಿ ಪ್ರಜೆಯಾಗಿದ್ದು, ಲಷ್ಕರ್ ತೊಯ್ಬಾ ಸಂಘಟನೆಯ ಟಾಪ್ ಕಮಾಂಡರ್ ಆಗಿದ್ದ. ಈತನ ಇನ್ನಿಬ್ಬರು ಸಹಚರರಾದ ಯಾಸಿರ್ ಮತ್ತು ಅಬು ಹಮ್ಜಾ ಕೂಡ ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ.


ಪಹಲ್ಗಾಮ್ ದಾಳಿಗೂ ಹಿಂದೆ ಸ್ಯಾಟಲೈಟ್ ಫೋನ್ ಬಳಕೆಯಾಗಿದ್ದನ್ನು ಸೇನೆ ಪತ್ತೆ ಮಾಡಿತ್ತು. ಆಬಳಿಕ ಆ ರೀತಿಯ ಸ್ಯಾಟಲೈಟ್ ಫೋನ್ ಬಳಕೆ ಆಗಿರಲಿಲ್ಲ. ಆನಂತರ, ಇದೇ ಮೊದಲ ಬಾರಿಗೆ ಎರಡು ದಿನಗಳ ಹಿಂದೆ ಸ್ಯಾಟಲೈಟ್ ಸಿಗ್ನಲ್ ಸಿಕ್ಕಿತ್ತು. ಅದು ಜನವಸತಿ ಇಲ್ಲದ ದಚಿಗಮ್ ಅರಣ್ಯದಲ್ಲಿ ಇರುವುದನ್ನು ತೋರಿಸಿದ್ದರಿಂದ ಪಹಲ್ಗಾಮ್ ದಾಳಿ ನಡೆಸಿದ ಉಗ್ರರು ಅದೇ ಜಾಗದಲ್ಲಿ ಅಡಗಿರುವ ಸುಳಿವು ಲಭಿಸಿತ್ತು.
ಇದರ ಬೆನ್ನಲ್ಲೇ ಸಿಆರ್ ಪಿಎಫ್ ಮತ್ತು ಸೇನಾ ಯೋಧರು ಜಂಟಿ ಕಾರ್ಯಾಚರಣೆ ನಡೆಸಿದ್ದು, ನಸುಕಿನ ವೇಳೆಗೆ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ಅಡುಗೆ ಮಾಡಿದ್ದ ಕುರುಹುಗಳು ಪತ್ತೆಯಾಗಿವೆ. ಹೀಗಾಗಿ ಉಗ್ರರು ಕಾಡಿನ ಒಳಗಡೆ ಅವಿತುಕೊಂಡಿದ್ದರು ಎನ್ನಲಾಗುತ್ತಿದೆ. ಈ ಜಾಗದಲ್ಲಿ ಲಷ್ಕರ್ ಮತ್ತು ಮುಜಾಹಿದೀನ್ ಸಂಘಟನೆಯ ಏಳು ಉಗ್ರರು ಇದ್ದರು ಎನ್ನುವ ಮಾಹಿತಿ ಸ್ಥಳೀಯರಿಂದ ಲಭಿಸಿದ್ದು, ಸೇನಾ ಕಾರ್ಯಾಚರಣೆ ಮುಂದುವರಿದಿದೆ.
As Defence Minister Rajnath Singh began the Operation Sindoor debate in Parliament, security forces scored a massive win today by gunning down three Pakistani terrorists in an encounter near Srinagar, two of them involved in the Pahalgam attack in which 26 innocents were murdered in cold blood.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am