ಬ್ರೇಕಿಂಗ್ ನ್ಯೂಸ್
07-08-25 09:42 pm HK News Desk ದೇಶ - ವಿದೇಶ
ನಾಗಪುರ, ಆ.7 : ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದೆ. ವೈವಿಧ್ಯಗಳನ್ನು ಒಪ್ಪಿಕೊಂಡು ಜೀವಿಸುವುದು ಹೇಗೆಂದು ಜಗತ್ತು ಇನ್ನೂ ತಿಳಿದುಕೊಂಡಿಲ್ಲ. ಇದರಿಂದಾಗಿ ದೇಶ ದೇಶಗಳ ನಡುವೆ ಸಂಘರ್ಷ ಏರ್ಪಡುತ್ತಿದೆ. ಹಿಂದು ಧರ್ಮದಲ್ಲಿ ಹೇಳಿರುವ ಸ್ವೀಕಾರ ಮನೋಭಾವ ಮತ್ತು ಒಪ್ಪಿಕೊಳ್ಳುವ ಭಾವ ವಿಶ್ವ ಧರ್ಮವಾಗಿದ್ದು, ಇದನ್ನು ಅನುಸರಿಸಿದರೆ ಜಗತ್ತನ್ನು ರಕ್ಷಿಸುತ್ತದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗಪುರದಲ್ಲಿ ಧರ್ಮ ಜಾಗರಣ ನ್ಯಾಸ್ ಹೊಸ ಕಟ್ಟಡವನ್ನು ಉದ್ಘಾಟಿಸಿ ಭಾಗವತ್ ಮಾತನಾಡಿದರು. ಭಾರತೀಯರ ಪಾಲಿಗೆ ಸತ್ಯವೇ ಧರ್ಮ. ಹಿಂದು ಧರ್ಮ ನಮಗೆ ಎಲ್ಲವೂ ಒಂದು ಎನ್ನುವ ಭಾವ ಮತ್ತು ಎಲ್ಲವನ್ನೂ ಸ್ವೀಕರಿಸುವ ತತ್ವವನ್ನು ಕಲಿಸುತ್ತದೆ. ನಮ್ಮಲ್ಲಿ ಭೇದ ಇಲ್ಲ, ಎಲ್ಲ ರೀತಿಯ ವೈವಿಧ್ಯವನ್ನೂ ಒಪ್ಪಿಕೊಳ್ಳುವುದು ಹಿಂದು ಧರ್ಮ ಹೇಳುವ ಪಾಠ. ಇದು ವಿಶ್ವ ಧರ್ಮವಾಗಿದ್ದು, ಭಾರತೀಯರು ಹೆಚ್ಚು ಪಾಲಿಸಿರುವುದರಿಂದ ಹಿಂದುಗಳೆನಿಸಿಕೊಂಡಿದ್ದಾರೆ. ಇದನ್ನೇ ಹಿಂದುಗಳ ನಾವು ಧರ್ಮ ಎಂದು ಕರೆಯುತ್ತೇವೆ ಎಂದು ಭಾಗವತ್ ಹೇಳಿದರು.
ಹಿಂದುಗಳದ್ದು ಪ್ರಕೃತಿ ಧರ್ಮ. ಅದಕ್ಕೆ ದೇಶ, ಭಾಷೆಯ ಭೇದ ಇಲ್ಲ. ಇಡೀ ವಿಶ್ವವೇ ತನ್ನದು ಎಂದು ಈ ಸಂಸ್ಕೃತಿ ಹೇಳುತ್ತದೆ. ಎಲ್ಲ ವರ್ಗದವರನ್ನು ಒಳಗೊಂಡ ಮಾನವೀಯ ಧರ್ಮ ಇದಾಗಿದೆ. ಪ್ರತಿಯೊಬ್ಬನ ಹೃದಯವೂ ಈ ವಿಶ್ವ ಧರ್ಮದ ಪಾಠಗಳಿಂದ ಎಚ್ಚರಗೊಳ್ಳಬೇಕಿದೆ. ಇಲ್ಲಿ ದೈವತ್ವಕ್ಕಾಗಿ ಮಾತ್ರ ಧರ್ಮ ಇರುವುದಲ್ಲ, ಸಮಾಜದ ಸ್ವಾಸ್ಥ್ಯಕ್ಕಾಗಿ ಇರುವಂಥದ್ದು. ಭಾರತೀಯ ಇತಿಹಾಸದಲ್ಲಿ ಧರ್ಮಕ್ಕಾಗಿ ಅದೆಷ್ಟೋ ತ್ಯಾಗಗಳನ್ನು ಮಾಡಿದವರಿದ್ದಾರೆ. ಧರ್ಮಕ್ಕಾಗಿ ತಲೆಯನ್ನೇ ಕೊಡುತ್ತಾರೆ ವಿನಾ ಧರ್ಮ ಬಿಟ್ಟು ನಡೆಯುವುದಿಲ್ಲ. ನೀವೆಲ್ಲ ಛಾವಾ ಸಿನಿಮಾ ನೋಡಿರಬಹುದು. ಅಲ್ಲಿ ನಮ್ಮವರು ಅನುಸರಿಸಿದ್ದೂ ಇದೇ ಧರ್ಮವನ್ನು ಎಂದು ಭಾಗವತ್ ಹೇಳಿದರು.
ಹಿಂದಿಯಲ್ಲಿ ಬಂದಿದ್ದ ಛಾವಾ ಸಿನಿಮಾ ಮರಾಠ ರಾಜ ಛತ್ರಪತಿ ಸಂಭಾಜಿಯ ಕುರಿತಾಗಿದ್ದು, 1689ರಲ್ಲಿ ಮೊಘಲ್ ರಾಜ ಔರಂಗಜೇಬನಿಂದ ಕೊಲ್ಲಲ್ಪಡುವ ಸನ್ನಿವೇಶ ಒಳಗೊಂಡಿದೆ. ಇಂಥ ತ್ಯಾಗವನ್ನು ನಾವು ಭಾರತದಲ್ಲಿ ಸಾಮಾನ್ಯ ಜನರಿಂದಲೂ ನೋಡುತ್ತಿದ್ದೇವೆ. ಸತ್ಯಕ್ಕೆ ಚ್ಯುತಿ ಬಂದರೆ ತಲೆಯನ್ನೇ ಅರ್ಪಿಸಿಕೊಳ್ಳುತ್ತಾರೆ. ಯಾಕಂದ್ರೆ ನಮ್ಮ ಧರ್ಮ ನಿಂತಿರುವುದೇ ಸತ್ಯದ ಮೇಲೆ. ಸತ್ಯವೇ ಮೇಲು ಎನ್ನುವುದನ್ನು ಜಗತ್ತು ಕಂಡುಕೊಂಡರೆ ಸಂಘರ್ಷ ಇರಲಾರದು. ಸಾಮಾನ್ಯ ಜೀವನದಲ್ಲಿ ನಾವೆಲ್ಲ ವಿಭಿನ್ನವಾಗಿ ಕಂಡರೂ ನಾವೆಲ್ಲ ಒಂದೇ ಆಗಿದ್ದೇವೆ. ಹಿಂದು ಧರ್ಮವೂ ವಿಭಿನ್ನ ಆಚರಣೆ, ನಂಬಿಕೆಯನ್ನು ಹೊಂದಿದ್ದರೂ ಎಲ್ಲರ ಗುರಿ ಒಂದೇ ಆಗಿರುತ್ತದೆ ಎಂದೇ ಹೇಳುತ್ತದೆ. ಇದಕ್ಕಾಗಿ ಹಿಂದು ಧರ್ಮ ವಿಶ್ವಾಸಿಯಾದವನು ಯಾರು ಕೂಡ ಬೇರೆಯವರ ನಂಬಿಕೆ, ಆಚರಣೆಯನ್ನು ಬಲವಂತದಿಂದ ಬದಲಾಯಿಸಲು ಯತ್ನಿಸುವುದಿಲ್ಲ ಎಂದು ಹೇಳಿದರು.
RSS chief Mohan Bhagwat on Wednesday said today's conflict-ridden world needs Hinduism because it is a universal religion which teaches how to accept and manage diversity.
08-12-25 10:39 pm
Bangalore Correspondent
DK Shivakumar, Yathindras: ಡಿಸಿಎಂ ಡಿಕೆಶಿ ತಮಗೊ...
08-12-25 06:58 pm
ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಕೆಎಸ್ ಸಿಎ ನೂತನ...
08-12-25 11:26 am
Gangavati Accident, Koppal: ಪ್ರಿ ವೆಡ್ಡಿಂಗ್ ಶೂ...
07-12-25 10:21 pm
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
08-12-25 10:11 pm
Mangalore Correspondent
Mangalore, Puttur, Mahesh Shetty Timarodi: ಪ್...
08-12-25 04:52 pm
ಬಂಡವಾಳ ಇಲ್ಲದೆ ಆದಾಯದ ಅವಕಾಶ ; ಎಸ್ಸೆಸ್ಸೆಲ್ಸಿ, ಪಿ...
08-12-25 01:42 pm
ಮುಂದುವರಿದ ಇಂಡಿಗೋ ಬಿಕ್ಕಟ್ಟು ; ಮಂಗಳೂರಿನಲ್ಲಿ ಡಿ....
08-12-25 11:23 am
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ...
07-12-25 10:45 pm
08-12-25 09:29 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm